ADVERTISEMENT
Tuesday, August 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಎಮ್.ಎಸ್. ಧೋನಿ… ನಂಬರ್…7… ಧೋನಿಯ ಕ್ರಿಕೆಟ್ ಬದುಕಿಗೆ ಸಂಗೀತದ ಸ್ಪರ್ಶ ನೀಡಿದ ಬ್ರೇವೋ…!

admin by admin
July 8, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಎಮ್.ಎಸ್. ಧೋನಿ… ನಂಬರ್…7… ಧೋನಿಯ ಕ್ರಿಕೆಟ್ ಬದುಕಿಗೆ ಸಂಗೀತದ ಸ್ಪರ್ಶ ನೀಡಿದ ಬ್ರೇವೋ…!

ಡ್ವೇನ್ ಬ್ರೇವೋ… ವೆಸ್ಟ್ ಇಂಡೀಸ್‍ನ ಆಲ್ ರೌಂಡರ್ ಕ್ರಿಕೆಟಿಗ. ಅಂದ ಹಾಗೇ ಡ್ವೇನ್ ಬ್ರೇವೋ ಅವರು ವೆಸ್ಟ್ ಇಂಡೀಸ್ ತಂಡದಷ್ಟೇ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರೀತಿಸುತ್ತಿದ್ದಾರೆ. ಬಹುಶಃ ವೆಸ್ಟ್ ಇಂಡೀಸ್ ತಂಡದ ನಾಯಕನನ್ನು ಎಷ್ಟು ಇಷ್ಟಪಡುತ್ತಾರೋ ಗೊತ್ತಿಲ್ಲ. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಜೀವಕ್ಕಿಂತ ಹೆಚ್ಚು ಇಷ್ಟಪಡುತ್ತಾರೆ. ಧೋನಿಯ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ.
ಈ ಅಭಿಮಾನಕ್ಕೆ ಪೂರಕವಾಗಿ ಡ್ವೇನ್ ಬ್ರೇವೋ ಅವರು, ಧೋನಿ ಹುಟ್ಟು ಹಬ್ಬಕ್ಕೆ ಹೊಸ ಹಾಡೊಂದನ್ನು ಸಂಯೋಜನೆ ಮಾಡಿದ್ದಾರೆ. ನಂಬರ್ 7 ಅನ್ನೋ ಟೈಟಲ್ ನಲ್ಲಿ ಹೊರಬಂದಿರುವ ಈ ಹಾಡನ್ನು ಧೋನಿ ಹುಟ್ಟುಹಬ್ಬದಂತೆ ಬಿಡುಗಡೆಯನ್ನು ಮಾಡಿದ್ದಾರೆ. ತಾನೇ ಗೀತೆ ಬರೆದು, ತಾನೇ ಹಾಡಿರುವ ಈ ಹಾಡಿನಲ್ಲಿ ಧೋನಿಯ ಕ್ರಿಕೆಟ್ ಬದುಕಿನ ಚಿತ್ರಣವನ್ನೇ ಅನಾರವಣಗೊಳಿಸಿದ್ದಾರೆ.
ರಾಂಚಿಯಲ್ಲಿ ಹುಟ್ಟಿ ಬೆಳೆದಿರುವ ಧೋನಿ, ಟೀಮ್ ಇಂಡಿಯಾಗೆ ಎಂಟ್ರಿ ಪಡೆಯುವುದಕ್ಕಿಂತ ಮುನ್ನ ಟಿಕೆಟ್ ಕಲೆಕ್ಟರ್ ಆಗಿದ್ದರು. ಆ ನಂತರ ಧೋನಿಯ ಬ್ಯಾಟಿಂಗ್ ವೈಖರಿ, 2007ರ ವಿಶ್ವಕಪ್ ಗೆಲುವು, 2011ರ ಏಕದಿನ ವಿಶ್ವಕಪ್ ಗೆಲುವು, 2013ರ ಚಾಂಪಿಯನ್ಸ್ ಟ್ರೋಫಿ ಗೆಲುವು, ನಂಬರ್ ವನ್ ಟೆಸ್ಟ್ ಶ್ರೇಯಾಂಕ, ಐಪಿಎಲ್ ಹೀಗೆ ಧೋನಿಯ ಕ್ರಿಕೆಟ್ ಬದುಕಿನ ಪ್ರಮುಖ ಘಟ್ಟಗಳನ್ನು ಹಾಡಿನ ಮೂಲಕ ಬಣ್ಣಿಸಿದ್ದಾರೆ.
ಇನ್ನು ಧೋನಿಯವರ ನೆಚ್ಚಿನ ಹೆಲಿಕಾಪ್ಟರ್ ಶಾಟ್ ಅನ್ನು ಕೂಡ ಬ್ರೇವೋ ಹಾಡಿನಲ್ಲಿ ಕೇಳಬಹುದಾಗಿದೆ. ಎಮ್.ಎಸ್. ಧೋನಿ ನಂಬರ್ 7.. ಟಿ-ಟ್ವೆಂಟಿ ಚಾಂಪಿಯನ್ , 2011 ವಿಶ್ವ ಚಾಂಪಿಯನ್ ಹೀಗೆ ಬ್ರೇವೋ ಅವರ ಹಾಡು ಶುರುವಾಗುತ್ತದೆ.
ಈ ಹಿಂದೆಯೂ ಬ್ರೇವೋ ಅವರು ಹಾಡಿನ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಸ್ಪೂರ್ತಿ ನೀಡಿದ್ದರು. ಚಾಂಪಿಯನ್ ಅನ್ನೋ ಅಲ್ಬಮ್ ಅನ್ನು ಬಿಡುಗಡೆ ಮಾಡಿದ್ದರು. ವೆಸ್ಟ್ ಇಂಡೀಸ್ ತಂಡ ಗೆಲುವಿನ ಸಂಭ್ರಮದಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿರುವುದನ್ನು ನಾವು ನೋಡಿದ್ದೇವೆ.
ಅಷ್ಟಕ್ಕೂ ಬ್ರೇವೋ ಮತ್ತು ಧೋನಿಯ ನಡುವೆ ಅಂತಹುದ್ದೊಂದು ಸ್ನೇಹವಿದೆ. ಸಿಎಸ್‍ಕೆ ತಂಡದ ಪರ ಆಡುವಾಗ ಧೋನಿಯನ್ನು ಬ್ರೇವೋ ಅವರು ಬಹಳ ಹತ್ತಿರದಿಂದ ನೋಡಿದ್ದಾರೆ. ಧೋನಿಯ ವ್ಯಕ್ತಿತ್ವವನ್ನು ತಿಳಿದುಕೊಂಡಿದ್ದಾರೆ. ಧೋನಿಯ ಮೇಲಿನ ಅಭಿಮಾನಕ್ಕಾಗಿ ಅವರ 39ನೇ ಹುಟ್ಟು ಹಬ್ಬಕ್ಕೆ ಬ್ರೇವೋ ಎಮ್.ಎಸ್. ಧೋನಿ.. ನಂಬರ್ 7 ಹಾಡನ್ನು ರಚಿಸಿ ಹಾಡಿದ್ದಾರೆ.

Related posts

ಬಿಜೆಪಿಯ ಭದ್ರಕೋಟೆ ಧೂಳೀಪಟ ಮಾಡಿದ ಪ್ರಶಾಂತ್ ಕಿಶೋರ್: ಮಣ್ಣು ಮುಕ್ಕಿದ ಬಿಜೆಪಿ ಮತ್ತು ಆರ್‌ಜೆಡಿ- ಬಂಕಿಪುರ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷಕ್ಕೆ ಭರ್ಜರಿ ವಿಜಯ

ಬಿಜೆಪಿಯ ಭದ್ರಕೋಟೆ ಧೂಳೀಪಟ ಮಾಡಿದ ಪ್ರಶಾಂತ್ ಕಿಶೋರ್: ಮಣ್ಣು ಮುಕ್ಕಿದ ಬಿಜೆಪಿ ಮತ್ತು ಆರ್‌ಜೆಡಿ- ಬಂಕಿಪುರ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷಕ್ಕೆ ಭರ್ಜರಿ ವಿಜಯ

August 4, 2026
ಸಚಿವ ಸ್ಥಾನ ತಪ್ಪಿದ ಬೆನ್ನಲ್ಲೇ ತನ್ವೀರ್ ಸೇಠ್ ಅಭಿಮಾನಿ ಆತ್ಮಹತ್ಯೆ ಯತ್ನ

ಸಚಿವ ಸ್ಥಾನ ತಪ್ಪಿದ ಬೆನ್ನಲ್ಲೇ ತನ್ವೀರ್ ಸೇಠ್ ಅಭಿಮಾನಿ ಆತ್ಮಹತ್ಯೆ ಯತ್ನ

August 4, 2026
Tags: bccicskDwayne BravoICCIPLM.S Dhoniteam india
ShareTweetSendShare
Join us on:

Related Posts

ಬಿಜೆಪಿಯ ಭದ್ರಕೋಟೆ ಧೂಳೀಪಟ ಮಾಡಿದ ಪ್ರಶಾಂತ್ ಕಿಶೋರ್: ಮಣ್ಣು ಮುಕ್ಕಿದ ಬಿಜೆಪಿ ಮತ್ತು ಆರ್‌ಜೆಡಿ- ಬಂಕಿಪುರ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷಕ್ಕೆ ಭರ್ಜರಿ ವಿಜಯ

ಬಿಜೆಪಿಯ ಭದ್ರಕೋಟೆ ಧೂಳೀಪಟ ಮಾಡಿದ ಪ್ರಶಾಂತ್ ಕಿಶೋರ್: ಮಣ್ಣು ಮುಕ್ಕಿದ ಬಿಜೆಪಿ ಮತ್ತು ಆರ್‌ಜೆಡಿ- ಬಂಕಿಪುರ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷಕ್ಕೆ ಭರ್ಜರಿ ವಿಜಯ

by Shwetha
August 4, 2026
0

ಪಾಟ್ನಾ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷ ಬಿಹಾರ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದೆ. ಬಿಜೆಪಿಯ ಅಭೇದ್ಯ ಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಬಂಕಿಪುರ...

ಸಚಿವ ಸ್ಥಾನ ತಪ್ಪಿದ ಬೆನ್ನಲ್ಲೇ ತನ್ವೀರ್ ಸೇಠ್ ಅಭಿಮಾನಿ ಆತ್ಮಹತ್ಯೆ ಯತ್ನ

ಸಚಿವ ಸ್ಥಾನ ತಪ್ಪಿದ ಬೆನ್ನಲ್ಲೇ ತನ್ವೀರ್ ಸೇಠ್ ಅಭಿಮಾನಿ ಆತ್ಮಹತ್ಯೆ ಯತ್ನ

by Shwetha
August 4, 2026
0

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ 19 ನೂತನ ಸಚಿವರ ಸೇರ್ಪಡೆಯಾಗಿದೆ. ಆದರೆ ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ...

ಪೊಲೀಸ್ ನೇಮಕಾತಿ ಗೊಂದಲ- 25 ದಿನ ಉಪವಾಸ ಕೂರಲಿ, ಲಾಠಿ ಚಾರ್ಜ್ ಆಗಲಿ, ಆಮೇಲೆ ರಾಜೀನಾಮೆ ಕೊಡ್ತೀನಿ: ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಪೊಲೀಸ್ ನೇಮಕಾತಿ ಗೊಂದಲ- 25 ದಿನ ಉಪವಾಸ ಕೂರಲಿ, ಲಾಠಿ ಚಾರ್ಜ್ ಆಗಲಿ, ಆಮೇಲೆ ರಾಜೀನಾಮೆ ಕೊಡ್ತೀನಿ: ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

by Shwetha
August 4, 2026
0

ಬೆಂಗಳೂರು: ಪೊಲೀಸ್ ನೇಮಕಾತಿ ಪರೀಕ್ಷೆಯ ಗೊಂದಲಗಳ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪರೀಕ್ಷಾ ಅಕ್ರಮ...

ಚಾಮುಂಡೇಶ್ವರಿಗೆ ಮಡಿಲಕ್ಕಿ ಸೇವೆ ಸಲ್ಲಿಸಿದ ಶಾಸಕ ಇಕ್ಬಾಲ್ ಹುಸೇನ್

ಚಾಮುಂಡೇಶ್ವರಿಗೆ ಮಡಿಲಕ್ಕಿ ಸೇವೆ ಸಲ್ಲಿಸಿದ ಶಾಸಕ ಇಕ್ಬಾಲ್ ಹುಸೇನ್

by Shwetha
August 4, 2026
0

ರಾಮನಗರದ ಐತಿಹಾಸಿಕ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದ್ದಾರೆ. ಕರಗ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ದೇವಿಗೆ ಮಡಿಲಕ್ಕಿ ಸೇವೆ ಸಲ್ಲಿಸಿ ವಿಶೇಷ ಪೂಜೆ...

ಇಡಿ ಕಳುಹಿಸಿ ತನಿಖೆ ಮಾಡಿಸಿ- ದಾಖಲೆ ತೋರಿಸಲು ನಾನು ಸಿದ್ಧ ಮೋದಿ ಸಿದ್ಧರಾ? ನನ್ನ ದಾಖಲೆ ನೋಡಿ ನಿಮ್ಮ ಪದವಿ ತೋರಿಸಿ ಎಂದ ಅಭೀಜಿತ್ ದೀಪ್ಕೆ

ಇಡಿ ಕಳುಹಿಸಿ ತನಿಖೆ ಮಾಡಿಸಿ- ದಾಖಲೆ ತೋರಿಸಲು ನಾನು ಸಿದ್ಧ ಮೋದಿ ಸಿದ್ಧರಾ? ನನ್ನ ದಾಖಲೆ ನೋಡಿ ನಿಮ್ಮ ಪದವಿ ತೋರಿಸಿ ಎಂದ ಅಭೀಜಿತ್ ದೀಪ್ಕೆ

by Shwetha
August 4, 2026
0

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಯ ಕುರಿತಾದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭೀಜಿತ್ ದೀಪ್ಕೆ ಅವರು ಪ್ರಧಾನಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram