ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ರಮ್ಯಾ ಆಧ್ಯಾತ್ಮದತ್ತ ವಾಲಿದ್ರಾ..? ರಮ್ಯಾ ರೀತಿಯ ಪೋಸ್ಟ್ ಗಳನ್ನು ಹಂಚಿಕೊಳುತ್ತಿರೋದು ಏಕೆ..? ಸದ್ಯ ನಟಿ ರಮ್ಯಾ ಅವರ ಅಭಿಮಾನಿಗಳಲ್ಲಿ ಹಾಗೂ ನೆಟ್ಟಿಗರಲ್ಲಿ ಬಹುವಾಗಿ ಕಾಡುತ್ತಿರುವ ಪ್ರಶ್ನೆಗಳಿವು. ಇದಕ್ಕೆ ಕಾರಣ ರಮ್ಯಾ ತಮ್ಮ ಇನ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಹಾಕಿಕೊಳ್ಳುತ್ತಿರುವ ಪೋಸ್ಟ್ ಗಳು.
ಹೌದು..! ನಟಿ ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವುದು ತಿಳಿದ ವಿಚಾರ. ಆದ್ರೆ ಇತ್ತೀಚೆಗೆ ರಮ್ಯಾ ಅವರು ಆಧ್ಯಾತ್ಮದ ಕುರಿತ ಪೋಸ್ಟ್ ಗಳನ್ನು ಹಾಕುತ್ತಿದ್ದು, ಇದರಿಂದಾಗಿ ಅವರ ಅಭಿಮಾನಿಗಳಿಗೇ ಆಶ್ಚರ್ಯ ಉಂಟಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ಟೀವ್ ಆದ ರಮ್ಯಾ, ಕೇರಳದಲ್ಲಿ ಆನೆ ಬಾಯಲ್ಲಿ ಪಟಾಕಿ ಇಟ್ಟು ಸಾಯಿಸಿದ ಪ್ರಕರಣದ ಕುರಿತು ಪೋಸ್ಟ್ ಮಾಡಿದ್ದರು. ನಂತರ ಚಿರಂಜೀವಿ ಸರ್ಜಾ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸಿದ್ದರು. ಇದೀಗ ಆಧ್ಯಾತ್ಮಿಕ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬೌದ್ಧ ಸನ್ಯಾಸಿ ಲಾಮಾ ಅವರ ಚಾಂಟ್ ಗಳನ್ನು ಕೇಳುತ್ತಿರುವುದಾಗಿ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಅಲ್ಲದೆ ಇನ್ನೊಂದು ಸ್ಟೇಟಸ್ ನಲ್ಲಿ ಅದರ ಅರ್ಥವನ್ನು ಬರೆದಿದ್ದರು.
ಅದೇ ದಿನ ಮತ್ತೊಂದು ಸ್ಟೇಟಸ್ ಹಾಕಿ ಗಾಯತ್ರಿ ಮಂತ್ರ, ಗಾಯತ್ರಿ ಮಂತ್ರದ ಅರ್ಥ, ಅದನ್ನು ಹೇಳುವುದರಿಂದಾಗುವ ಉಪಯೋಗವನ್ನು ವಿವರಿಸಿದ್ದರು. ಇದೀಗ ಅವರು ಸೂರ್ಯನ ಕಿರಣಗಳ ಕುರಿತು ಸ್ಟೇಟಸ್ ಹಾಕಿಕೊಂಡಿದ್ದು, ಕಟ್ಟಡವೊಂದರ ಮೇಲೆ ಹದ್ದು ರೆಕ್ಕೆ ಬಿಚ್ಚಿ ಕುಳಿತಿರುವ ಫೋಟೋ ಹಾಕಿದ್ದಾರೆ. ಫೋಟೋ ಮೇಲೆ ಸಾಲುಗಳನ್ನು ಬರೆದಿರುವ ಅವರು, ಎಲ್ಲರಿಗೂ ಅಲ್ಪ ಪ್ರಮಾಣದಲ್ಲಾದರೂ ಸೂರ್ಯ ಕಿರಣಗಳ ಅವಶ್ಯವಿದೆ ಎಂದಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 








