ಬೆಳಗ್ಗೆ ಗಡಿಬಿಡಿಯಲ್ಲಿ ರುಚಿಕರವಾದ ಪಲಾವ್ ಮಾಡುವುದು ಸಾಮಾನ್ಯವಾಗಿದೆ. ಪಲಾವ್ ಅನ್ನು ಬ್ರೇಕ್ಫಾಸ್ಟ್ಗೆ ಹಾಗೂ ಮಧ್ಯಾಹ್ನದ ಬಾಕ್ಸ್ಗೂ ಕೂಡ ಹಾಕಿಕೊಂಡು ಸವಿಯಬಹುದು. ಪಲಾವ್ ಅನ್ನು ಹಲವು ಬಗೆಯಲ್ಲಿ ಮಾಡಬಹುದು. ಪಲಾವ್ ಮಾಡುವ ವಿಧಾನಗಳು ಸರಳವಾಗಿದ್ದು, ಬೇಗನೆ ತಯಾರಿಸಬಹುದು. ಇದನ್ನು ಮೊಸರು, ಪಚಡಿ ಅಥವಾ ಪಲ್ಯ ಜೊತೆ ಸವಿಯಬಹುದು. ನಾವು ಇವತ್ತು ಗ್ರೀನ್ ಪೀಸ್ ಪಲಾವ್ ಹೇಗೆ ಮಾಡೋದು ತಿಳಿಯೋಣ
ಬೇಕಾಗುವ ಪದಾರ್ಥಗಳು:
ಅಕ್ಕಿ
ಹಸಿ ಬಟಾಣಿ
ಚಕ್ಕೆ
ಲವಂಗ
ಶುಂಠಿ
ಬೆಳ್ಳುಳ್ಳಿ
ಹಸಿ ಮೆಣಸು
ಕೊತ್ತಂಬರಿ ಸೊಪ್ಪು
ಮರಾಠಿ ಮೊಗ್ಗು
ಪಲಾವ್ ಎಲೆ
ಸೋಂಪು
ಕರಿಬೇವು
ಉಪ್ಪು
ಎಣ್ಣೆ ಅಥವಾ ತುಪ್ಪ
ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು ನೆನೆಸಿಡಿ.
ಮಿಕ್ಸಿ ಜಾರ್ನಲ್ಲಿ ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಸ್ವಲ್ಪ ನೀರು ಹಾಕಿ ರುಬ್ಬಿ.
ಒಲೆ ಮೇಲೆ ಕುಕ್ಕರ್ ಇಟ್ಟು, ಎಣ್ಣೆ ಹಾಕಿ, ಕರಿಬೇವು, ಮರಾಠಿ ಮೊಗ್ಗು, ಪಲಾವ್ ಎಲೆ, ಸೋಂಪು ಕಾಳು ಹಾಕಿ ಫ್ರೈ ಮಾಡಿ.
ಈರುಳ್ಳಿ ಉದ್ದವಾಗಿ ಕತ್ತರಿಸಿ, 1 ನಿಮಿಷ ಫ್ರೈ ಮಾಡಿ.
ರುಬ್ಬಿದ ಮಸಾಲೆ ಹಾಕಿ, ಹಸಿ ಬಟಾಣಿ ಸೇರಿಸಿ, 2 ನಿಮಿಷ ಕುದಿಸಿ.
ಅಕ್ಕಿ ಅಳತೆ ಪ್ರಕಾರ ನೀರು, ಉಪ್ಪು ಸೇರಿಸಿ, ಕುದಿಯಲು ಬಿಡಿ.
ಕುದಿಯಲು ಆರಂಭಿಸಿದಾಗ ಅಕ್ಕಿ ಹಾಕಿ, ಮಿಕ್ಸ್ ಮಾಡಿ, ಕುಕ್ಕರ್ ಮುಚ್ಚಿ,1 ಸೀಟಿ ಹೊಡೆಯಲು ಬಿಡಿ.ಮುಚ್ಚಳ ತೆಗೆದು ಮಿಕ್ಸ್ ಮಾಡಿ.
ರುಚಿಕರವಾದ ಗ್ರೀನ್ ಪೀಸ್ ಪಲಾವ್ ರೆಡಿಯಾಗಿದೆ








