ತಮಿಳು ಚಿತ್ರರಂಗದಲ್ಲಿ ನಟ ಧನುಷ್ ಮತ್ತು ಲೇಡಿ ಸೂಪರ್ ಸ್ಟಾರ್ ನಯನತಾರಾ ನಡುವಿನ ಮನಸ್ತಾಪ ಬಟಾಬಯಲಾಗಿದೆ. ನಯನತಾರಾ ಅವರು ಇತ್ತೀಚೆಗೆ ‘ಬಿಯಾಂಡ್ ದಿ ಫೇರಿಟೇಲ್’ ಎಂಬ ವಿವಾದದ ಕುರಿತು ಪತ್ರ ಬರೆದಿದ್ದು, ಧನುಷ್ ಅವರ ವಿರುದ್ಧ ಗಂಭೀರ ಆರೋಪ ಮಾಡಿರುವುದು ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ನಯನತಾರಾ ಅವರ ಪ್ರಕಾರ, 3 ಸೆಕೆಂಡ್ ಹಾಡು ಬಳಸಲು ಧನುಷ್ 10 ಕೋಟಿ ರೂ. ಪಾವತಿಸುವಂತೆ ಕೇಳಿದ್ದಾರೆ. ಇದರಿಂದಾಗಿ, ಇಬ್ಬರ ನಡುವಿನ ಸ್ನೇಹದ ನಂಟು ಹಳಸಿದ್ದು, ಈ ಕುರಿತು ನಯನತಾರಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನಯನತಾರಾ ಅವರು ಸ್ನೇಹಕ್ಕಾಗಿ ಫ್ರೀಯಾಗಿ ಸಿನಿಮಾಗಳನ್ನು ಮಾಡಿದ್ದಾರೆಂದು ಒಂದು ಸಂದರ್ಶನದಲ್ಲಿ ಧನುಷ್ ಅವರೇ ಹೇಳಿಕೊಂಡಿದ್ದರು.
ಈ ಘಟನೆ ತಮಿಳು ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳು ಕೂಡ ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.








