ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. 5 ದಿನಗಳ ಈ ಪ್ರವಾಸ ಮುಗಿಸಿದ ಶುಕ್ರವಾರ ಮರಳಿ ದೇಶಕ್ಕೆ ಮರಳಿದ್ದಾರೆ. ಈ ವೇಳೆ ಪ್ರಧಾನಿಯವರಿಗೆ ಹಲವು ಉನ್ನತ ಗೌರವಗಳೊಂದಿಗೆ ಉಡುಗೊರೆಯನ್ನೂ ಆಯಾ ದೇಶಗಳು ನೀಡಿವೆ. ಪ್ರಧಾನಿ ಮೋದಿ ಅವರು ಕೂಡ ವಿಶೇಷ ಉಡುಗೊರೆ ನೀಡಿದ್ದಾರೆ.
ಗಯಾನಾ (Guyana) ಭೇಟಿ ನೀಡಿದ್ದ ಪ್ರಧಾನಿ ಮೋದಿ (PM Modi) ಅಧ್ಯಕ್ಷ ಇರ್ಫಾನ್ ಅಲಿಗೆ (Mohamed Irfaan Ali) ಚನ್ನಪಟ್ಟಣ ಗೊಂಬೆಯನ್ನು (Channapatna Doll) ಉಡುಗೊರೆಯಾಗಿ ನೀಡಿದ್ದು, ಕನ್ನಡಿಗರ ಸಂತಸಕ್ಕೆ ಕಾರಣವಾಗಿದೆ.
5 ದಿನಗಳ ಕಾಲ ಮೂರು ದೇಶಗಳ ಪ್ರವಾಸವನ್ನು ಮೋದಿ ನಡೆಸಿದ್ದರು. ಪ್ರಧಾನಿ ಮೋದಿ ಗಯಾನಾ, ಬೆಜ್ರಿಲ್ ಹಾಗೂ ನೈಜೀರಿಯಾ ಪ್ರವಾಸ ಮಾಡಿದ್ದು, ಒಟ್ಟು 31 ನಾಯಕರನ್ನು ಭೇಟಿ ಮಾಡಿ, ಹಲವಾರು ವಿಶೇಷ ಮಾತುಕತೆಗಳನ್ನು ನಡೆಸಿದ್ದಾರೆ.
ಭೇಟಿಯಾದ ಗಣ್ಯರಿಗೆ ಭಾರತದ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಉಡುಗೊರೆಗಳನ್ನು ನೀಡಿದ್ದಾರೆ. ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರ ಮಗ ಲಿಲನ್ ಅಲಿಗೆ ಗೊಂಬೆಗಳಿಗೆ ಪ್ರಸಿದ್ಧವಾದ ಕರ್ನಾಟಕದ ಚನ್ನಪಟ್ಟಣದ ಮರದ ಆಟಿಕೆ ರೈಲನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮಹಾರಾಷ್ಟ್ರದ 8, ಜಮ್ಮು ಕಾಶ್ಮೀರದಿಂದ 5, ತಮಿಳುನಾಡು, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಲಡಾಖ್ನ ತಲಾ ಒಂದೊಂದು ಉಡುಗೊರೆಗಳನ್ನು ಪ್ರಧಾನಿ ಮೋದಿ ವಿವಿಧ ನಾಯಕರಿಗೆ ನೀಡಿದ್ದಾರೆ.








