ಕಿತ್ತಳೆ ಶುಂಠಿ ಪುದಿನ ಮಾಕ್‌ಟೈಲ್ ಒಮ್ಮೆ Try ಮಾಡಿ ನೋಡಿ ಹೇಗೆ ಮಾಡೋದು ತಿಳಿಯೋಣ…
ಬೇಕಾಗುವ ಪದಾರ್ಥಗಳು:
ಕಿತ್ತಳೆ ಹಣ್ಣು
ಸಕ್ಕರೆ
ಶುಂಠಿ
ಪುದಿನ ಸೊಪ್ಪು
ನಿಂಬೆಹಣ್ಣಿನ ರಸ
ಉಪ್ಪು
ಖಾರದ ಪುಡಿ
ಐಸ್ ಕ್ಯೂಬ್ಸ್
ವಿಧಾನ:
1. ಮೊದಲು, ಕಿತ್ತಳೆ ಹಣ್ಣು, ಸಕ್ಕರೆ ಮತ್ತು ಶುಂಠಿಯನ್ನು ಮಿಕ್ಸರ್ ಜಾರಿನಲ್ಲಿ ಹಾಕಿ, ಚೆನ್ನಾಗಿ ರುಬ್ಬಿ ಇಟ್ಟುಕೊಳ್ಳಿ.
2. ನಂತರ, ಒಂದು ಜ್ಯೂಸ್ ಗ್ಲಾಸ್ ತೆಗೆದು, ಅದರ ತುದಿಗೆ ನಿಂಬೆಹಣ್ಣಿನ ರಸ ಹಚ್ಚಿ. ಅದಕ್ಕೆ ಉಪ್ಪು ಮತ್ತು ಖಾರದ ಪುಡಿ ಮಿಕ್ಸ್ ಮಾಡಿ ಅದ್ದಿ.
3. ಗ್ಲಾಸಿನ ಒಳಗೆ ಸ್ವಲ್ಪ ಪುದಿನ ಸೊಪ್ಪು ಹಾಕಿ, ನಂತರ ಅದರಲ್ಲಿ ಕಿತ್ತಳೆ ಹಣ್ಣಿನ ರಸ ಹಾಕಿ.
4. ಚಿಟಿಕೆ ಉಪ್ಪು ಮತ್ತು ಐಸ್ ಕ್ಯೂಬ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಸರ್ವ್ ಮಾಡಿ.
ಹೆಚ್ಚು ರಿಫ್ರೆಶಿಂಗ್ ಆಗಿರುವ ಈ ಮಾಕ್‌ಟೈಲ್ ಅನ್ನು ಸವಿಯಿರಿ!








