ಭಾರತಕ್ಕೆ ಆಗಮಿಸಿರುವ ಟ್ರಂಪ್ ದಂಪತಿ ಖಾಸಗಿಯಾಗಿ ತಾಜ್ ಮಹಲ್ಗೆ ಭೇಟಿ ನೀಡಿ ತಾಜ್ ಸೌಂದರ್ಯವನ್ನ ಸವಿದಿದ್ದಾರೆ. ಟ್ರಂಪ್ ಭೇಟಿ ಗೂ ಮುನ್ನಾ ತಾಜ್ ಮಹಲನ್ನು ನೀರಿನಿಂದ ತೊಳೆಯಲಾಗಿದೆ ಎಂಬ ವಿಡಿಯೋ ತುಣುಕೊಂದನ್ನ ಪಾಕಿಸ್ತಾನ ಟ್ರೋಲಿಗರು ಟ್ವಿಟ್ಟರ್ ನಲ್ಲಿ ಹಾಕಿ ಕೇಂದ್ರ ಬಿಜೆಪಿ ಸರ್ಕಾರವನ್ನ ಗೇಲಿ ಮಾಡಿದ್ದಾರೆ. ಪಾಕ್ ಪಾಪಿಗಳ ಗೇಲಿಗೆ ತಿರುಗೇಟು ನೀಡಿರುವ ಪಾಕಿಸ್ತಾನ ಮೂಲದ ಭಾರತೀಯ ಗಾಯಕ ಅದ್ನಾನ್ ಸಾಮಿ, ವಿಡಿಯೋದಲ್ಲಿರುವುದು ತಾಜ್ ಮಹಲ್ ಅಲ್ಲ ಎಂದು ಟ್ರೋಲಿಗರ ಬಾಯಿಮುಚ್ಚಿಸಿದ್ದಾರೆ.
ಪಾಕಿಸ್ತಾನಿ ಟ್ರೋಲಿಗ ಪೇಜ್ಗೆ ವಿಡಿಯೋವನ್ನು ಶೇರ್ ಮಾಡಿರುವ ಅದ್ನಾನಿ ಸಾಮಿ, ‘ಮೊದಲು ನಿಮ್ಮ ಮೆದುಳನ್ನು ಮತ್ತು ನಿಯತ್ತನ್ನು ಸ್ವಚ್ಛಗೊಳಿಸಿಕೊಳ್ಳಿ. ಎರಡನೆಯದಾಗಿ ತಾಜ್ಮಹಲನ್ನು ಸ್ವಚ್ಛಗೊಳಿಸಲು ನಮ್ಮ ಬಳಿ ತಾಜ್ಮಹಲ್ ಇರಬೇಕು. ನಿಮ್ಮ ಬಳಿ ತಾಜ್ಮಹಲ್ ಇಲ್ಲ. ಮೂರನೆಯದಾಗಿ ಇದು ತಾಜ್ಮಹಲ್ ಅಲ್ಲವೇ ಅಲ್ಲ, ಬದಲಾಗಿ ಭೋಪಾಲ್ನಲ್ಲಿರುವ ತಾಜ್ಮಹಲ್ನ ಪ್ರತಿಕೃತಿ. ನಕಲು ಮಾಡುತ್ತಿರುವ ನಿಮ್ಮನ್ನು ನೋಡಿದರೆ ನನಗೆ ನಿಮ್ಮ ಉತ್ಸುಕತೆ ಅರ್ಥವಾಗುತ್ತದೆ. ನಿಮ್ಮ ಸೀಮಿತ ವ್ಯಾಪ್ತಿಯು ಈ ಉತ್ಸುಕತೆಯನ್ನು ನಿಯಂತ್ರಿಸಲು ಬಿಡುವುದಿಲ್ಲ ಎನ್ನುವುದು ನನಗೆ ಗೊತ್ತು.’ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.








