2025ರ ಕೇಂದ್ರ ಬಜೆಟ್ ಕುರಿತಂತೆ ಕರ್ನಾಟಕ ಸರ್ಕಾರದ ಸಚಿವ ಕೃಷ್ಣ ಬೈರೇಗೌಡ ತೀವ್ರ ನಿರಾಸೆ ವ್ಯಕ್ತಪಡಿಸಿದ್ದು, ಬಜೆಟ್ ರಾಜ್ಯದ ಜನತೆಗೆ ಸಂಪೂರ್ಣ ಅತೃಪ್ತಿ ನೀಡಿದೆಯೆಂದು ಆರೋಪಿಸಿದ್ದಾರೆ. ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಜೆಟ್‌ನಲ್ಲಿ ಕರ್ನಾಟಕದ ಬೇಡಿಕೆಗಳಿಗೆ ಯಾವುದೇ ಪ್ರಾಮುಖ್ಯತೆ ಸಿಕ್ಕಿಲ್ಲ ಎಂದು ಕಿಡಿಕಾರಿದರು.
ಕರ್ನಾಟಕದ ಬೇಡಿಕೆಗಳಿಗೆ ನಿರ್ಲಕ್ಷ್ಯ
ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಪ್ರಾಮುಖ್ಯತೆ ಹೊಂದಿದ ಯೋಜನೆಗಳಿಗೆ ಅಥವಾ ಮೂಲಸೌಕರ್ಯ ಅಭಿವೃದ್ಧಿಗೆ ಯಾವುದೇ ಪರಿಹಾರ ನೀಡಲಾಗಿಲ್ಲ. ಕರ್ನಾಟಕ ದೇಶದ ಅರ್ಥ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುವ ರಾಜ್ಯವಾಗಿದ್ದು, ರಾಜ್ಯದ ತೆರಿಗೆಯನ್ನು ಬಳಸಿಕೊಂಡು ಬಿಹಾರಕ್ಕೆ ಮತ್ತು ಇತರ ರಾಜ್ಯಗಳಿಗೆ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕರ್ನಾಟಕದ ಜನತೆ ಏನು ಮಾಡಬೇಕು? ಕಡ್ಲೆ ಬೀಜ ತಿನ್ನೋಕೆ ಇರುವುದಾ? ಎಂದು ಸಚಿವರು ಗರಂ ಆಗಿ ಪ್ರಶ್ನೆ ಮಾಡಿದ್ದಾರೆ.
ರಾಜ್ಯದ ಬೇಡಿಕೆಗಳ ಪಟ್ಟಿ ಅನೇಕ
ಕರ್ನಾಟಕ ಸರ್ಕಾರವು ಈ ಬಜೆಟ್‌ನಲ್ಲಿ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿತ್ತು. ಅದರಲ್ಲಿ ಪ್ರಮುಖವಾಗಿ:
1. ಬೆಂಗಳೂರು ಮತ್ತು ಇತರ ನಗರಗಳ ರಸ್ತೆಗಳ ಅಭಿವೃದ್ಧಿಗೆ ಹಾಗೂ ಮೆಟ್ರೋ ಯೋಜನೆಗಳಿಗೆ ಹೆಚ್ಚುವರಿ ಅನುದಾನ.
2. ರಾಜ್ಯದ ರೈತರಿಗೆ ವಿಶೇಷ ಯೋಜನೆಗಳು ಮತ್ತು ಕೃಷಿ ಮಾರುಕಟ್ಟೆ ಸುಧಾರಣೆಗಾಗಿ ನೆರವು.
3. ಕರ್ನಾಟಕದ ಐಟಿ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ.
ರಾಜ್ಯಕ್ಕಿಂತ ಇತರರಿಗೆ ಹೆಚ್ಚಿನ ಅನುದಾನ
ಸಚಿವರು ಬಿಹಾರ ರಾಜ್ಯಕ್ಕೆ ನೀಡಲಾದ ಐದು-ಆರು ಪ್ರಮುಖ ಯೋಜನೆಗಳನ್ನು ಉಲ್ಲೇಖಿಸಿದರು. ಬಿಹಾರ ಮತ್ತು ಇತರ ರಾಜ್ಯಗಳಿಗೆ ವಿಶೇಷ ಯೋಜನೆಗಳನ್ನು ಘೋಷಿಸಿರುವ ಕೇಂದ್ರ, ಕರ್ನಾಟಕದ ದಶಕಗಳ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಿದೆ. ಇದು ಕರ್ನಾಟಕದ ವಿರುದ್ಧ ತಾರತಮ್ಯ ನೀತಿ ಎಂದು ತೋರುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್‌ನಲ್ಲಿ ಯಾವುದೇ ಯೋಜನೆ ಅಥವಾ ಹಣಕಾಸು ಸಹಾಯ ಸಿಗದಿದ್ದರೆ, ರಾಜ್ಯದ ಅಭಿವೃದ್ಧಿ ಹಿಂದುಳಿಯುವ ಭಯವನ್ನು ಸಚಿವರು ವ್ಯಕ್ತಪಡಿಸಿದರು. “ಲಕರ್ನಾಟಕದ ತೆರಿಗೆಗಳಿಂದ ಕೇಂದ್ರ ಸರ್ಕಾರ ದೊಡ್ಡ ಭಾಗವನ್ನು ಪಡೆದುಕೊಳ್ಳುತ್ತಿದ್ದು, ಆದರೆ ರಾಜ್ಯಕ್ಕೆ ತಿರುಗಿ ಅಲ್ಪ ಪಾಲು ಕೊಡುವುದು ನ್ಯಾಯವೇ? ಎಂದು ಪ್ರಶ್ನಿಸಿದರು.
ಇಡೀ ಬಜೆಟ್ ಕರ್ನಾಟಕದ ಪಾಲಿಗೆ ಬರೀ ಚೊಂಬಿ ನಂತೆ ಇದ್ದು, ರಾಜ್ಯದ ಜನತೆಗೆ ನಿರಾಸೆಯ ದಿನವಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತೀವ್ರವಾಗಿ ಟೀಕಿಸಿದರು.








