ಸೋಯಾಬಿನ್ ಕಬಾಬ್ ಮಾಡೋದು ಹೇಗೆ..? ತಿಳಿಯೋಣ…
ಬೇಕಾಗುವ ಪದಾರ್ಥಗಳು
ಸೋಯಾಬಿನ್ – 1 ಕಪ್
ಈರುಳ್ಳಿ – 1
ಹಸಿ ಮೆಣಸು – 3
ಕೊತ್ತಂಬರಿ ಸೊಪ್ಪು
ಕಡಲೆ ಹಿಟ್ಟು – 1 ಸ್ಪೂನ್
ಅಕ್ಕಿ ಹಿಟ್ಟು – 1 ಸ್ಪೂನ್
ಅರಶಿಣ
ಗರಂ ಮಸಾಲೆ
ಬೆಳ್ಳುಳ್ಳಿ
ಶುಂಠಿ
ಜೀರಾ ಪುಡಿ
ಧನಿಯಾ ಪುಡಿ
ಉಪ್ಪು
ಎಣ್ಣೆ
ಮಾಡುವ ವಿಧಾನ:
1. ಮೊದಲು, ಸೋಯಾಬಿನ್ ಅನ್ನು ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ 2-3 ನಿಮಿಷ ನೆನೆಸಿಡಿ. ನಂತರ ನೀರಿನಿಂದ ಚೆನ್ನಾಗಿ ಹಿಂಡಿ ತೆಗೆಯಿರಿ.
2. ಸೋಯಾಬಿನ್ ಅನ್ನು ಮಿಕ್ಸಿ ಜಾರ್ಗೆ ಹಾಕಿ, ಇದಕ್ಕೆ ಬೆಳ್ಳುಳ್ಳಿ, ಹಸಿ ಮೆಣಸು, ಈರುಳ್ಳಿ, ಮತ್ತು ಶುಂಠಿ ಸೇರಿಸಿ ನೀರು ಹಾಕದೆ ತರಿತರಿಯಾಗಿ ರುಬ್ಬಿ.
3. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು, ಗರಂ ಮಸಾಲೆ, ಕಡಲೆ ಹಿಟ್ಟು, ಮತ್ತು ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ವಡೆ ಹದಕ್ಕೆ ಹಿಟ್ಟನ್ನು ತಯಾರಿಸಿ.
4. ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿಕೊಳ್ಳಿ ಅಥವಾ ವಡೆಯಾಕಾರದಲ್ಲಿ ತಟ್ಟಿಕೊಳ್ಳಿ.
5. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದಮೇಲೆ ವಡೆಗಳನ್ನು ಎಣ್ಣೆಯಲ್ಲಿ ಬಿಟ್ಟು ಸಣ್ಣ ಉರಿಯಲ್ಲಿ 3-4 ನಿಮಿಷ ಬೇಯಿಸಿ. ಎರಡೂ ಕಡೆ ಕೆಂಪು ಬಣ್ಣಕ್ಕೆ ಬರುವಂತೆ ಕರಿಯಿರಿ.
6. ಎಣ್ಣೆಯಿಂದ ತೆಗೆದು ಪ್ಲೇಟ್ಗೆ ಹಾಕಿ
ಸವಿಯಲು ರೆಡಿ:
ಸೋಯಾಬಿನ್ ಕಬಾಬ್ ಈಗ ಸವಿಯಲು ರೆಡಿಯಾಗಿದೆ. ಕಡಿಮೆ ಪದಾರ್ಥಗಳೊಂದಿಗೆ ಸುಲಭವಾಗಿ ತಯಾರಿಸಲು ಸಾಧ್ಯವಾಗುವ ಈ ಕಬಾಬ್ಗಳು ನಿಮ್ಮ ಕುಟುಂಬದ ಎಲ್ಲರಿಗೂ, ವಿಶೇಷವಾಗಿ ಮಕ್ಕಳಿಗೆ ಬಹಳ ಇಷ್ಟವಾಗುತ್ತವೆ. ನೀವು ಕೂಡ ಒಮ್ಮೆ ಮಾಡಿ ನೋಡಿ!








