ಖಾರ ಪೊಂಗಲ್ ರೆಸಿಪಿ
ಮಾಡಲು ಬೇಕಾದ ಪದಾರ್ಥಗಳು:
ಹೆಸರು ಬೇಳೆ – 250ಗ್ರಾಂ
ಅಕ್ಕಿ – 250ಗ್ರಾಂ
ತುಪ್ಪ
ಬೆಳ್ಳುಳ್ಳಿ
ಶುಂಠಿ (ಜಜ್ಜಿಕೊಂಡಿರುವುದು)
ಜೀರಿಗೆ
ಅರಶಿಣ
ಕರಿ ಮೆಣಸು
ಗೋಡಂಬಿ
ಹಸಿ ಮೆಣಸು
ಕರಿಬೇವು
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ
ತೆಂಗಿನಕಾಯಿ
ಪೊಂಗಲ್ ಮಾಡುವ ವಿಧಾನ:
1. ಮೊದಲಿಗೆ ಅಕ್ಕಿ ಮತ್ತು ಹೆಸರು ಬೇಳೆಗಳನ್ನು ಒಂದು ಪಾತ್ರೆಗೆ ಹಾಕಿ, ಎರಡು ಬಾರಿ ಚೆನ್ನಾಗಿ ತೊಳೆದು ಹಾಕಿಕೊಳ್ಳಿ.
2. ಅದನ್ನು ಒಂದು ಕುಕ್ಕರ್‌ಗೆ ಹಾಕಿ, ಅಳತೆಯ ಕಪ್‌ನಲ್ಲಿ ನೀರು ಹಾಕಿಕೊಳ್ಳಿ. (1 ಗ್ಲಾಸ್ ಅಕ್ಕಿ-ಬೇಳೆಗೆ 2 ಗ್ಲಾಸ್ ಅಥವಾ 2.5 ಗ್ಲಾಸ್ ನೀರು)
3. ಕುಕ್ಕರ್‌ನಲ್ಲಿ ಸ್ವಲ್ಪ ಉಪ್ಪು ಹಾಕಿ, ಮುಚ್ಚಿ ಸೀಟಿ ಹೊಡೆಯಲು ಬಿಡಿ.
4. 1 ಸೀಟಿ ಹೊಡೆದ ನಂತರ, ಅಕ್ಕಿ-ಬೇಳೆ ಬೆಂದಿದೆಯೆ ಎಂದು ನೋಡಿಕೊಳ್ಳಿ. ಬೇಯದಿದ್ದರೆ, ಮತ್ತೊಮ್ಮೆ ನೀರು ಹಾಕಿ, ಮುಚ್ಚಳವನ್ನೇ ಮುಚ್ಚದೇ ಬೇಯಿಸಬಹುದು.
5. ಇದಾದ ಮೇಲೆ, ಒಲೆ ಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ.
6. ಜೀರಿಗೆ, ಗೋಡಂಬಿ, ಶುಂಠಿ, ಹಸಿ ಮೆಣಸು, ಕರಿಬೇವು ಹಾಕಿ 1 ನಿಮಿಷ ಫ್ರೈ ಮಾಡಿ.
7. ನಂತರ ಅರಶಿಣ ಮತ್ತು ಸಣ್ಣ ಕತ್ತರಿಸಿದ ತೆಂಗಿನಕಾಯಿ ಹಾಕಿ ಫ್ರೈ ಮಾಡಿ, ಆಫ್ ಮಾಡಿ.
8. ಈ ಒಗ್ಗರಣೆಯನ್ನು ಕುಕ್ಕರ್‌ನಲ್ಲಿ ಬೇಯುತ್ತಿರುವ ಪೊಂಗಲ್‌ಗೆ ಹಾಕಿ. ಮತ್ತೆ ಬೇಯಿಸಬೇಡಿ.
9. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ತುಪ್ಪ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.
10. ಖಾರ ಪೊಂಗಲ್ ರೆಡಿ ಆನಂದದಿಂದ ಸವಿಯಿರಿ!








