ಬೆಂಗಳೂರು: ವಿದ್ಯಾಕಾಶಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಈ ಮೂಲಕ ಹುಬ್ಬಳ್ಳಿ (Hubballi) ಮಹಾನಗರ ಪಾಲಿಕೆಯಿಂದ ಧಾರವಾಡವನ್ನು (Dharwad) ಪ್ರತ್ಯೇಕಿಸಲಾಗಿದೆ. ಧಾರವಾಡ ಹುಬ್ಬಳ್ಳಿಗಿಂತ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಭಾಗಶಃ ಅನುದಾನ ಹುಬ್ಬಳ್ಳಿಗೇ ಮೀಸಲಿಡಲಾಗುತ್ತಿದೆ. ಆ ಕಾರಣ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಿ ಧಾರವಾಡವನ್ನೂ ಅಭಿವೃದ್ಧಿ ಮಾಡಬೇಕು ಎಂದು ಧಾರವಾಡದ ಚಿಂತಕರು, ಸಾಹಿತಿಗಳು ಹಲವು ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದರು. ಸದ್ಯ ಈಗ ಜಯ ಸಿಕ್ಕಂತಾಗಿದೆ.
ಧಾರವಾಡದಲ್ಲಿ 26 ವಾರ್ಡ್‌ಗಳಿದ್ದು, ಧಾರವಾಡ ಕೂಡ ಹುಬ್ಬಳ್ಳಿಯಂತೆ ಅಭಿವೃದ್ಧಿ ಕಾಣಬೇಕಾದರೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಆಗಲೇಬೇಕು ಎಂದು ದಶಕಗಳ ಕಾಲ ಹೋರಾಟ ನಡೆಯುತ್ತಲೇ ಬಂದಿದ್ದವು. ಈಗ ಅದಕ್ಕೆ ಜಯ ಸಿಕ್ಕಂತಾಗಿದೆ.
ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ಒಪ್ಪಿಗೆ ಸಿಕ್ಕಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಹೋರಾಟಗಾರರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.








