ಚಿಕನ್ ಗ್ರೇವಿ Sunday Special…
ಕೇವಲ 15 ನಿಮಿಷದಲ್ಲಿ ಈ ಗ್ರೇವಿ ತಯಾರಿಸಬಹುದು ಮಸಾಲೆ ರುಬ್ಬದೇ Super Taste ಚಿಕನ್ ಗ್ರೇವಿ ಮಾಡುವುದು ಹೇಗೆ ಅಂತ ನೋಡೋಣ.
ಚಿಕನ್ ಗ್ರೇವಿಗೆ ಬೇಕಾಗುವ ಸಾಮಾಗ್ರಿಗಳು
ಚಿಕನ್: ಅರ್ಧ ಕೆ.ಜಿ
ಅರಿಶಿಣಪುಡಿ: ಕಾಲು ಟೀ ಸ್ಪೂನ್
ಅಚ್ಚಖಾರದಪುಡಿ:1 ಟೀ ಸ್ಪೂನ್
ಚಿಕನ್ ಮಸಾಲ: 1 ಟೀ ಸ್ಪೂನ್
ಪುದೀನಾ: ಸ್ವಲ್ಪ
ಕೊತ್ತಂಬರಿಸೊಪ್ಪು: ಸ್ವಲ್ಪ
ಗಟ್ಟಿ ಮೊಸರು: ಕಾಲು ಕಪ್
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: 4 ಟೀ ಸ್ಪೂನ್
ಚಕ್ಕೆ: ಅರ್ಧ ಇಂಚು
ಲವಂಗ: ಎರಡು
ಏಲಕ್ಕಿ: ಎರಡು
ಈರುಳ್ಳಿ: ಒಂದು
ಟೊಮೆಟೋ: ಒಂದು
ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಟೀ ಸ್ಪೂನ್
ಕಸೂರಿ ಮೇಥಿ: 1 ಟೀ ಸ್ಪೂನ್
ದನಿಯಾಪುಡಿ: 1 ಟೀ ಸ್ಪೂನ್
ಜೀರಿಗೆ ಪುಡಿ: ಅರ್ಧ ಟೀ ಸ್ಪೂನ್
ಚಿಕನ್ ಗ್ರೇವಿ ಮಾಡುವ ವಿಧಾನ
-ಮೊದಲಿಗೆ ಅರ್ಧ ಕೆ.ಜಿ ಚಿಕನ್ ಅನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಚಿಕನ್ ಅನ್ನು ಒಂದು ಅಗಲವಾದ ಬೌಲ್ ಗೆ ಹಾಕಿಕೊಂಡು ಇದಕ್ಕೆ ಕಾಲು ಟೀ ಸ್ಪೂನ್ ಅರಿಶಿಣಪುಡಿ, 1 ಟೀ ಸ್ಪೂನ್ ಅಚ್ಚಖಾರದಪುಡಿ, 1 ಟೀ ಸ್ಪೂನ್ ಚಿಕನ್ ಮಸಾಲ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಪುದೀನಾ, ಕಾಲು ಕಪ್ ಗಟ್ಟಿ ಮೊಸರನ್ನು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಚಿಕನ್ ಗೆ ಮಸಾಲೆ ಹಿಡಿಯಲು ಸುಮಾರು 10 ನಿಮಿಷ ತಟ್ಟೆ ಮುಚ್ಚಿ ಬಿಡಬೇಕು.
-10 ನಿಮಿಷದ ಬಳಿಕ ಸ್ಟೌವ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 3-4 ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಕಾದ ಬಳಿಕ ಅರ್ಧ ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ ಹಾಕಿ ಫ್ರೈ ಮಾಡಿ ಇದಕ್ಕೆ ಸಣ್ಣದಾಗಿ ಹಚ್ಚಿರುವ 1 ಈರುಳ್ಳಿಯನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಬೇಕು.
-ನಂತರ 1 ಟೀ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಬೇಕು. ಕೊತ್ತಂಬರಿಸೊಪ್ಪು ಸ್ವಲ್ಪ, ಕಸೂರಿ ಮೇಥಿ 1 ಟೀ ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ 1 ಟೀ ಸ್ಪೂನ್ ದನಿಯಾಪುಡಿ, ಅರ್ಧ ಟೀ ಸ್ಪೂನ್ ಜೀರಿಗೆ ಪೌಡರ್ , 1 ಟೊಮೆಟೋವನ್ನು ಹಾಕಬೇಕು. 3-4 ನಿಮಿಷ ಫ್ರೈ ಮಾಡಿಕೊಳ್ಳಬೇಕು.
-ಮಸಾಲೆ ಫ್ರೈ ಆಗುತ್ತಿರುವಾಗ ನೆನೆಸಿಟ್ಟ ಚಿಕನ್ ಅನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಮತ್ತೆ ಸ್ವಲ್ಪ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ ಸ್ವಲ್ಪ ನೀರನ್ನು ಹಾಕಿ ಕುದಿಯಲು ಬಿಡಿ.
-ನೀರು ಗ್ರೇವಿ ಹದಕ್ಕೆ ಬರುವಷ್ಟು ಮಾತ್ರ ಬಳಸಿಕೊಳ್ಳಿ. ಕುಕ್ಕರ್ ಮುಚ್ಚಳ ಹಾಕಿ 2 ವಿಸಿಲ್ ಹಾಕಿಸಿದರೆ ಚಿಕನ್ ಗ್ರೇವಿ ರೆಡಿಯಾಗುತ್ತದೆ. (ಗ್ರೇವಿ ಸ್ವಲ್ಪ ನೀರಾಗಿದ್ದರೆ ಮತ್ತೆ ಸ್ಟೌವ್ ಮೇಲೆ ಇಟ್ಟು ಕುದಿಸಿಕೊಂಡರೆ ಗಟ್ಟಿಯಾಗುತ್ತದೆ).








