ಸಚಿನ್ ಮೊದಲ ಎಸೆತವನ್ನು ಎದುರಿಸಲು ಹಿಂದೇಟು ಹಾಕುತ್ತಿರುವುದಕ್ಕೆ ಆ ನಂಬಿಕೆನೇ ಕಾರಣಾನಾ ?
ಸಚಿನ್ ತೆಂಡುಲ್ಕರ್.. ವಿಶ್ವ ಕ್ರಿಕೆಟ್ ನಲ್ಲಿ ಮಾಡಿರದಂತಹ ದಾಖಲೆಗಳೇ ಇಲ್ಲ. ಪ್ರತಿಯೊಂದು ಪಂದ್ಯಗಳಲ್ಲೂ ಒಂದಲ್ಲ ಒಂದು ರೀತಿಯ ದಾಖಲೆಗಳನ್ನು ನಿರ್ಮಿಸುತ್ತಿದ್ದ ಸಚಿನ್ ಕ್ರಿಕೆಟ್ ಜಗತ್ತಿನಲ್ಲಿ ಕ್ರಿಕೆಟ್ ದೇವ್ರು ಅಂತನೇ ಕರೆಸಿಕೊಂಡ್ರು. ಆದರೆ ಸಚಿನ್ ಇಷ್ಟೆಲ್ಲಾ ದಾಖಲೆಗಳು, ಸಾಮಥ್ರ್ಯ, ಪ್ರತಿಭೆಗಳಿದ್ರೂ ಇನಿಂಗ್ಸ್ ನ ಮೊದಲ ಎಸೆತವನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದರು.
ಹಾಗಿದ್ರೆ ಸಚಿನ್‍ಗೆ ಮೊದಲ ಎಸೆತವನ್ನು ಎದುರಿಸಲು ಭಯವಿತ್ತಾ ? ಖಂಡಿತ ಇರಲಿಲ್ಲ. ಭಯವಿರುತ್ತಿದ್ರೆ ಸಚಿನ್ ವಿಶ್ವ ಕ್ರಿಕೆಟ್ ನಲ್ಲಿ 24 ವರ್ಷಗಳ ಕಾಲ ಆಡಲು ಸಾಧ್ಯವಿತ್ತಾ ಅಲ್ವಾ… ಹಾಗಿದ್ರೆ ಇದಕ್ಕೆ ಕಾರಣ ಏನು ? ಈ ಬಗ್ಗೆ ಸಚಿನ್ ಒಡನಾಡಿ ಸೌರವ್ ಗಂಗೂಲಿ ಬಹಳ ಸ್ವಾರಸ್ಯಕರವಾಗಿ ಹೇಳುತ್ತಾರೆ.
ಅಂದ ಹಾಗೇ ವಿಶ್ವ ಕ್ರಿಕೆಟ್ ನಲ್ಲಿ ಸಚಿನ್ ಮತ್ತು ಗಂಗೂಲಿ ಜೋಡಿ ಮೋಡಿ ಮಾಡಿದಷ್ಟು ಬೇರೆ ಯಾವ ಜೋಡಿಯೂ ಮಾಡಿರಲಿಲ್ಲ. ಜೋಡೆತ್ತುಗಳಂತೆ ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸುತ್ತಿದ್ದ ಸೌರವ್ ಮತ್ತು ಸಚಿನ್ ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಿರುತ್ತಿದ್ದರು. ಆಕ್ರಮಣಕಾರಿ ಪ್ರವೃತ್ತಿಯ ಆಟದ ಮೂಲಕವೇ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುತ್ತಿದ್ದ ಈ ಜೋಡಿ ಅದೆಷ್ಟೋ ಗೆಲುವುಗಳಿಗೂ ಸಾಕ್ಷಿಯಾಗಿವೆ.
ಆದ್ರೆ ಸಚಿನ್ ಮತ್ತು ಗಂಗೂಲಿ ಇನಿಂಗ್ಸ್ ಆರಂಭಿಸುತ್ತಿದ್ದಾಗ ಸಚಿನ್ ಯಾವಾಗಲೂ ನಾನ್ ಸ್ಟ್ರೈಕರ್ ನಲ್ಲಿರುತ್ತಿದ್ದರು. ಗಂಗೂಲಿಯೇ ಸ್ಟ್ರೈಕ್ ನಲ್ಲಿ ಆಡಬೇಕಾಗಿತ್ತು. ಕೆಲವೊಂದು ಬಾರಿ ಗಂಗೂಲಿ ಬೇಕು ಬೇಕು ಅಂತಗನೇ ನಾನ್ ಸ್ಟ್ರೈಕ್ ನಲ್ಲಿ ನಿಂತಿದ್ದರೂ ಸಚಿನ್ ಗಂಗೂಲಿಯ ಮನಸ್ಸನ್ನು ಗೆಲ್ಲಿಸಿ ನಾನ್ ಸ್ಟ್ರೈಕ್ ನಲ್ಲಿ ಇರುತ್ತಿದ್ದರು. ಕೊನೆಗೆ ಗಂಗೂಲಿಯೇ ಸ್ಟ್ರೈಕ್ ನಲ್ಲಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದರು.
ಮಾಯಾಂಕ್ ಅಗರ್‍ವಾಲ್ ಜೊತೆಗಿನ ಕಾರ್ಯಕ್ರಮವೊಂದರಲ್ಲಿ ಸಚಿನ್ ಯಾಕೆ ಇನಿಂಗ್ಸ್ ಆರಂಭಿಸುತ್ತಿರಲಿಲ್ಲ.. ಯಾವಾಗಲೂ ನಾನ್ ಸ್ಟ್ರೈಕ್ ನಲ್ಲೇ ಯಾಕೆ ನಿಲ್ಲುತ್ತಿದ್ದರು.. ಸಚಿನ್ ಕೊಡುತ್ತಿದ್ದ ಉತ್ತರವೇನು.. ಸಚಿನ್ ಅವರಲ್ಲಿದ್ದ ಎರಡು ಆಸಕ್ತಿದಾಯಕವಾದ ಸಿದ್ಧ ಉತ್ತರಗಳೇನು ? ಸಚಿನ್ ಯಾವ ನಂಬಿಕೆಯನ್ನಿಟ್ಟುಕೊಂಡಿದ್ದರು ಎಂಬುದನ್ನು ಗಂಗೂಲಿ ಬಹಿರಂಗಗೊಳಿಸಿದ್ದಾರೆ.
ಸಚಿನ್ ಯಾವಾಗಲೂ ನಾನ್ ಸ್ಟ್ರೈಕ್ ನಲ್ಲಿರುತ್ತಿದ್ದರು. ಅವರು ನನ್ನನ್ನೇ ಸ್ಟ್ರೈಕ್‍ನಲ್ಲಿ ಇರುವಂತೆ ಒತ್ತಾಯ ಕೂಡ ಮಾಡುತ್ತಿದ್ದರು, ಯಾಕಂದ್ರೆ ಅದು ಅವರ ನಂಬಿಕೆಯಾಗಿತ್ತು. ಹಾಗೇ ಅವರು ಕೊಡುತ್ತಿದ್ದ ಎರಡು ಕಾರಣಗಳು ಸಹ ಆಸಕ್ತಿದಾಯಕವಾಗಿರುತ್ತಿದ್ದವು. ಒಂದು, ಹಿಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ
ಅದೇ ಪ್ರದರ್ಶನವನ್ನು ನೀಡಲು ನಾನು ನಾನ್ ಸ್ಟ್ರೈಕ್ ನಲ್ಲಿರುತ್ತೇನೆ ಎಂದು ಹೇಳುತ್ತಿದ್ದರು. ಹಾಗೇ ಎರಡನೇಯದ್ದು, ಕೆಟ್ಟ ಫಾರ್ಮ್‍ನಲ್ಲಿದ್ದಾಗ, ನನ್ನ ಮೇಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನಾನು ನಾನ್ ಸ್ಟ್ರೈಕ್ ನಲ್ಲಿರುತ್ತೇನೆ ಎಂಬ ಸಿದ್ಧ ಉತ್ತರಗಳು ಅವರಲ್ಲಿರುತ್ತಿತ್ತು ಎಂದು ಗಂಗೂಲಿ ನಗುತ್ತಾನೇ ಹೇಳಿದ್ರು.
ಸಚಿನ್ ಮತ್ತು ಗಂಗೂಲಿ ವಿಶ್ವದ ಶ್ರೇಷ್ಠ ಆರಂಭಿಕ ಜೋಡಿಗಳಲ್ಲಿ ಒಂದಾಗಿದೆ. ನಂತರದ ದಿನಗಳಲ್ಲಿ ಗಂಗೂಲಿ ನಾಯಕನಾಗಿ ತಂಡದ ಹಿತಕ್ಕಾಗಿ ತನ್ನ ಆರಂಭಿಕ ಸ್ಥಾನವನ್ನು ಸೆಹ್ವಾಗ್‍ಗೆ ಬಿಟ್ಟುಕೊಟ್ರು.








