ಶಿಮ್ಲಾ: ಮದುವೆಗೆ ರಜೆ ನೀಡದ ಹಿನ್ನೆಲೆಯಲ್ಲಿ ವರ ಹಾಗೂ ವಧು ವಿಡಿಯೋ ಕಾಲ್ ನಲ್ಲಿ ಮದುವೆಯಾಗಿರುವ ಘಟನೆ ನಡೆದಿದೆ.
ಭಾರತೀಯ ಮೂಲದ ವ್ಯಕ್ತಿ ಟರ್ಕಿ (Turkey)ಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಅವರ ಮದುವೆ ನಿಶ್ಚಯವಾಗಿತ್ತು. ಬಾಸ್ ಮಾತ್ರ ರಜೆ ಕೊಡಲು ನಿರಾಕರಿಸಿದ್ದರು. ಹೀಗಾಗಿ ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ (Mandi) ವಧುವಿನೊಂದಿಗೆ ವಿಡಿಯೋ ಕಾಲ್ ಮೂಲಕ ವಿವಾಹವಾಗಿದ್ದಾರೆ.
ವಧುವಿನ ಅಜ್ಜನಿಗೆ ಅನಾರೋಗ್ಯದ ಹಿನ್ನೆಲೆ ವರನನ್ನು ಬೇಗ ಮದುವೆಯಾಗು ಎಂದು ವಧುವಿನ ಕುಟುಂಬಸ್ಥರು ಒತ್ತಾಯಿಸಿದ್ದರು. ಈ ಕಾರಣದಿಂದ ವರ ಮದುವೆಗಾಗಿ ತಮ್ಮ ಬಾಸ್ ಹತ್ತಿರ ರಜೆ ಕೇಳಿದ್ದರು. ಆದರೆ, ಇದಕ್ಕೆ ಬಾಸ್ ಮಾತ್ರ ಒಪ್ಪಿರಲಿಲ್ಲ. ಹೀಗಾಗಿ ಕುಟುಂಬಸ್ಥರೊಂದಿಗೆ ಚರ್ಚಿಸಿ ಆನ್ ಲೈನ್ ನಲ್ಲಿ ವಿವಾಹವಾಗಿದ್ದಾರೆ.
ಬಿಲಾಸ್ ಪುರದ ನಿವಾಸಿಯಾಗಿರುವ ವರ ಅದ್ನಾನ್ ಮುಹಮ್ಮದ್ ಅವರ ಕುಟುಂಬವು ಭಾನುವಾರ ಮಂಡಿಗೆ ತಲುಪಿದರು. ನಂತರ ಸೋಮವಾರ ವಿಡಿಯೋ ಕರೆಯ ಮೂಲಕ ವಿವಾಹವಾಗಿದ್ದು, ಖಾಜಿಯೊಬ್ಬರು ಕುಬೂಲ್ ಹೈ ಎಂದಾಗ ಮೂರು ಬಾರಿ ಹೇಳುವ ಮೂಲಕ ಧಾರ್ಮಿಕ ಕ್ರಿಯೆ ನಡೆಸಲಾಗಿದೆ.