ರುಚಿಕರವಾದ ತೊಗರಿಕಾಳಿನ ಬಾತ್ ಮಾಡೋದು ಹೇಗೆ..ತಿಳಿಯೋಣ ಬನ್ನಿ..
ಬೇಕಾಗುವ ಪದಾರ್ಥಗಳು
ತೊಗರಿಕಾಳು: 1 ಕಪ್
ಬಾಸುಮತಿ ಅಕ್ಕಿ: 1 ಕಪ್
ರುಚಿಗೆ ಉಪ್ಪು
ನಿಂಬೆರಸ: 4 ಚಮಚ
ಎಣ್ಣೆ: 4 ಚಮಚ
ತೆಂಗಿನ ಕಾಯಿತುರಿ: 3 ಹಿಡಿ (ನುಣ್ಣಗೆ ರುಬ್ಬಬೇಕು)
ಮಸಾಲೆಗೆ ರುಬ್ಬಲು ಬೇಕಾಗುವ ಪದಾರ್ಥಗಳು
ಕೊತ್ತಂಬರಿಸೊಪ್ಪು: 2 ಬಿಡಿ
ಪುದೀನಾಎಲೆ: 12 ಎಲೆ
ಹಸಿಮೆಣಸಿನಕಾಯಿ: 6
ಶುಂಠಿ: 2 ಸಣ್ಣ ತುಂಡುಗಳು
ಬೆಳ್ಳುಳ್ಳಿ: 8 ಎಸಳು
ವಿಧಾನ
1. ಬಾಣಲೆ ಬಿಸಿ ಮಾಡಿ ಎಲ್ಲಾ ಪದಾರ್ಥಗಳನ್ನು ಹುರಿದು, ನಂತರ ನುಣ್ಣಗೆ ರುಬ್ಬಿ.
2. ತೊಗರಿಕಾಳು ಕುಕ್ಕರ್ನಲ್ಲಿ ಹಾಕಿ ಸ್ವಲ್ಪ ನೀರು ಹಾಕಿ, ಎರಡು ವಿಶಲ್ ಕೂಗಿಸಿ.
3. ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ ಚಟಪಟಿಸಿ.
4. ರುಬ್ಬಿದ ಮಸಾಲೆ ಹಾಕಿ, ಎರಡು ನಿಮಿಷ ಹುರಿಯಿರಿ.
5. ನಂತರ ಅರಿಶಿನ ಪುಡಿ 1/4 ಚಮಚ ಹಾಕಿ.
6. ರುಬ್ಬಿದ ತೆಂಗಿನ ಕಾಯಿಯನ್ನು ಮೂರು ನಿಮಿಷ ಹುರಿಯಿರಿ
7. ತೊಳೆದಿಟ್ಟ ಬಾಸುಮತಿ ಅಕ್ಕಿ, ರುಚಿಗೆ ಉಪ್ಪು ಬೆರಸಿ, ಅಳತೆ ಪ್ರಮಾಣದಲ್ಲಿ ನೀರು ಹಾಕಿ ಬೇಯಲು ಇಡಿ.
8. ಬೇಯಿಸಿದ ತೊಗರಿಕಾಳು ಸೇರಿಸಿ.
9. ಅಕ್ಕಿ ಅರ್ಧ ಬೆಂದ ನಂತರ, ಮುಚ್ಚಳ ಮುಚ್ಚಿ ಒಂದು ವಿಷಲ್ ಕೂಗಿಸಿ.
10. ತೊಗರಿಕಾಳಿನ ಬಾತ್ ಗೆ ನಿಂಬೆರಸ ಬೆರೆಸಿ ಸವಿಯಿರಿ.








