ADVERTISEMENT
Monday, August 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪೊಲೀಸರ ಎದುರೇ ಬಂಗಾರಪೇಟೆ ತಹಶೀಲ್ದಾರ್ ಕೊಲೆ: ಬೆಚ್ಚಿಬಿದ್ದ ಕರ್ನಾಟಕ..!

admin by admin
July 10, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಕೋಲಾರ: ಸರ್ಕಾರಿ ಕೆಲಸ ಮಾಡೋ ಅಧಿಕಾರಿಗಳ ಜೀವಕ್ಕೆ ಎಷ್ಟು ಮಾತ್ರ ಭದ್ರತೆಯಿದೆ ಎಂಬ ಪ್ರಶ್ನೆ ಈಗ ಕಾಡಲಾರಂಭಿಸಿದೆ. ಸರ್ವೇ ಕಾರ್ಯಕ್ಕೆ ತೆರಳಿದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೀಶ್ವರ ಮೇಲೆ ಪೊಲೀಸರು ಸಮ್ಮುಖದಲ್ಲೆ ಚಾಕು ಇರಿದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಣ್ಣೆದುರೆ ಇದ್ದ ಅಧಿಕಾರಿ ಕೊಲೆಯಾಗಿದ್ದಕ್ಕೆ ಅಧಿಕಾರಿ ವಲಯವೇ ಬೆಚ್ಚಿಬಿಚ್ಚಿದೆ.
ಚಂದ್ರಮೌಳೀಶ್ವರ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಆಗಿ ಕಳೆದ 3 ವರ್ಷದಿಂದ ಸೇವೆ ಸಲ್ಲಿಸ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಲವು ಸಭೆಗಳಲ್ಲಿ ಭಾಗಿಯಾಗಿದ್ದ ಚಂದ್ರಮೌಳೀಶ್ವರ, ಸಂಜೆಯೊಳಗೆ ಬಾರದ ಲೋಕಕ್ಕೆ ತೆರಳಿದ್ದಾರೆ.

ಘಟನೆ ನಡೆದಿದ್ದು ಹೇಗೆ..!
ಹೌದು, ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದ ನಿವೃತ್ತ ಶಿಕ್ಷಕ ವೆಂಕಟಪ್ಪ ಹಾಗು ಮತ್ತೊಬ್ಬರ ಮಧ್ಯೆ ಜಮೀನು ವಿವಾದವಿತ್ತು. ಈ ಪ್ರಕರಣ ಸಿವಿಲ್ ಕೋರ್ಟ್ ಮೆಟ್ಟಿಲೇರಿತ್ತು. ಇತ್ತೀಚೆಗೆ ವೆಂಕಟಪ್ಪ ವಿರುದ್ಧವಾಗಿ ದೂರು ಸಲ್ಲಿಸಿದ್ದ ರಾಮಮೂರ್ತಿ ಪರವಾಗಿ ತೀರ್ಪು ಬಂದು ಪ್ರಕರಣ ಇತ್ಯರ್ಥವಾಗಿತ್ತು,
ಪ್ರಕರಣ ಇತ್ಯರ್ಥವಾದರು ಜಮೀನು ಬಿಡದ ವೆಂಕಟಪ್ಪ ವಿರುದ್ಧ ರಾಮಮೂರ್ತಿ ಕಾಮಸಮುದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇತ್ಯರ್ಥವಾದ ಜಾಗದಲ್ಲಿ ಗುರ್ತಿಗಾಗಿ ಕಲ್ಲು ನೆಡುತ್ತಿರುವಾಗ ಆರೋಪಿ ವೆಂಕಟಪ್ಪ ಅಡ್ಡಿಪಡಿಸಿದ್ದಕ್ಕೆ ತಹಶೀಲ್ದಾರ್ ಗೆ  ರಾಮಮೂರ್ತಿ ದೂರು ನೀಡಿದ್ದರು.
ಗುರುವಾರ ಮಧ್ಯಾಹ್ನ 2.30ಕ್ಕೆ ಸ್ಥಳಕ್ಕೆ ಭೇಟಿ ನೀಡಿದ ಚಂದ್ರಮೌಳೀಶ್ವರ್ ಪರಿಶೀಲನೆ ನಡೆಸಿ ನ್ಯಾಯಾಲಯ ಆದೇಶದಂತೆ ಜಮೀನು ಬಿಡಲು ಸೂಚಿಸಿದ್ದಾರೆ. ಇದಕ್ಕೆ ನಿರಾಕರಿಸಿದ ನಿವೃತ್ತ ಶಿಕ್ಷಕ ವೆಂಕಟಪ್ಪ ಗಲಾಟೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿ ಇಬ್ಬರು ಪೇದೆಗಳು ಹಾಗು ಸಬ್‍ ಇನ್ಸ್ ಪೆಕ್ಟರ್ ದಯಾನಂದ್ ಇದ್ದರೂ ಯಾವುದೇ ಪ್ರಯೋಜನ ಆಗಿಲ್ಲ.
ಗಲಾಟೆ ಮಾಡುತ್ತಲೇ ಹತ್ತಿರಕ್ಕೆ ಬಂದ ವೆಂಕಟಪ್ಪ ಏಕಾಏಕಿ ತಾನು ತಂದಿದ್ದ ಚಾಕುವಿನಿಂದ ತಹಶೀಲ್ದಾರ್ ಚಂದ್ರಮೌಳೀಶ್ವರ ಎದೆ ಭಾಗದ ಮದ್ಯಕ್ಕೆ ಚುಚ್ಚಿ ಪರಾರಿಯಾಗಿದ್ದಾನೆ.

Related posts

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

August 31, 2026
ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

August 31, 2026

ಎದೆ ಭಾಗದ ಮಧ್ಯೆ ಚಾಕುವಿನಿಂದ ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವದಿಂದ ತಹಶೀಲ್ದಾರ್ ಚಂದ್ರಮೌಳೀಶ್ವರ ಕುಸಿದು ಬಿದ್ದಿದ್ದಾರೆ. ತಹಶೀಲ್ದಾರ್ ಸರ್ಕಾರಿ ವಾಹನದಲ್ಲೆ ಬಂಗಾರಪೇಟೆ ಆಸ್ಪತ್ರೆಗೆ ಚಂದ್ರಮೌಳೀಶ್ವರ ಅವರನ್ನು ರವಾನಿಸಲಾಯಿತು. ಪ್ರಥಮ ಚಿಕಿತ್ಸೆ ನೀಡಿ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ಆರಂಭಿಸುವ ಮುನ್ನವೇ ತಹಶೀಲ್ದಾರ್ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ಕೂಡಲೇ ಜಿಲ್ಲಾಧಿಕಾರಿ ಸಿ ಸತ್ಯಭಾಮ, ಎಸ್ಪಿಗಳಾದ ಕಾರ್ತಿಕ್ ರೆಡ್ಡಿ, ಮೊಹಮ್ಮದ್ ಸುಜೀತಾ ಸೇರಿದಂತೆ ಹಲವು ಅಧಿಕಾರಿಗಳು ಜಮಾಯಿಸಿದ್ದರು.
ಹಾಡಹಗಲೇ, ಪೊಲೀಸರ ಸಮ್ಮುಖದಲ್ಲೇ ಇಂತಹ ಕೃತ್ಯ ನಡೆದಿದೆ. ಇದಕ್ಕೆ ಯಾರು ಹೊಣೆ ಎಂಬುದು ತನಿಖೆಯ ನಂತರ ತಿಳಿಯಬೇಕಿದೆ. ಅಧಿಕಾರಿಯ ಸಾವಿಗೆ ಆಕ್ರೊಶ ವ್ಯಕ್ತಪಡಿಸಿರುವ ಸರ್ಕಾರಿ ನೌಕರರ ಸಂಘ ಶುಕ್ರವಾರ ಕೆಲಸಕ್ಕೆ ಗೈರಾಗುವ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದಿದೆ. ಆದರೆ, ಆರೋಪಿಗೆ ಮರಣ ದಂಡನೆ ವಿಧಿüಸಬೇಕೆಂದು ಸಂಘ ಆಗ್ರಹಿಸಿದೆ.

ಆರೋಪಿ ನಿವೃತ್ತ ಶಿಕ್ಷಕ ವೆಂಕಟಪ್ಪ ಸೆರೆ
ಘಟನೆ ನಂತರ ಪರಾರಿಯಾಗಿದ್ದ ಆರೋಪಿ ವೆಂಕಟಪ್ಪನನ್ನ ಕಾಮಸಮುದ್ರ ಪೊಲೀಸರು ಬAಧಿಸಿದ್ದಾರೆ. ಜಾಲಪ್ಪ

ಆಸ್ಪತ್ರೆಗೆ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

ಸೌಮ್ಯ ಸ್ವಭಾವದ ಚಂದ್ರಮೌಳೇಶ್ವರ್
ಯಾರಿಗು ನೋವು ಕೊಡದ ಚಂದ್ರಮೌಳೇಶ್ವರ್ ಸೌಮ್ಯ ಸ್ವಭಾವದವರು. ಚಂದ್ರಮೌಳೇಶ್ವರ್ ಅಗಲಿಕೆಗೆ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ವಿಷಾದ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಎಸ್ ಮುನಿಸ್ವಾಮಿ ಸಂಬಂಧಿಕರಿಗೆ ಸಾಂತ್ವಾನ ಹೇಳಿ, ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಬೇಕು ಸೂಚಿಸಿದ್ದಾರೆ. ಆಧಿಕಾರಿಗಳಿಗೆ ಕಠಿಣ ಕೆಲಸದ ವೇಳೆ ಸೂಕ್ತ ಪೊಲೀಸರು ಭದ್ರತೆ ಒದಗಿಸಬೇಕೆಂದು ತಿಳಿಸಿದ್ದಾರೆ.
ಘಟನೆ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ತಹಶೀಲ್ದಾರ್ ಕಾರು ಚಾಲಕ ನಾರಾಯಣಸ್ವಾಮಿ, ಕಾರು ವಾಪಸ್ ತರುವಂತೆ ಹೇಳಿದ್ರು, ಅಷ್ಟೊತ್ತಿಗೆ ಹೀಗಾಗಿದೆ. ಚಾಲಕನಾದ್ರು, ಸ್ವಂತ ಕುಟುಂಬದ ವ್ಯಕ್ತಿಯಂತೆ ನನ್ನನ್ನ ನೋಡಿ ಕೊಳ್ತಿದ್ರು ಎಂದು  ತಿಳಿಸಿದ್ದಾರೆ.

ತಹಶೀಲ್ದಾರ್ ಕುಟುಂಬಕ್ಕೆ 25 ಲಕ್ಷ ಪರಿಹಾರ
ಸರ್ವೆಗೆ ತೆರಳಿದ್ದ ವೇಳೆ ಕೊಲೆಯಾದ ತಹಶೀಲ್ದಾರ್ ಚಂದ್ರಮೌಳೇಶ್ವರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ಪರಿಹಾರ ಘೋಷಣೆ ಮಾಡಿದೆ.
ಆದರೆ, ಅಧಿಕಾರಿ ಸಾವಿಗೆ 1 ಕೋಟಿ ರುಪಾಯಿ ಪರಿಹಾರ ನೀಡುವಂತೆ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಸಂತಾಪ
ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಹತ್ಯೆ ಮಾಡಿರುವುದು ಆಘಾತಕಾರಿ ವಿಚಾರ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

Tags: BangarapetKolartehsildar murde
ShareTweetSendShare
Join us on:

Related Posts

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

by Shwetha
August 31, 2026
0

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ಮಾತ್ರ...

ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

by Shwetha
August 31, 2026
0

ಬೆಂಗಳೂರು: ರಾಜ್ಯ ರಾಜಕಾರಣದ ಇಬ್ಬರು ಪ್ರಮುಖ ನಾಯಕರ ನಡುವಿನ ವಾಗ್ವಾದ ಈಗ ತಾರಕಕ್ಕೇರಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ...

ಇಸ್ಲಾಂ ಧರ್ಮವೇ ಶ್ರೇಷ್ಠ ಎಂದ ಸಚಿವ ರಾಯರೆಡ್ಡಿ:ಮಠ ಮಂದಿರಗಳಿಗೆ ಹೋಗಲ್ಲ,ಹಜ್ ಯಾತ್ರೆಗೆ ಹೋಗುವ ಆಸೆ ಬಿಚ್ಚಿಟ್ಟ ಕಾಂಗ್ರೆಸ್ ನಾಯಕ

ಇಸ್ಲಾಂ ಧರ್ಮವೇ ಶ್ರೇಷ್ಠ ಎಂದ ಸಚಿವ ರಾಯರೆಡ್ಡಿ:ಮಠ ಮಂದಿರಗಳಿಗೆ ಹೋಗಲ್ಲ,ಹಜ್ ಯಾತ್ರೆಗೆ ಹೋಗುವ ಆಸೆ ಬಿಚ್ಚಿಟ್ಟ ಕಾಂಗ್ರೆಸ್ ನಾಯಕ

by Shwetha
August 31, 2026
0

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಬಸವರಾಜ ರಾಯರೆಡ್ಡಿ ಅವರ ಮಾತುಗಳು ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ...

ನಾಗೇಂದ್ರ ಖಾಲಿ ಮಾಡಿದ ಕುರ್ಚಿಗೆ ಕಾಂಗ್ರೆಸ್ ನಲ್ಲಿ ಬಿರುಸಿನ ಪೈಪೋಟಿ- ಬಳ್ಳಾರಿ ಕೋಟಾದ ಮೇಲೆ ಕಣ್ಣಿಟ್ಟ ಅನ್ನಪೂರ್ಣ ತುಕರಾಮ್:ಲಕ್ಷ್ಮಿ ಹೆಬ್ಬಾಳ್ಕರ್ ಪ್ರಭಾವಕ್ಕೆ ಬೀಳುತ್ತಾ ಬ್ರೇಕ್!

ನಾಗೇಂದ್ರ ಖಾಲಿ ಮಾಡಿದ ಕುರ್ಚಿಗೆ ಕಾಂಗ್ರೆಸ್ ನಲ್ಲಿ ಬಿರುಸಿನ ಪೈಪೋಟಿ- ಬಳ್ಳಾರಿ ಕೋಟಾದ ಮೇಲೆ ಕಣ್ಣಿಟ್ಟ ಅನ್ನಪೂರ್ಣ ತುಕರಾಮ್:ಲಕ್ಷ್ಮಿ ಹೆಬ್ಬಾಳ್ಕರ್ ಪ್ರಭಾವಕ್ಕೆ ಬೀಳುತ್ತಾ ಬ್ರೇಕ್!

by Shwetha
August 31, 2026
0

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಆ ಖಾಲಿ ಇರುವ ಕುರ್ಚಿಯನ್ನು ಅಲಂಕರಿಸಲು ಕಾಂಗ್ರೆಸ್ ಪಡಶಾಲೆಯಲ್ಲಿ...

ಭಾರತದಲ್ಲಿ ಮುಸ್ಲಿಮರಿರಬಾರದು ಎಂದು ಬಯಸುವಾತ ಹಿಂದುವೇ ಅಲ್ಲ: ಹಿಂದುತ್ವ ಎಂದರೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿ-ಅಮೆರಿಕದಲ್ಲಿ ಮೋಹನ್ ಭಾಗವತ್ ಸೌಹಾರ್ದತೆಯ ಮಂತ್ರ

ಭಾರತದಲ್ಲಿ ಮುಸ್ಲಿಮರಿರಬಾರದು ಎಂದು ಬಯಸುವಾತ ಹಿಂದುವೇ ಅಲ್ಲ: ಹಿಂದುತ್ವ ಎಂದರೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿ-ಅಮೆರಿಕದಲ್ಲಿ ಮೋಹನ್ ಭಾಗವತ್ ಸೌಹಾರ್ದತೆಯ ಮಂತ್ರ

by Shwetha
August 31, 2026
0

ನ್ಯೂಯಾರ್ಕ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕ ಪ್ರವಾಸದ ವೇಳೆ ಹಿಂದುತ್ವ ಮತ್ತು ಮುಸ್ಲಿಮರ ಕುರಿತು ಅತ್ಯಂತ ಮಹತ್ವದ ಹಾಗೂ ಸ್ಫೋಟಕ ಹೇಳಿಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram