ಸಿಹಿಕುಂಬಳಕಾಯಿ ಫ್ರೈಸ್ ಮಾಡೋದು ಹೇಗೆ..?
ಬೇಕಾಗುವ ಪದಾರ್ಥಗಳು:
ಕತ್ತರಿಸಿದ ಸಿಹಿಕುಂಬಳಕಾಯಿ: 2 ಕಪ್
ಆಲಿವ್ ಎಣ್ಣೆ: 2 ಚಮಚ
ಚಿಲ್ಲಿ ಪ್ಲೇಕ್ಸ್: 1/2 ಚಮಚ
ಬೆಳ್ಳುಳ್ಳಿ ಪುಡಿ: 1 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಮೆಣಸಿನಪುಡಿ: 1 ಚಮಚ
ಅರಿಶಿನ: 1/2 ಟೀ ಚಮಚ
ಜೋಳದ ಹಿಟ್ಟು: 1 ಟೀ ಚಮಚ
ಮಾಡುವ ವಿಧಾನ:
1. ಕುಂಬಳಕಾಯಿ ಕತ್ತರಿಸುವುದು:
ಮೊದಲು ಸಿಹಿ ಕುಂಬಳಕಾಯಿಯ ಸಿಪ್ಪೆ ತೆಗೆದು, ಅದನ್ನು ಫ್ರೆಂಚ್ ಫ್ರೈಸ್ ಆಕಾರದಲ್ಲಿ ಉದ್ದವಾಗಿ ಕತ್ತರಿಸಿ.
2. ಮಿಶ್ರಣ ತಯಾರಿಕೆ:
ಕತ್ತರಿಸಿದ ಕುಂಬಳಕಾಯಿ ತುಂಡುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ.
ಅದರ ಮೇಲೆ ಆಲಿವ್ ಎಣ್ಣೆ, ಉಪ್ಪು, ಬೆಳ್ಳುಳ್ಳಿ ಪುಡಿ, ಅರಿಶಿನ, ಮೆಣಸಿನಪುಡಿ, ಮತ್ತು ಚಿಲ್ಲಿ ಪ್ಲೇಕ್ಸ್ ಸೇರಿಸಿ.
ಚೆನ್ನಾಗಿ ಮಿಶ್ರಣ ಮಾಡಿ.
3. ಕುಂಬಳಕಾಯಿ ಫ್ರೈಸ್ ಮಾಡುವುದು:
ಒಂದು ಪ್ಯಾನ್ ಅನ್ನು ಒಲೆಯ ಮೇಲೆ ಇಟ್ಟು, ಅಗತ್ಯವಿರುವ ಎಣ್ಣೆಯನ್ನು ಹಾಕಿ.
ಎಣ್ಣೆ ಬಿಸಿಯಾದಾಗ, ಕುಂಬಳಕಾಯಿ ತುಂಡುಗಳನ್ನು ಎಣ್ಣೆಯಲ್ಲಿ ಹಾಕಿ.
ಫ್ರೈ ಮಾಡಿದ ನಂತರ, ಅವು ಗೋಲ್ಡನ್ ಬ್ರೌನ್ ಬರುವವರೆಗೆ ಬೇಯಿಸಿ.
ಸಿಹಿಕುಂಬಳಕಾಯಿ ಫ್ರೈಸ್ ಸವಿಯಲು ಸಿದ್ಧ!
ಅದಕ್ಕೆ ಟೊಮಾಟೋ ಚಟ್ನಿಯ ಜೊತೆ ಸವಿಯಿರಿ.








