ಬೆಳಗಾವಿ: ಧಾರ್ಮಿಕ ಆಚರಣೆಗಳ ವಿಷಯದಲ್ಲಿ ಎಲ್ಲಾ ರಾಜಕಾರಣಿಗಳಿಗಿಂತ ಡಿಫ್ರೆಂಟ್ ಆಗಿ ಗುರುತಿಸಿಕೊಳ್ಳುವ ಬೆಳಗಾವಿಯ ಸಾಹುಕಾರ ಸತೀಶ್ ಜಾರಕಿಹೊಳಿ, ಈ ಬಾರಿ ತಮ್ಮ ಹೊಸ ಕಾರನ್ನು ಸ್ಮಶಾನದಿಂದ ಚಾಲನೆ ಮಾಡುತ್ತಿದ್ದಾರೆ.
ಜುಲೈ 13ರಂದು ಬೆಳಗಾವಿಯ ಸದಾಶಿವನಗರದಲ್ಲಿರುವ ಸ್ಮಶಾನದಲ್ಲಿ ತಮ್ಮ ನೂತನ ಇನ್ನೋವಾ ಕಾರನ್ನು ಚಾಲನೆ ಮಾಡಲಿದ್ದಾರೆ.
ಸಾಮಾನ್ಯವಾಗಿ ಕಾರು, ಬೈಕ್, ಲಾರಿ ಸೇರಿದಂತೆ ಹೊಸ ವಾಹನಗಳನ್ನು ಪ್ರಸಿದ್ಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಕುಂಬಳ ಕಾಯಿ ಒಡೆದು ಸಿಹಿ ಹಂಚಿ ಚಾಲನೆ ಮಾಡಲಾಗುತ್ತದೆ. ಆದರೆ, ಈ ವಿಚಾರದಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಡಿಫರೆಂಟ್. ಎಲ್ಲರೂ ಹೊಸ ವಾಹನಕ್ಕೆ ಪೂಜೆ ಮಾಡಿಸಿದರೆ, ಸತೀಶ್ ಜಾರಕಿಹೊಳಿ ಮೌಢ್ಯದ ವಿರುದ್ಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.
ಈ ಬಾರಿ ಮಹಾಮಾರಿ ಕೊರೊನಾ ಅಟ್ಟಹಾಸ ಇರುವ ಕಾರಣ ಅಭಿಮಾನಿಗಳು ಸೇರದಂತೆ ಮನವಿ ಮಾಡಲಾಗಿದೆ. ಪ್ರತಿ ವರ್ಷ ಡಿಸೆಂಬರ್ 6ರ ಅಂಬೇಡ್ಕರ್ ಪರಿನಿರ್ವಾಣದ ದಿನದಂದು ಸತೀಶ್ ಜಾರಕಿಹೊಳಿ ಹಗಲು-ರಾತ್ರಿ ಸ್ಮಶಾನದಲ್ಲೇ ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ಅಲ್ಲೇ ಸಾಮೂಹಿಕವಾಗಿ ಊಟ ಸವಿಯುತ್ತಾರೆ. ಗ್ರಹಣಗಳ ಸಂದರ್ಭದಲ್ಲೂ ಮೌಢ್ಯ ನಿವಾರಣೆಗೆ ಸ್ಮಶಾನದಲ್ಲಿ ಭೋಜನ ಸೇವಿಸಿ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.
‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ
ಬಾಗಲಕೋಟೆ: ಆರ್‌ಎಸ್‌ಎಸ್ ಹಿಂದೆಂದೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಆಗುವುದಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸವಾಲಿನ ಹೇಳಿಕೆಗೆ ರಾಜ್ಯ ಕಾಂಗ್ರೆಸ್...








