ಬೆಂಗಳೂರು: ಸಿಇಟಿ ಪರೀಕ್ಷಾ ವೇಳಾಪಟ್ಟಿ(CET Exam) ಪ್ರಕಟವಾಗಿದ್ದು, ಏ. 16 ಮತ್ತು 17ಕ್ಕೆ ಸಿಇಟಿ ಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತವಾಗಿ ಘೋಷಿಸಿದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (MC Sudhakar) ದಿನಾಂಕ ಘೋಷಣೆ ಮಾಡಿದ್ದಾರೆ. ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜ. 23 ರಿಂದ ಫೆ. 21ರ ವರೆಗೆ ಅವಕಾಶವಿದೆ ಎಂದು ಕೆಇಎ ತಿಳಿಸಿದೆ.
ಏಪ್ರಿಲ್ 16:
ಬೆಳಿಗ್ಗೆ 10:30- ಭೌತಶಾಸ್ತ್ರ
ಮಧ್ಯಾಹ್ನ 2:30- ರಸಾಯನಶಾಸ್ತ್ರ
ಏಪ್ರಿಲ್ 17:
ಬೆಳಿಗ್ಗೆ 10:30 -ಗಣಿತ
ಮಧ್ಯಾಹ್ನ 2:30- ಜೀವಶಾಸ್ತ್ರ
ಏಪ್ರಿಲ್ 18:
ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ
ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ರೈತರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS)...








