ಮಿಲ್ಕ್ ಬರ್ಫಿ ಮಾಡೋದು ಹೇಗೆ..? ತಿಳಿಯೋಣ…
ಬೇಕಾಗುವ ಸಾಮಾಗ್ರಿಗಳು:
ಹಾಲು: 2 ಕಪ್
ನಿಂಬೆ ಹಣ್ಣಿನ ರಸ: 1
ಸಕ್ಕರೆ: 3/4 ಕಪ್
ಏಲಕ್ಕಿ ಪುಡಿ: 1 ಚಮಚ
ತುಪ್ಪ: 2 ಚಮಚ
ಮಿಲ್ಕ್ ಪೌಡರ್: 1 ಚಮಚ
ತಯಾರಿಸುವ ವಿಧಾನ:
1. ಹಾಲು ಕುದಿಸಿ:
ಒಂದು ದಪ್ಪ ತಳದ ಪಾತ್ರೆಯಲ್ಲಿ 2 ಕಪ್ ಹಾಲು ಹಾಕಿ ಮಧ್ಯಮ ತಾಪಮಾನದಲ್ಲಿ ಕುದಿಸಿರಿ. ಹಾಲು ಅರ್ಧ ಪ್ರಮಾಣಕ್ಕೆ ಕುಗ್ಗುವವರೆಗೆ ಹತ್ತಿರ ನಿಂತು ಚೆನ್ನಾಗಿ ಅಲುಗಾಡುತ್ತಿರಿ.
2. ನಿಂಬೆ ರಸ ಸೇರಿಸಿ:
ಹಾಲು ಅರ್ಧವಾದ ನಂತರ, 1 ನಿಂಬೆ ಹಣ್ಣಿನ ರಸ ಸೇರಿಸಿ. ಇದರಿಂದ ಹಾಲು ಒಡೆಯುತ್ತದೆ.
3. ಮಿಶ್ರಣ ತಯಾರಿ:
ಒಡೆದ ಹಾಲಿಗೆ 3/4 ಕಪ್ ಸಕ್ಕರೆ ಮತ್ತು 1 ಚಮಚ ಏಲಕ್ಕಿ ಪುಡಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ.
4. ತುಪ್ಪ ಸೇರಿಸಿ:
ಮಿಶ್ರಣ ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ, 2 ಚಮಚ ತುಪ್ಪ ಸೇರಿಸಿ. ಮಿಶ್ರಣ ಗಟ್ಟಿಯಾಗುವವರೆಗೆ ಕಾಯಿಸಿ.
5. ಮಿಲ್ಕ್ ಪೌಡರ್ ಸೇರಿಸಿ:
ನಂತರ 1 ಚಮಚ ಮಿಲ್ಕ್ ಪೌಡರ್ ಸೇರಿಸಿ. ಇದನ್ನು ಚೆನ್ನಾಗಿ ಬೆರೆಸಿರಿ.
6. ಪಾತ್ರೆಗೆ ಹಾಕಿ:
ತುಪ್ಪ ಸವರಿದ ಪ್ಲೇಟಿಗೆ ಮಿಶ್ರಣವನ್ನು ಹಾಕಿ. ತಣ್ಣಗಾದ ನಂತರ, ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.
ಟಿಪ್ಸ್:
ಗಟ್ಟಿಯಾಗುವವರೆಗೆ ಮಿಕ್ಸ್ ಮಾಡುತ್ತಿರಬೇಕು .
ಬರ್ಫಿಯ ಮೇಲೆ ಒಣಹಣ್ಣಿನ ಚೂರುಗಳನ್ನು ಹಾಕಿ ಆಕರ್ಷಕವಾಗಿ ಸವಿಯಿರಿ.
ನಿಮ್ಮ ಸಿಹಿಯಾದ ಕ್ಷಣಗಳಿಗೆ ಮಿಲ್ಕ್ ಬರ್ಫಿ ತಯಾರಾಗಿದೆ!








