ದರ್ಶಿನಿ ಸ್ಟೈಲ್ ಟೊಮ್ಯಾಟೊ ಬಾತ್ ಮಾಡೋದು ಹೇಗೆ ತಿಳಿಯೋಣ…
ಮಾಡಲು ಬೇಕಾದ ಸಾಮಗ್ರಿಗಳು:
15 ಎಸಳು ಬೆಳ್ಳುಳ್ಳಿ
2 ಇಂಚು ಶುಂಠಿ
3 ಹಸಿ ಮೆಣಸಿನ ಕಾಯಿ
1 ಕಪ್ ಅಕ್ಕಿ
4 ಸ್ಪೂನ್ ಎಣ್ಣೆ
4 ಪಲಾವ್ ಎಲೆ
4 ಚಕ್ಕೆ
4 ಲವಂಗ
1/2 ಟೀ ಸ್ಪೂನ್ ಸೋಂಪು
2 ಈರುಳ್ಳಿ
4-5 ಟೊಮಾಟೊ
1/2 ಟೀಸ್ಪೂನ್ ಅರಿಶಿನ
ರುಚಿಗೆ ತಕ್ಕಷ್ಟು ಉಪ್ಪು
1 ಕಪ್ ಹಸಿ ಬಟಾಣಿ
2 ಸ್ಪೂನ್ MTR ಪಲಾವ್ ಪೌಡರ್
1/2 ಟೀ ಸ್ಪೂನ್ ಚಿಲ್ಲಿ ಪೌಡರ್
ಸಣ್ಣಗೆ ಹೆಚ್ಚಿದ ಪುದೀನ
ನೀರು
ಮಾಡುವ ವಿಧಾನ:
1. ಮೊದಲು 15 ಬೆಳ್ಳುಳ್ಳಿ, 2 ಇಂಚು ಶುಂಠಿ ಮತ್ತು 3 ಹಸಿ ಮೆಣಸಿನ ಕಾಯಿಯನ್ನು ಪೇಸ್ಟ್ ಮಾಡಿಕೊಳ್ಳಿ.
2. ಅಕ್ಕಿಯನ್ನು 5 ನಿಮಿಷ ನೆನೆಸಿದರೆ ಸಾಕು.
3. ಒಂದು ಕುಕ್ಕರ್ ಗೆ 4 ಸ್ಪೂನ್ ಎಣ್ಣೆ ಹಾಕಿ, ಪಲಾವ್ ಎಲೆ, 4 ಚಕ್ಕೆ, 4 ಲವಂಗ ಮತ್ತು ಸೋಂಪು ಹಾಕಿ ಒಗ್ಗರಣೆ ಮಾಡಿ.
4. 2 ಸಣ್ಣ ಕತ್ತರಿಸಿದ ಈರುಳ್ಳಿ ಮತ್ತು ರುಬ್ಬಿದ ಪೇಸ್ಟ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
5. ನಂತರ, 4-5 ಸಣ್ಣ ಕತ್ತರಿಸಿದ ಟೊಮಾಟೊ, ಅರಿಶಿನ ಮತ್ತು ಉಪ್ಪು ಹಾಕಿ, ಮೆತ್ತಗಾದ ನಂತರ 1 ಕಪ್ ಹಸಿ ಬಟಾಣಿ, 2 ಸ್ಪೂನ್ MTR ಪಲಾವ್ ಪೌಡರ್, ಅರ್ಧ ಟೀ ಸ್ಪೂನ್ ಚಿಲ್ಲಿ ಪೌಡರ್, ನೆನೆಸಿದ ಅಕ್ಕಿ, ಸಣ್ಣಗೆ ಕತ್ತರಿಸಿದ ಪುದೀನ ಮತ್ತು ನೀರು ಸೇರಿಸಿ.
6. 2 ವಿಷಲ್ ಆಗುವವರೆಗೆ ಕುಕ್ಕರ್ ನಲ್ಲಿ ಬೇಯಿಸಿ, ನಂತರ 10 ನಿಮಿಷ ಬಿಟ್ಟು ಚಟ್ನಿ ಅಥವಾ ಮೊಸರು ಜೊತೆ ಸವಿಯಿರಿ.








