ಮಡಿಕೇರಿ: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಪೊನ್ನಂಪೇಟೆ (Ponnamapete) ತಾಲೂಕಿನ ಚೆನ್ನಂಗಿ ಬಸವನಹಳ್ಳಿಯ ಹಾಡಿಯಲ್ಲಿ ಈ ದಾಳಿ ನಡೆದಿದೆ. ಹಾಡಿ ನಿವಾಸಿ ಜೆ.ಹೆಚ್ ಚಂದ್ರ ಎಂಬ ವ್ಯಕ್ತಿಯ ಮೇಲೆ ಆನೆ ದಾಲಿ ನಡೆಸಿದ್ದು, ವ್ಯಕ್ತಿಯ ಕೈ ಮುರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ನ. 14ರಂದು ರಾತ್ರಿ ಈ ಘಟನೆ ನಡೆದಿದೆ. ಚಂದ್ರ ಹಾಡಿ ಹತ್ತಿರದಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ. ಕೂಡಲೇ ಆತನನ್ನು ಮಡಿಕೇರಿ ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿದೆ.ವಿಷಯ ತಿಳಿದ ಬಳಿಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. ಆನೆಗಳ ಉಪಟಳಕ್ಕೆ ಮುಕ್ತಿ ನೀಡಬೇಕೆಂದು ಜನರು ಮನವಿ ಮಾಡಿದ್ದಾರೆ.








