ಬೆಟ್ಟದ ನೆಲ್ಲಿಕಾಯಿ ಚಟ್ನಿ: ಆರೋಗ್ಯಕರ ಮತ್ತು ರುಚಿಯಾದ ಟೇಸ್ಟಿ ಡಿಶ್. ಚಟ್ನಿ ತಯಾರಿಸುವುದು ಕೂಡ ಸುಲಭ.
ಬೇಕಾಗುವ ಸಾಮಗ್ರಿಗಳು
4-5 ಬೆಟ್ಟದ ನೆಲ್ಲಿಕಾಯಿ
1-2 ಹಸಿಮೆಣಸಿನಕಾಯಿ
2-3 ಟೇಬಲ್ ಸ್ಪೂನ್ ಹುರಿದು ಪುಡಿ ಮಾಡಿದ ಶೇಂಗಾ
2-3 ಟೇಬಲ್ ಸ್ಪೂನ್ ಪುಠಾಣಿ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಕೊತಂಬರಿ ಸೊಪ್ಪು
1 ಚಮಚ ಲಿಂಬೆರಸ
ವಿಧಾನ:
1. ಬೆಟ್ಟದ ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಹೆಚ್ಚಿ ಇಡಿ.
2. ಹೆಚ್ಚಿದ ನೆಲ್ಲಿಕಾಯಿ, ಹಸಿಮೆಣಸಿನಕಾಯಿ, ಹುರಿದು ಪುಡಿ ಮಾಡಿದ ಶೇಂಗಾ, ಪುಠಾಣಿ, ಉಪ್ಪು, ಕೊತಂಬರಿ ಸೊಪ್ಪು, ಮತ್ತು ನಿಂಬೆರಸ ಹಾಕಿ.
3. ಈ ಎಲ್ಲವನ್ನು ನೀರನ್ನು ಕೇವಲ ಅಗತ್ಯವಿದ್ದಷ್ಟೇ ಸೇರಿಸಿ, ಮೃದು ಪೇಸ್ಟ್ ಆಗುವವರೆಗೆ ರುಬ್ಬಿ.
4. ಚಟ್ನಿಯನ್ನು ಬಿಸಿ ಬಿಸಿ ಅನ್ನದ ಜೊತೆಗೆ ತುಪ್ಪ ಹಾಕಿ ಚೆನ್ನಾಗಿ ಕಲೆಸಿ ಸವಿಯಿರಿ.
ಈ ಚಟ್ನಿ ಅನ್ನದ ಜೊತೆಗೆ ಮಾತ್ರವಲ್ಲದೆ ದೋಸೆ, ಇಡ್ಲಿ, ಪಡ್ಡು ಜೊತೆ ಸೂಪರ್ ಕಾಂಬಿನೇಷನ್!
ಈ ಚಟ್ನಿಯನ್ನು ಒಂದು ಸಲ ತಯಾರಿಸಿ ನೋಡಿ, ಅದ್ಭುತ ರುಚಿಯ ಜೊತೆಗೆ ನಿಮ್ಮ ಆರೋಗ್ಯಕ್ಕೆ ಸಿಗುವ ಅದ್ಬುತ ಲಾಭವನ್ನು ಅನುಭವಿಸಿ!








