ವಿಜಯಪುರ: ಮಾಜಿ ಸಚಿವ ಎಂ.ಬಿ.ಪಾಟೀಲ್ ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ರೈತರು ಶುಭ ಹಾರೈಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಕಿಲಾರಹಟ್ಟಿ ಗ್ರಾಮದ ರೈತ ಸಂಭಾಜಿ ತಾಂಬೆ, ತಮ್ಮ ಕಿಲಾರಹಟ್ಟಿ ಗ್ರಾಮವು ಕುಗ್ರಾಮವಾಗಿದ್ದು ಇಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿನ ಮೂಲ ಕಸುಬು ಕುರಿ ಮತ್ತು ಆಡು ಸಾಕಾಣಿಕೆ ಮಾಡುವುದು ಇಲ್ಲಿ ಮೂಲ ಉದ್ಯೋಗವಾಗಿತ್ತು. ಇಲ್ಲಿ ಮಳೆಯಾದರೆ ಬೆಳೆ ಇಲ್ಲದೆ ಹೋದರೆ ಜನರು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಕೂಲಿ ಕೆಲಸಕ್ಕೆ ಗುಳೆ ಹೋಗುವುದು ರೂಡಿ ಯಾಗಿತ್ತು
ಹೀಗಾಗಿ ಇಲ್ಲಿನವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಆದರೆ ಬಬಲೇಶ್ವರ ಕ್ಷೇತ್ರದ ಹಾಲಿ ಶಾಸಕ ಹಾಗೂ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಡಾ ಎಂ.ಬಿ ಪಾಟೀಲ್ ಐತಿಹಾಸಿಕ ಆದಿಲ್ ಶಾಹಿ ಕಾಲದ ಮಮದಾಪುರ ಕೆರೆಯನ್ನು ತುಂಬಿಸಿದ್ದಾರೆ.
ಇದರಿಂದ ರೈತರ ಭೂಮಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಜತೆಗೆ ವಿಜಯಪುರ ಜಿಲ್ಲೆಯ ಅತಿ ದೊಡ್ಡ ಏತ ನೀರಾವರಿ ಯೋಜನೆಯ ಕಾಲುವೆಯಿಂದ ಕಾಖಂಡಕಿ ಮತ್ತು ಕಿಲಾರಹಟ್ಟಿ ಗ್ರಾಮದ ರೈತರಿಗೆ ಬಗಲ ಕಾಲುವೆ ಮುಖಾಂತರ ನೀರು ಹರಿಸಲಾಗುತ್ತಿದೆ.
ಇದರಿಂದ ಕಿಲಾರಹಟ್ಟಿ ಗ್ರಾಮದಲ್ಲಿ ಕೃಷಿಕರು ಹಾಗೂ ಕೃಷಿಕರ ಮಕ್ಕಳಿಗೆ ಅತಿ ಹೆಚ್ಚು ಲಾಭವಾಗಿದೆ ಹೀಗಾಗಿ ಎಂ.ಬಿ ಪಾಟೀಲ್ ಮುಂದೊಂದು ದಿನ ಈ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ರೈತ ಶುಭ ಹಾರೈಸಿದ್ದಾರೆ.








