ಬೆಂಗಳೂರು : ಜೆಡಿಎಸ್ ಎಂಎಲ್ ಸಿ ಬೋಜೆಗೌಡರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಈ ಹಿನ್ನೆಲೆ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರದ ನಿಯಮದ ಪ್ರಕಾರ ಬೋಜೆಗೌಡ 14 ದಿನ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾಗಿದೆ.
ಇತ್ತೀಚೆಗಷ್ಟೆ ಬೋಜೆಗೌಡರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಇದೀಗ ಅವರ ಕೊರೊನಾ ವರದಿ ಬಂದಿದ್ದು, ಸೋಂಕಿರುವುದು ದೃಢವಾಗಿದೆ. ಇನ್ನು ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಇದೇ ವೇಳೆ, ಬೋಜೇಗೌಡ ಅವರ ಕುಟುಂಬಕ್ಕೂ ಕೋವಿಡ್ -19 ಪರೀಕ್ಷೆ ಮಾಡಿಸಲಾಗಿದ್ದು, ಅವರ ವೈದ್ಯಕೀಯ ರಿಪೋರ್ಟ್ ಬರಬೇಕಿದೆ.








