ಸಿಯೋಲ್: ವಿಮಾನ ಅಪಘಾತದಲ್ಲಿ 179 ಜನ ಸಾವನ್ನಪ್ಪಿ, ಇಬ್ಬರು ಬದುಕುಳಿದಿರುವ ಘಟನೆ ದಕ್ಷಿಣ ಕೊರಿಯಾ (South Korea Plane)ದಲ್ಲಿ ನಡೆದಿದೆ.
ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಜೆಜು ಏರ್ ವಿಮಾನವು ರನ್‌ವೇಯಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 181 ಜನರ ಪೈಕಿ 179 ಜನರು ಸಾವನ್ನಪ್ಪಿದ ನಂತರ ಹಲವು ಮನಕಲಕುವ ಘಟನೆಗಳು ಕಂಡು ಬಂದವು. ದುರಂತದಲ್ಲಿ ಬದುಕುಳಿದಿದ್ದು ಇಬ್ಬರು ಫ್ಲೈಟ್ ಅಟೆಂಡೆಂಟ್ ಗಳು ಪ್ರಯಾಣಿಕರು ಮಾತ್ರ. ಈ ಇಬ್ಬರೂ ವಿಮಾನದ ಹಿಂಭಾಗದ ಬಾಲ ವಿಭಾಗದಲ್ಲಿ ಕುಳಿತಿದ್ದರಿಂದ ಮಾರಣಾಂತಿಕ ಅಪಘಾತದಿಂದ ಬದುಕುಳಿದರು.
ಮಧ್ಯಮ ಮೂರನೇ (ಶೇ.39) ಮತ್ತು ಮುಂಭಾಗಕ್ಕೆ (ಶೇ.38) ಹೋಲಿಸಿದರೆ, ವಿಮಾನದ ಹಿಂಭಾಗದ ಸೀಟುಗಳು ಶೇ.32 ರಷ್ಟು ಸಾವಿನ ಪ್ರಮಾಣವನ್ನು ಹೊಂದಿವೆ ಎಂದು ವರದಿ ಸೂಚಿಸಿದೆ. ಇಬ್ಬರು ಬದುಕುಳಿದವರನ್ನು 32 ವರ್ಷದ ಲೀ ಮತ್ತು 25 ವರ್ಷದ ಕ್ವಾನ್ ಎಂದು ಗುರುತಿಸಲಾಗಿದೆ.
ಆಸ್ಪತ್ರೆಯಲ್ಲಿದ್ದ ಲೀ, ‘ಏನಾಯಿತು’, ‘ನಾನೇಕೆ ಇಲ್ಲಿದ್ದೇನೆ’ ಎಂದು ಪ್ರಶ್ನಿಸಿದ್ದಾರೆ. ಬೋಯಿಂಗ್ 737-800 ವಿಮಾನವು ಬ್ಯಾಂಕಾಕ್‌ನಿಂದ ಮುವಾನ್‌ಗೆ ಪ್ರಯಾಣ ಬೆಳೆಸಿ, ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಇಳಿಯಲು ಪ್ರಯತ್ನಿಸಿದಾಗ ಕಾಂಪೌಂಡ್‌ಗೆ ಅಪ್ಪಳಿಸಿದೆ. ಹೀಗಾಗಿ ಬೆಂಕಿ ಹೊತ್ತಿಕೊಂಡು ಇಷ್ಟೊಂದು ಜನ ಸಾವನ್ನಪ್ಪುವಂತಾಗಿದೆ.








