ಅದಾನಿ ಗ್ರೂಪ್ ಮತ್ತು ಅಮೆರಿಕದ ನ್ಯಾಯಾಂಗ ಇಲಾಖೆಯನ್ನು ಒಳಗೊಂಡಿರುವ ಕಾನೂನು ಪ್ರಕ್ರಿಯೆಗಳ ಕುರಿತು ಭಾರತ ಸರ್ಕಾರ ಯಾವುದೇ ಪೂರ್ವ ಸೂಚನೆ ಅಥವಾ ಸಂವಹನವನ್ನು ಸ್ವೀಕರಿಸಿಲ್ಲ ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿದೆ.
ಇದರ ಮಧ್ಯೆ, ಅದಾನಿ ಗ್ರೂಪ್ ಎದುರಿಸುತ್ತಿರುವ ಆರೋಪಗಳು ಮತ್ತು ಕಾನೂನು ತನಿಖೆಗಳ ಬಗ್ಗೆ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ಮುಂದುವರಿಯುತ್ತಿವೆ. ಆದರೆ, ಅಮೆರಿಕದ ನ್ಯಾಯಾಂಗ ಇಲಾಖೆ ಅಥವಾ ಯಾವುದೇ ಅಧಿಕಾರಿಗಳು ಭಾರತ ಸರ್ಕಾರವನ್ನು ಈ ಸಂಬಂಧ ಸಂಪರ್ಕಿಸಿದ್ದಾರೆ ಎಂಬುದಾಗಿ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.
ಇದು ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಯುಎಸ್ ನ್ಯಾಯಾಂಗ ಇಲಾಖೆಯನ್ನು ಒಳಗೊಂಡಿರುವ ಕಾನೂನು ವಿಷಯವಾಗಿದೆ. ಸ್ಥಾಪಿತ ಕಾರ್ಯವಿಧಾನಗಳು ಮತ್ತು ಕಾನೂನು ಮಾರ್ಗಗಳನ್ನು ಅನುಸರಿಸುವ ನಿರೀಕ್ಷೆಯಿದೆ. ಈ ಕುರಿತ ಭಾರತ ಸರ್ಕಾರಕ್ಕೆ ಮುಂಚಿತವಾಗಿ ತಿಳಿಸಿಲ್ಲವೆಂದು MEA ವಕ್ತಾರ ರಣಧೀರ್ ಜೈಸ್ವಾಲ್ ಅವರು ತಿಳಿಸಿದ್ದಾರೆ.
ಈ ವಿಷಯದ ಸಂಬಂಧ ಭಾರತ-ಅಮೆರಿಕಾ ಸಂಬಂಧಗಳ ಮೇಲೆ ಯಾವುದೇ ಪರಿಣಾಮವಿರುವುದಿಲ್ಲ ಎಂಬುದಾಗಿ ಸಚಿವಾಲಯ ಹೇಳಿರುವುದು ಗಮನಾರ್ಹವಾಗಿದೆ.