ಬೇಕಾಗುವ ಸಾಮಾನುಗಳು:
500 ಗ್ರಾಂ ಚಿಕನ್
1/4 ಕಪ್ ಸೋಯಾ ಸಾಸ್
1 ಟೀಸ್ಪೂನ್ ವಿನೆಗರ್
1 ಟೀಸ್ಪೂನ್ ಟೊಮ್ಯಾಟೊ ಕೇಚಪ್
1 ಟೀಸ್ಪೂನ್ ಮೆಣಸಿನಪುಡಿ
1 ಟೀಸ್ಪೂನ್ ಬೆಳ್ಳುಳ್ಳಿ ಪೇಸ್ಟ್
1/4 ಟೀಸ್ಪೂನ್ ಉಪ್ಪು
1/4 ಕಪ್ ಕಾರ್ನ್ ಫ್ಲೋರ್
2 ಟೇಬಲ್ಸ್ಪೂನ್ ಮೈದಾ
2 ಟೇಬಲ್ಸ್ಪೂನ್ ಅಕ್ಕಿ ಹಿಟ್ಟು
1 ಮೊಟ್ಟೆ
1 ಟೀಸ್ಪೂನ್ ಶುಂಠಿ ಪೇಸ್ಟ್
ಎಣ್ಣೆ (ಹುರಿಯಲು)
ತಯಾರಿಸುವ ವಿಧಾನ:
( food recipe – chicken lollipop recipe in Kannada )
ಒಂದು ದೊಡ್ಡ ಬೌಲಿನಲ್ಲಿ ಚಿಕನ್, ಸೋಯಾ ಸಾಸ್, ವಿನೆಗರ್, ಟೊಮ್ಯಾಟೊ ಕೇಚಪ್, ಮೆಣಸಿನ ಪುಡಿ, ಬೆಳ್ಳುಳ್ಳಿ ಪೇಸ್ಟ್, ಶುಂಠಿ ಪೇಸ್ಟ್ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ. 30 ನಿಮಿಷದಿಂದ 1 ಗಂಟೆವರೆಗೆ ಫ್ರಿಜ್ನಲ್ಲಿ ನೆನೆಯಲು ಇಡಿ.
ಇನ್ನೊಂದು ಬೌಲಿನಲ್ಲಿ ಕಾರ್ನ್ ಫ್ಲೋರ್, ಮೈದಾ, ಅಕ್ಕಿ ಹಿಟ್ಟು ಮತ್ತು ಮೊಟ್ಟೆ ಹಾಕಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಮಿಶ್ರಣವನ್ನು ತಯಾರಿಸಿ. ನೆನೆಸಿದ ಚಿಕನ್ ತುಂಡುಗಳನ್ನು, ತಯಾರಿಸಿದ ಮಿಶ್ರಣದಲ್ಲಿ ಮುಳುಗಿಸಿ.
ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ.ಮಧ್ಯಮ ತಾಪಮಾನದಲ್ಲಿ ಎಣ್ಣೆಯನ್ನು ಬಿಸಿ ಮಾಡಿ.
ನಂತರ ಮಸಾಲೆ ಮಿಶ್ರಿತ ಚಿಕನ್ ನ್ನು ಒಂದೊಂದೇ ಹಾಕಿ 6-8 ನಿಮಿಷ ಹುರಿದು, ಚಿಕನ್ ಗೋಲ್ಡನ್ ಬಣ್ಣಕ್ಕೆ ಬಂದಾಗ ತೆಗೆಯಿರಿ. ರುಚಿಕರವಾದ ಚಿಕನ್ ಲಾಲಿಪಾಪ್ ಅನ್ನು ಪೇಪರ್ ಟವೆಲ್ ಮೇಲೆ ಇಟ್ಟು ಹೆಚ್ಚುವರಿ ಎಣ್ಣೆಯನ್ನು ತೆಗೆಯಿರಿ. ಚಿಕನ್ ಲಾಲಿಪಾಪ್ ಅನ್ನು ಟೊಮ್ಯಾಟೊ ಸಾಸ್ ಅಥವಾ ಚಿಲ್ಲಿ ಸಾಸ್ ಜೊತೆಗೆ ಬಿಸಿಬಿಸಿಯಾಗಿ ಸವಿಯಿರಿ.