ಕಾರವಾರ: ಹಣ್ಣು, ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ 10 ಜನ ಸಾವನ್ನಪ್ಪಿ, 16 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಭಾಗದಲ್ಲಿ ನಡೆದಿದ್ದು, ಹಾವೇರಿ ಜಿಲ್ಲೆಯ ಮೂಲದ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಸದ್ಯ ಸಾವನ್ನಪ್ಪಿದವರ ಕುರಿತು ಮಾಹಿತಿ ಸಿಕ್ಕಿದೆ.
ಹಾವೇರಿ ಸವಣೂರು ಕುಮಟಾದ ಕಡೆ ಹಣ್ಣು ತರಕಾರಿ ತುಂಬಿದ್ದ ಲಾರಿ ಗುಳ್ಳಾಪುರ ಭಾಗಕ್ಕೆ ಬರುತಿದ್ದಂತೆ ಚಾಲಕನ ನಿರ್ಲಕ್ಷದಿಂದ ವಿದ್ಯತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 9 ಜನ ಸಾವನ್ನಪ್ಪಿದ್ದರೆ, ಮತ್ತೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ 16 ಜನರ ಸ್ಥಿತಿ ಗಂಭೀರವಾಗಿದ್ದು, ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಗಾಯಗೊಂಡವರನ್ನು ಹುಬ್ಬಳ್ಳಿ, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರಾದವರು ಹಾವೇರಿಯ ಸವಣೂರು ಮೂಲದವರು. ಕುಮಟಾದಲ್ಲಿ ನಡೆಯುವ ಸಂತೆಗೆ ಹಣ್ಣು, ತರಕಾರಿ ತೆಗೆದುಕೊಂಡು ಹೋಗುತ್ತಿದ್ದರು.
ಪಲ್ಟಿಯಾಗಿರುವ ಲಾರಿಯಲ್ಲಿ ಒಟ್ಟು 28 ಜನ ಪ್ರಯಾಣಿಸುತ್ತಿದ್ದರು ನ್ನಲಾಗಿದೆ. ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಸಾವನ್ನಪ್ಪಿದವರನ್ನು ಫಯಾಜ್ (45), ವಾಸಿಮ್ (25), ಇಜಾಜ್ (20), ಸಾದೀಕ್ (30), ಗುಲಾಮ್ ಹುಸೇನ್, ಇಮ್‌ತಿಯಾಜ್ (40), ಅಲ್ಪಾಜ್ – (25), ಜಿಲಾನಿ (20), ಅಸ್ಲಾಂ (24), ಜಲಾಲ್ (30) ಎಂದು ಗುರುತಿಸಲಾಗಿದೆ
ಹುಬ್ಬಳ್ಳಿಯಲ್ಲಿ ಕಿಮ್ಸ್ ನಲ್ಲಿ ಅಶ್ರಫ್ – ಚಾಲಕ(18), ಖ್ವಾಜಾ (22), ಮೊಹಮ್ಮದ್ ಸಾದಿಕ್(25), ಖ್ವಾಜಾ ಮೈನು(24), ನಿಜಾಮ್ (30), ಮದ್ಲಾನ್ ಸಾಬ್(24) ವರ್ಷ, ಜಾಫರ್ (22) ವರ್ಷ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಲ್ಲಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಲ್ಲಿಕ್ ರೆಹಾನ್ (21), ಅಫ್ತಾಬ್(23), ಗೌಸ್ ಮೈದ್ದೀನ್ (30), ಇರ್ಫಾನ್ (17), ನೂರ್ ಅಹಮ್ಮದ್ (30), ಅಫ್ಸರ್ ಕಾಂಜಾಡ್(34), ಸುಭಾಷ ಗೌಡರ್(17), ಖಾದ್ರಿ (26), ಸಾಬೀರ್ ಅಹಮ್ಮದ ಬಾಬಾ ಹುಸೇನ್ ಗವಾರಿ(38), ಮರ್ದಾನ್ ಸಾಬ್(22), ರಫಾಯಿ (21), ಮೊಹಮ್ಮದ್ ಗೌಸ (22) ಚಿಕಿತ್ಸೆ ಪಡೆಯುತ್ತಿದ್ದಾರೆ.








