ಈರುಳ್ಳಿ ಪಕೋಡ
ಬೇಕಾಗುವ ಸಾಮಗ್ರಿಗಳು:
ಚಿರೋಟಿ ರವೆ – 2 ಟೀ ಚಮಚ
ಈರುಳ್ಳಿ – 2
ಹಸಿ ಮೆಣಸಿನಕಾಯಿ – 2(ಚೂರು ಮಾಡಿದ್ದು)
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ಜೀರಿಗೆ -1/2ಟೀಚಮಚ
ಕರಿ ಬೇವು – 6ರಿಂದ 7 ಎಲೆಗಳು
ಕಡಲೆ ಹಿಟ್ಟು – 1 cup
ಉಪ್ಪು (ರುಚಿಗೆ ತಕ್ಕಷ್ಟು)
ಬಿಸಿ ನೀರು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ (ಕರಿಯಲು)
ಇಂಗು ಚಿಟಿಕೆ
ಮಾಡುವ ವಿಧಾನ:
1. ಮೊದಲಿಗೆ ಚಿರೋಟಿ ರವೆಯನ್ನು ಹುರಿದುಕೊಳ್ಳಿ.
ಈ ಹುರಿದ ರವೆಗೆ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಚೂರು ಮಾಡಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಇಂಗು ಮತ್ತು ಕರಿ ಬೇವು ಸೇರಿಸಿ.
ಇದಕ್ಕೆ ಕಡಲೆ ಹಿಟ್ಟು ಮತ್ತು ಉಪ್ಪು ಸೇರಿಸಿ.
2. ಅಗತ್ಯವಿರುವಷ್ಟು ನೀರು ಸೇರಿಸಿ ಪಕೋಡಗಳ ಮಿಶ್ರಣಕ್ಕೆ ಸರಿಯಾದ ಸಾಂದ್ರತೆ ಬರುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ.
3. ಕಾದ ಎಣ್ಣೆಗೆ ಮಿಶ್ರಣವನ್ನು ಸಣ್ಣ ತುಂಡುಗಳಾಗಿ ಹಾಕಿ, ಸಣ್ಣ ಉರಿಯಲ್ಲಿ ಕರಿಯಿರಿ.
ಪಕೋಡಗಳು ಬಂಗಾರದ ಬಣ್ಣಕ್ಕೆ ಬದಲಾದಾಗ ಎಣ್ಣೆಯಿಂದ ಹೊರಗೆ ತೆಗೆಯಿರಿ
4. ಗರಿಗರಿಯಾದ ಈರುಳ್ಳಿ ಪಕೋಡಗಳನ್ನು ಹಸಿ ಚಟ್ನಿ ಅಥವಾ ಟೊಮಾಟೋ ಸಾಸ್ ಜೊತೆಗೆ ಸವಿಯಿರಿ.
ಟಿಪ್ಸ್:
ಪಕೋಡಗಳನ್ನು ಕರಿಯಲು ಎಣ್ಣೆಯನ್ನು ಸರಿಯಾಗಿ ಕಾಯಿಸಿ.
ಪಕೋಡಕ್ಕೆ ಚೆನ್ನಾಗಿ ಹುರಿದ ರವೆ ಬಳಸುವುದು ಉತ್ತಮ.