ಎಲ್ಲರಿಗೂ ದೋಸೆ ಸವಿಯಲು ಇಷ್ಟ, ಆದರೆ ಅದರಲ್ಲಿ ಬಳಸುವ ಅಕ್ಕಿಯ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಿರುವ ಕಾರಣ ಜನರು ಹಿಂದೇಟು ಹಾಕುತ್ತಾರೆ. ಆದರೆ ಜೋಳವನ್ನು ಬಳಸುವುದರಿಂದ ದೋಸೆ ರುಚಿಕರವಾಗುವುದಷ್ಟೇ ಅಲ್ಲ, ಹೆಚ್ಚು ನಾರಿನ ಅಂಶ ಹೊಂದಿರುವುದರಿಂದ ಆರೋಗ್ಯಕ್ಕೂ ಅತ್ಯುತ್ತಮವಾಗಿದೆ.
ಬೇಕಾಗುವ ಸಾಮಗ್ರಿಗಳು
ಜೋಳ – 3 ಕಪ್
ಉದ್ದಿನ ಬೇಳೆ – 1 ಕಪ್
ಹೆಸರುಬೇಳೆ – 1/4 ಕಪ್
ಸಬ್ಬಕ್ಕಿ – 1/4 ಕಪ್
ಮೆಂತ್ಯ ಕಾಳು – 2 ಚಮಚ
ಸೋಡಾ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – 1/2 ಚಮಚ
ಮಾಡುವ ವಿಧಾನ
1. ಜೋಳ, ಉದ್ದಿನ ಬೇಳೆ, ಹೆಸರುಬೇಳೆ, ಸಬ್ಬಕ್ಕಿ ಹಾಗೂ ಮೆಂತ್ಯ ಕಾಳುಗಳನ್ನು 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
2. ಬಳಿಕ ಈ ಎಲ್ಲವನ್ನು ಒಟ್ಟಿಗೆ ರುಬ್ಬಿ ಹಿಟ್ಟು ತಯಾರಿಸಿ.
3. ಈ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿ 8 ಗಂಟೆಗಳ ಕಾಲ ಫರ್ಮೆಂಟ್ ಆಗಲು ಬಿಡಿ.
4. ಫರ್ಮೆಂಟ್ ಆದ ನಂತರ, ಅಗತ್ಯವಿರುವಷ್ಟು ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಉಪ್ಪು, ಚಿಟಿಕೆ ಸೋಡಾ ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಕಲಸಿ.
5. ಈಗ ಕಬ್ಬಿಣದ ತವೆಯ ಮೇಲೆ ಹಿಟ್ಟು ಹಾಕಿ, ದೋಸೆ ತಯಾರಿಸಿ.
ಗರಿಗರಿಯಾದ ಸಿರಿಧಾನ್ಯ ಜೋಳದ ದೋಸೆಯನ್ನು ಆಲೂಗಡ್ಡೆ ಪಲ್ಯ, ತೆಂಗಿನಕಾಯಿ ಚಟ್ನಿ ಅಥವಾ ಪುದೀನ ಚಟ್ನಿ ಜೊತೆ ಸವಿದು, ಆರೋಗ್ಯವನ್ನೂ ರುಚಿಯನ್ನೂ ಅನುಭವಿಸಿ!








