ಮೆಲ್ಬೋರ್ನ್ : ಆಸ್ಟೇಲಿಯಾದಲ್ಲಿ ಭಾರತೀಯರ ಮೇಲಿನ ದೌರ್ಜನ್ಯ ಮುಂದುವರಿದಿದೆ. ಮೆಲ್ಬೋರ್ನ್ ನಲ್ಲಿ ನೆಲೆಸಿರುವ ಟಿವಿ ನಟಿ ಚಾಂದಿನಿ ಭಗವಾನಿಗೆ ಅಲ್ಲಿ ಎದುರಾದ ಕೆಟ್ಟ ಅನುಭವದ ಬಗ್ಗೆ ವಿಡಿಯೋ ಮೂಲಕ ತಿಳಿಸಿದ್ದಾರೆ.
ವಿಡಿಯೋದಲ್ಲಿ ಪ್ರಕಾರ, ಆಕೆ ಮೆಲ್ಬೋರ್ನ್ ನಿಂದ ಬೇರೊಂದು ಪ್ರದೇಶಕ್ಕೆ ಹೋಗಲು ಬಸ್ ಹತ್ತಿದ್ದಾರೆ. ಅಲ್ಲಿ ಬಸ್ ಪ್ರಯಾಣ ಆಕೆಗೆ ಅದೇ ಮೊದಲು. ಬಸ್ ಆ ಕಡೆ ಈ ಕಡೆ ಸುತ್ತಾಡಿಕೊಂಡು ಹೋಗುತ್ತಿದ್ದರಿಂದ ಗಾಬರಿಗೊಂಡ ಚಾಂದಿನಿ, ಡ್ರೈವರ್ ಬಳಿ ಹೋಗಿ ಈ ಬಸ್ ತಾನು ಹೋಗಬೇಕಿದ್ದ ಪ್ರದೇಶಕ್ಕೆ ಹೋಗುತ್ತಾ..? ಎಂದು ಕೇಳಿದ್ದಾರೆ. ಆದ್ರೆ ಡ್ರೈವರ್ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ.
ಇದರಿಂದ ಸುಮ್ಮನಾದ ನಟಿ ಚಾಂದಿನಿ, ಮತ್ತೆ ಕೆಲ ಸಮಯದ ಬಳಿಕ ಮತ್ತೆ ಡ್ರೈವರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಆತ ಇಲ್ಲಿಂದ ಹೋಗ್ಬಿಡು ಎಂದಿದ್ದಾನೆ. ನಾನು ತುಂಬಾ ಗೌರವದಿಂದ ಕೇಳಿದರೂ ಆ ಡ್ರೈವರ್ ಇಲ್ಲಿಂದ ಹೋಗು ಹೋಗು ಎಂದು ಕಿರುಚಾಡುತ್ತಲೇ ಇದ್ದ. ಕೆಟ್ಟ ಭಾರತೀಯರೇ ಇಲ್ಲಿಂದ ಹೊರಟೋಗಿ ಎನ್ನುತ್ತಾ ಬೈಯ್ಯುತ್ತಲೇ ಇದ್ದ. ಇದರಿಂದ ನನಗೆ ಅಚ್ಚರಿ ಆಯ್ತು. ಆಗ ನಾನು ಹೇಗೆ ಸ್ಪಂದಿಸಬೇಕು ಎಂದು ಗೊತ್ತಾಗಲಿಲ್ಲ. ನಡುಗುತ್ತಲೇ ನಾನು ಬಸ್ ನಿಂದ ಇಳಿದುಬಿಟ್ಟೆ. ವರ್ಣಭೇದ ನೀತಿ ಇನ್ನೂ ಜೀವಂತವಾಗಿದೆ ಎಂಬೋದಕ್ಕೆ ಇದೇ ನಿದರ್ಶನ ಎಂದು ನನಗೆ ತಿಳಿದುಬಂತು ಎಂದಿದ್ದಾರೆ ಚಾಂದಿನಿ..
ಅಂದಹಾಗೆ ನಟಿ ಚಾಂದಿನಿ ಅಲ್ಲಿ ಕೆಲ ಕಾರ್ಯಕ್ರಮಗಳನ್ನು ನಡೆಸಿಕೊಡಲು ಮೆಲ್ಬೊರ್ನ್ ಗೆ ಹೋಗಿದ್ದು, ಲಾಕ್ ಡೌನ್ ನಿಂದಾಗಿ ಅಲ್ಲೇ ಸಿಲುಕಿಕೊಂಡಿದ್ದಾರೆ. ಆಕೆ ಕೊನೆಯದಾಗಿ ಸಂಜೀವಿನಿ ಎಂಬ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದರು.
https://twitter.com/i/status/1281049381299294209







