ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ”ನಾವು ಹಾಗೂ ಎಚ್ ಡಿ ದೇವೇಗೌಡರು ಜೆಡಿಎಸ್ ಪಕ್ಷ ಕಟ್ಟುವ ಸಮಯದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಇರಲೇ ಇಲ್ಲ” ಎಂದು ಹೇಳಿದ್ದಾರೆ. ಅವರು “ಜೆಡಿಎಸ್ನಿಂದ ಹೊರ ಹಾಕಿದ ನಂತರ ಅಹಿಂದ ಸಮಾವೇಶ ಶುರು ಮಾಡಲಾಗಿದೆ. ಇನ್ಮುಂದೆ ಅವರು ಪಕ್ಷವನ್ನು ಬಿಟ್ಟರು ಎಂದು ಹೇಳಬೇಡಿ” ಎಂದು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷವು ಜಾತ್ಯಾತೀತವಾಗಿರಲಿಲ್ಲ ಮತ್ತು ಈಗ ಅದು ಕೋಮುವಾದಿಗಳ ಜೊತೆ ಸೇರಿಕೊಂಡಿರುವುದಾಗಿ ವಾಗ್ದಾಳಿ ನಡೆಸಿದರು.








