ಬೇಕಾಗುವ ಸಾಮಗ್ರಿಗಳು
ಅಕ್ಕಿ ರವೆ – 1 ಕಪ್
ಬಾದಾಮಿ – ಸ್ವಲ್ಪ
ಗೋಡಂಬಿ – ಸ್ವಲ್ಪ
ಕುಂಬಳ ಬೀಜ – ಸ್ವಲ್ಪ
ಒಣದ್ರಾಕ್ಷಿ – ಸ್ವಲ್ಪ
ಸಿಹಿ ಕುಂಬಳಕಾಯಿ – 1 ಸಣ್ಣ ತುಂಡು
ಬೆಲ್ಲದ ಪುಡಿ – 3/4 ಕಪ್
ಏಲಕ್ಕಿ ಪುಡಿ – ಚಿಟಿಕೆ
ಹುರಿದ ಗಸಗಸೆ – 1 ಚಮಚ
ಬಿಳಿ ಎಳ್ಳು – 1 ಚಮಚ
ಹಸಿ ತೆಂಗಿನ ಕಾಯಿ – 1/4 ಕಪ್
ತುಪ್ಪ – 1 ಟೀ ಸ್ಪೂನ್
ಹಾಲು – ಸ್ವಲ್ಪ
ಮಾಡುವ ವಿಧಾನ
1. ಅಕ್ಕಿ ರವೆಯನ್ನು ಹುರಿದು 3 ಗಂಟೆ ನೆನಸಿಡಿ.
2. ಒಂದು ಬಾಣಲಿಗೆ ಸ್ವಲ್ಪ ತುಪ್ಪ ಹಾಕಿ, ಅದಕ್ಕೆ ಬಾದಾಮಿ, ಗೋಡಂಬಿ, ಕುಂಬಳ ಬೀಜ, ಒಣದ್ರಾಕ್ಷಿ ಹಾಕಿ ಹುರಿದು, ನಂತರ ತುರಿದ ಸಿಹಿ ಕುಂಬಳ ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ.
3. ನಂತರ ಅದಕ್ಕೆ ಬೆಲ್ಲದ ಪುಡಿ, ಏಲಕ್ಕಿ ಪುಡಿ, ಹುರಿದ ಗಸಗಸೆ, ಬಿಳಿ ಎಳ್ಳು, ಮತ್ತು ಹಸಿ ತೆಂಗಿನ ಕಾಯಿಯನ್ನು ಹಾಕಿ ಚೆನ್ನಾಗಿ ಕಲೆಹಾಕಿ.
4. ನೆನೆಸಿದ ಅಕ್ಕಿ ರವೆಯನ್ನು ಸೇರಿಸಿ, ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಬೆರೆಸಿ.
5. ಇಡ್ಲಿ ತಟ್ಟೆಯಲ್ಲಿ ಹಾಕಿ 10 ನಿಮಿಷ ಬೇಯಿಸಿದರೆ ರುಚಿಯಾದ ಸಿಹಿ ಕಡುಬು/ಇಡ್ಲಿ ರೆಡಿ.
6. ತುಪ್ಪದೊಂದಿಗೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಟಿಪ್ಸ್: ತುಪ್ಪ, ಬೆಲ್ಲ ಅಥವಾ ಜೇನಿನೊಂದಿಗೆ ಸೇವಿಸಿದರೆ ರುಚಿಯು ಇನ್ನೂ ಚೆನ್ನಾಗಿರುತ್ತದೆ.