ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಬಡತನದಲ್ಲೇ ಬೆಳೆದು ದೊಡ್ಡ ಹುದ್ದೆ ತಲುಪಿದವರು.
ಅವರಿಗೆ ಅವರಿಗೆ ಹಿಂದಿ (Hindi) ಓದಲು ಬರುತ್ತಿರಲಿಲ್ಲ. ಅವಿಭಜಿತ ಪಂಜಾಬ್‌ನಲ್ಲಿ (ಈಗಿನ ಪಾಕಿಸ್ತಾನ ಪಂಜಾಬ್‌ನಲ್ಲಿರುವ ಗಾಹ್) ಸೆಪ್ಟೆಂಬರ್ 26, 1932 ರಲ್ಲಿ ಜನಿಸಿದ್ದರು. ಆದರೆ, ಅವರಿಗೆ ಹಿಂದಿ ಓದಲು ಬರುತ್ತಿರಲಿಲ್ಲ.
ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಅವರು ಅಜ್ಜಿಯ ಆಶ್ರಯದಲ್ಲಿ ಬೆಳೆದಿದ್ದರು. ಅವರ ಜೀವನದ ಮೊದಲ ಹನ್ನೆರಡು ವರ್ಷಗಳಲ್ಲಿ ವಿದ್ಯುತ್ ಕಂಡಿರಲಿಲ್ಲ. ಅವರ ಹಳ್ಳಿಗೆ ವಿದ್ಯುತ್ ಇರಲಿಲ್ಲ. ದೀಪದ ಬೆಳಕಿನಲ್ಲಿ ಅಧ್ಯಯನ ಮಾಡಿದ್ದರು. 14 ನೇ ವಯಸ್ಸಿನಲ್ಲಿ, ಸಿಂಗ್ ಅವರ ಕುಟುಂಬವು ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದು ಅಮೃತಸರದಲ್ಲಿ ಬದುಕು ಕಟ್ಟಿಕೊಂಡಿತ್ತು.
ಪ್ರಾಥಮಿಕ ಶಿಕ್ಷಣವನ್ನು ಉರ್ದುವಿನಲ್ಲಿ (Urdu) ಓದಿದ ಕಾರಣ ಸಿಂಗ್ ಅವರಿಗೆ ಹಿಂದಿ ಮಾತನಾಡಲು ಮಾತ್ರ ಬರುತ್ತಿತ್ತು, ವಿನಾ: ಬರೆಯಲು ಹಾಗೂ ಓದಲು ಬರುತ್ತಿರಲಿಲ್ಲ.
ಪ್ರಧಾನಿಯಾಗಿದ್ದ ಸಂದರ್ಭದಲ್ಲೂ ಅವರು ಭಾಷಣವನ್ನು ಉರ್ದುವಿನಲ್ಲಿ ಬರೆದು ಓದುತ್ತಿದ್ದರು. ಕೆಲ ಸಂದರ್ಭಗಳಲ್ಲಿ ತಮ್ಮ ಮಾತೃ ಭಾಷೆ ಪಂಜಾಬಿಯನ್ನು ಬರೆಯುವ ಲಿಪಿ ಗುರ್ಮುಖಿಯಲ್ಲಿ ಬರೆದುಕೊಳ್ಳುತ್ತಿದ್ದರು. ಮನಮೋಹನ್ ಸಿಂಗ್ ಉರ್ದು ಸಾಹಿತ್ಯ ಮತ್ತು ಕವಿತೆ ಇಷ್ಟ ಪಡುತ್ತಿದ್ದರು







