ತ್ರಿಕೋನ ಪ್ರೇಮ ಪ್ರಕರಣವೊಂದು ಕೊಲೆಗೆ ಸಾಕ್ಷಿಯಾಗಿರುವ ಘಟನೆ ನಡೆದಿದೆ.
ವ್ಯಕ್ತಿಯೊಬ್ಬನನ್ನು ಗೆಳತಿಯ ಪ್ರಿಯಕರ ತನ್ನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಚೇತನ್ ಎಂಬ ವ್ಯಕ್ತಿಯನ್ನೇ ಥಳಿಸಿದ್ದರು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಚೇತನ್ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಇವರಿಬ್ಬರ ತಾಯಂದಿರು ಪೊಲೀಸ್ ಇಲಾಖೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ, ಹುಡುಗಿಯ ತಾಯಿಯನ್ನು ಸುರ್ಗುಜಾ ಜಿಲ್ಲೆಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಹೀಗಾಗಿ ಹುಡುಗಿಯೂ ತಾಯಿಯೊಂದಿಗೆ ಹೋಗಿದ್ದರು.
ನಂತರ ಸುರ್ಗುಜಾದಲ್ಲಿ ಲೋಕೇಶ್ ಸಾಹು ಎಂಬುವನೊಂದಿಗೆ ಹುಡುಗಿ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಇದೇ ವೇಳೆ ಚೇತನ್ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ. ಆತನ ಕರೆಗೆ ಪ್ರತಿಕ್ರಿಯೆ ಕೂಡ ನೀಡುತ್ತಿರಲಿಲ್ಲ. ಡಿಸೆಂಬರ್ 24 ರಂದು ಯುವತಿ ತನ್ನ ತಾಯಿಯೊಂದಿಗೆ ದುರ್ಗಕ್ಕೆ ಬಂದಿದ್ದಳು. ಅದು ಚೇತನ್‌ಗೆ ತಿಳಿದಾಗ, ತನ್ನನ್ನು ಭೇಟಿಯಾಗುವಂತೆ ಕೇಳಿದ್ದ. ಆಗ ಯುವತಿ ನಿರಾಕರಿಸಿದ್ದಳು.
ಯುವತಿ ಲೋಕೇಶ್ ಗೆ ಚೇತನ್ ಬಗ್ಗೆ ತಿಳಿಸಿದ್ದಾಳೆ. ಬಳಿಕ ಆತನಿಗೆ ಕರೆ ಮಾಡಿ ಭೇಟಿಯಾಗುವಂತೆ ಕೇಳಿದ್ದಳು. ಆತ ಆಕೆಯನ್ನು ಭೇಟಿಯಾಗಲು ಬಂದಾಗ ಲೋಕೇಶ್ ತನ್ನ ಸ್ನೇಹಿತರೊಂದಿಗೆ ಅಲ್ಲಿಯೇ ಇದ್ದ. ಆಗ ಚೇತನ್ ಹಾಗೂ ಉಳಿದವರ ಮಧ್ಯೆ ವಾಗ್ವಾದ ನಡೆದಿದೆ.
ಲೋಕೇಶ್ ವ್ಯಕ್ತಿಯ ಮೇಲೆ ದೊಣ್ಣೆಯಿಂದ ಅಮಾನುಷವಾಗಿ ಥಳಿಸಿದ್ದಾನೆ. ಆಗ ಆತ ಗಂಭೀರವಾಗಿ ಗಾಯಗೊಂಡಿದ್ದ ಎಂದು ಪೊಲೀಸರು ಹೇಳಇದ್ದಾರೆ. ಸದ್ಯ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್
ತುಮಕೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಹೊಸ ಪಿಂಚಣಿ ಪದ್ಧತಿಯನ್ನು (NPS) ರದ್ದುಗೊಳಿಸಿ, ಹಳೇ ಪಿಂಚಣಿ...








