ಸೂಪರಾಗಿ ಬ್ರೆಡ್ ಸ್ಯಾಂಡ್ವಿಚ್ ಮನೆಯಲ್ಲಿ ಮಾಡಿ(Bread Sandwich )
ಬೇಕಾಗುವ ಸಾಮಾನುಗಳು:
ಬ್ರೆಡ್: 4 ಸ್ಲೈಸ್
ಕಡಲೆಹಿಟ್ಟು: 1 ಕಪ್
ಈರುಳ್ಳಿ: 1
ಟೊಮೇಟೊ: 1
ಹಸಿರು ಮೆಣಸು: 1
ಕ್ಯಾಬೇಜ್: 1/4
ಕೊತ್ತಂಬರಿ ಸೊಪ್ಪು: ಸ್ವಲ್ಪ
ಕ್ಯಾರೆಟ್: 1
ಖಾರದ ಪುಡಿ: 1/2 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಗರಂ ಮಸಾಲಾ: 1/2 ಚಮಚ
ಚಾಟ್ ಮಸಾಲಾ: 1/2 ಚಮಚ
ಎಣ್ಣೆ: ಕರಿಯಲು
ಮಾಡುವ ವಿಧಾನ:
1. ಮೊದಲಿಗೆ ಬ್ರೆಡ್ ನ ಸೈಡು ಕತ್ತರಿಸಿ, ನಂತರ ಎರಡು ಬದಿಯನ್ನು ತವಾ ಮೇಲೆ ಫ್ರೈ ಮಾಡಿ.
2. ಒಂದು ಬೌಲ್‌ನಲ್ಲಿ ಕಡಲೆಹಿಟ್ಟು ಹಾಕಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
3. ಈ ಹಿಟ್ಟಿಗೆ ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಟೊಮೇಟೊ, ಕತ್ತರಿಸಿದ ಹಸಿಮೆಣಸು, ತುರಿದ ಕ್ಯಾಬೇಜ್, ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
4. ಆಮೇಲೆ ಸ್ವಲ್ಪ ಖಾರ, ಉಪ್ಪು, ಚಾಟ್ ಮಸಾಲಾ ಮತ್ತು ಗರಂ ಮಸಾಲಾ ಹಾಕಿ, ಪುನಃ ಚೆನ್ನಾಗಿ ಮಿಕ್ಸ್ ಮಾಡಿ.
5. ಮಿಕ್ಸ್ ಮಾಡಿ ಇಟ್ಟುಕೊಂಡ ಹಿಟ್ಟಿನಲ್ಲಿ ಬ್ರೆಡ್‌ಗಳನ್ನು ಅದ್ದಿ.
6. ತವಾಗೆ ಎಣ್ಣೆ ಹಾಕಿ, ಅದು ಕಾದ ಬಳಿಕ ಹಿಟ್ಟಿನಿಂದ ಲೇಯರ್ ಮಾಡಿದ ಬ್ರೆಡ್‌ಗಳನ್ನು ಹಾಕಿ, ಎರಡು ಬದಿಯನ್ನು ಫ್ರೈ ಮಾಡಿ.
7. ಮಕ್ಕಳಿಗೆ ಬಹಳ ಇಷ್ಟವಾದ ಬಿಸಿ ಬಿಸಿಯಾದ ಬ್ರೆಡ್ ಸ್ಯಾಂಡ್ವಿಚ್ ಸವಿಯಲು ಸಿದ್ಧವಾಗಿದೆ.
ಇದು ಆರೋಗ್ಯಕರ ಮತ್ತು ರುಚಿಕರವಾಗಿದೆ.