ಶ್ರೀಲಂಕಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ತಂಡ 100-40 ಅಂಕಗಳಿಂದ ಜಯಗಳಿಸಿತು.ರಾಮಜಿ ಕಶ್ಯಪ್, ಪ್ರತೀಕ್ ವೈಕರ್ ಮತ್ತು ಆದಿತ್ಯ ಗಣಪುಲೆ ಮೊದಲ ‘ಟರ್ನ್’ನಲ್ಲೇ ಉತ್ತಮ ಪ್ರದರ್ಶನ ನೀಡಿದರು.ಮೊದಲ ಟರ್ನ್ನಲ್ಲೇ ಭಾರತ 58 ಪಾಯಿಂಟ್ಸ್ ಗಳಿಸಿತು, ಲಂಕಾ ತಂಡಕ್ಕೆ ಒಂದೂ ಪಾಯಿಂಟ್ ಗಳಿಸಲು ಬಿಡಲಿಲ್ಲ.
ಮಹಿಳೆಯರ ತಂಡದ ಗೆಲುವು:
– ಬಾಂಗ್ಲಾದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ 109-16 ಅಂಕಗಳಿಂದ ಗೆದ್ದು ಸೆಮೀಸ್ಗೆ ಕಾಲಿಟ್ಟಿತು.
– ಟೀಂ ಇಂಡಿಯಾ ದಿಟ್ಟ ಪ್ರದರ್ಶನ ನೀಡಿತು, ಬಾಂಗ್ಲಾದೇಶದ ಆಟ ನಡೆಯಲಿಲ್ಲ.
ಸೆಮಿಫೈನಲ್ ಪಂದ್ಯಗಳು:
– ಇಂದು ಪುರುಷರ ಮತ್ತು ಮಹಿಳಾ ತಂಡಗಳು ದಕ್ಷಿಣ ಆಫ್ರಿಕಾದ ತಂಡಗಳನ್ನು ಎದುರಿಸಲಿವೆ.
– ದಕ್ಷಿಣ ಆಫ್ರಿಕಾ ಪುರುಷರ ತಂಡ 58-38 ಅಂಕಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ಸೆಮಿಫೈನಲ್ ತಲುಪಿತು.
ಭಾರತ ತಂಡಗಳು ತಮ್ಮ ತಮ್ಮ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿವೆ.ಟೀಂ ಇಂಡಿಯಾದ ಪುರುಷ ಮತ್ತು ಮಹಿಳಾ ತಂಡಗಳು ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ.








