ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತಿವೆ ಎಂಬ ಸುದ್ದಿ ಬಡವರ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ಕೂಡ ನೀಡಿದ್ದಾರೆ. ಸಾಮಾನ್ಯರ ಕಾರ್ಡ್ ಗಳು ರದ್ದಾಗುತ್ತಿಲ್ಲ. ಅನರ್ಹರ ಕಾರ್ಡ್ ಗಳನ್ನು ಮಾತ್ರ ರದ್ದು ಮಾಡಲಾಗುತ್ತಿದೆ ಎಂದು ಹೇಳಿದ್ದರು. ಅದರಂತೆ ಈಗ ಸರ್ಕಾರಿ ನೌಕರಿ ಮಾಡುತ್ತಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದವರ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ.
ಕಲಬುರಗಿ (Kalaburagi) ಜಿಲ್ಲೆಯಲ್ಲಿ 360, ಉಡುಪಿಯಲ್ಲಿ (Udupi) 13 ಕಾರ್ಡ್ ಗಳು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಕೋಲಾರ – 80, ಧಾರವಾಡ – 48, ಉತ್ತರ ಕನ್ನಡ – 45, ಮಂಡ್ಯ – 36, ದಾವಣಗೆರೆ 34, ಚಿತ್ರದುರ್ಗ – 32, ಚಿಕ್ಕಬಳ್ಳಾಪುರ – 31, ಕೊಡಗು – 27, ಚಿಕ್ಕಮಗಳೂರು – 17, ಉಡುಪಿ – 13.
ಕಲಬುರಗಿ – 360, ಬಾಗಲಕೋಟೆ – 196, ದಕ್ಷಿಣ ಕನ್ನಡ – 189, ವಿಜಯಪುರ – 171, ಬಳ್ಳಾರಿ – 168, ಬೀದರ್ – 146, ಹಾಸನ – 102, ಹಾವೇರಿ – 100, ರಾಯಚೂರು- 96, ಚಾಮರಾಜನಗರ – 93, ರಾಮನಗರ – 93 ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ.








