ಮಡಿಕೇರಿಯ ಓಂಕಾರೇಶ್ವರ ದೇವಾಲಯವು ಪ್ರಸಿದ್ಧವಾದ ಶಿವನ ದೇವಾಲಯವಾಗಿದೆ. ಈ ದೇವಾಲಯವು ಕೊಡಗು ಜಿಲ್ಲೆಯ ಮಡಿಕೇರಿ ಪಟ್ಟಣದಲ್ಲಿದೆ.
19 ನೇ ಶತಮಾನದಲ್ಲಿ, 1820 ರಲ್ಲಿ ರಾಜ ಲಿಂಗರಾಜೇಂದ್ರ II ನಿರ್ಮಿಸಿದ ಈ ದೇವಾಲಯವು ಭಕ್ತರನ್ನು ಮಾತ್ರವಲ್ಲದೆ ಎಲ್ಲರನ್ನೂ ಆಕರ್ಷಿಸುವ ಆಸಕ್ತಿದಾಯಕ ವಾಸ್ತುಶಿಲ್ಪವನ್ನು ಪ್ರಸ್ತುತಪಡಿಸುತ್ತದೆ. ನೀವು ಯಾವುದೇ ಧರ್ಮದವರಾಗಿದ್ದರೂ, ಗೋಥಿಕ್ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ಅನ್ವೇಷಿಸಲು ಯೋಗ್ಯವಾಗಿದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ.
* ಓಂಕಾರೇಶ್ವರ ದೇವಾಲಯವನ್ನು 18 ನೇ ಶತಮಾನದಲ್ಲಿ ರಾಜ ಲಿಂಗರಾಜೇಂದ್ರ II ನಿರ್ಮಿಸಿದರು.
* ಈ ದೇವಾಲಯದ ನಿರ್ಮಾಣವು ಗೋಥಿಕ್ ಮತ್ತು ಇಸ್ಲಾಮಿಕ್ ಶೈಲಿಗಳ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ.
* ಇದು ಕೂರ್ಗ್ನ ಜನಪ್ರಿಯ ಧಾರ್ಮಿಕ ತಾಣವಾಗಿದೆ.
ದೇವಾಲಯ ನಿರ್ಮಾಣ ಹಿನ್ನಲೆ : ಶ್ರೀ ಓಂಕಾರೇಶ್ವರ ದೇವಾಲಯವನ್ನು ನಿರ್ಮಿಸಲು ಲಿಂಗರಾಜೇಂದ್ರ ಒಡೆಯನ ಮನೋವಾಂಛಿತ ಸಂಕಲ್ಪ ಕಾರಣವೆಂದು ತಿಳಿದುಬರುತ್ತದೆ. ಈ ಸಂಬಂಧ ಮೂರು ರೀತಿಯ ಕಾರಣಗಳನ್ನು ಹೇಳುವವರಿದ್ದಾರೆ. ಆದರೆ ನಿಖರ ಅಥವಾ ಸತ್ಯ ಯಾವುದು ತಿಳಿಯುವುದಿಲ್ಲ ಮತ್ತು ರಾಜಶಾಸನದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ.
ಮೊದಲನೆಯದಾಗಿ ಲಿಂಗರಾಜೇಂದ್ರ ಒಡೆಯನಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣನೊಬ್ಬ ತನ್ನ ಬಡತನವನ್ನು ನಿವಾರಿಸಿಕೊಳ್ಳಲು ಮಗಳನ್ನೇ ಒಪ್ಪಿಸಲು ಬಂದಿದ್ದನಂತೆ. ಅರಮನೆಗೆ ಬ್ರಾಹ್ಮಣ ತನ್ನ ಮಗಳೊಂದಿಗೆ ಬಂದಾಗ, ಆ ವೇಳೆ ರಾಜ ಹೊರಹೋಗಿದ್ದ. ಅರಮನೆಯ ಕರಣಿಕ ಸುಬ್ಬರಸಯ್ಯ ಎಂಬಾತ (ಈತನೂ ಬ್ರಾಹ್ಮಣ) ಆ ಯುವತಿ ರಾಜನಿಗೆ ಲಭಿಸದಂತೆ ತಪ್ಪಿಸಿದ ಆರೋಪವಿದೆ. ಅರಮನೆಯ ಗೂಢಚಾರರಿಂದ ವಿಷಯ ತಿಳಿದು ರಾಜನು ಸುಬ್ಬರಸಯ್ಯನನ್ನು ರಾಜದ್ರೋಹಕ್ಕಾಗಿ ಕ್ರೂರ ರೀತಿಯಲ್ಲಿ ಕೊಲ್ಲಿಸಿದ ಕತೆಯಿದೆ. ಈ ಸುಬ್ಬರಸಯ್ಯ ಬ್ರಹ್ಮ ರಾಕ್ಷಸನಾಗಿ ಕಾಡತೊಡಗಿದ್ದನಂತೆ. ಆ ದಿಸೆಯಲ್ಲಿ ಶಿವದೇವಾಲಯ ಕಟ್ಟಿದ್ದಾಗಿ ಹೇಳುವವರಿದ್ದಾರೆ.
ಇನ್ನೊಂದು ಕತೆ ಪ್ರಕಾರ ಲಿಂಗರಾಜನಿಗೆ ಒಂದು ಕೈ ಬೆರಳು ಇರಲಿಲ್ಲವಂತೆ. ಈ ಕಾರಣ ಅರಮನೆಗೆ ಬಂದ ವೀರಶೈವ ಜಂಗಮನೊಬ್ಬ ಭಿಕ್ಷೆ ಸ್ವೀಕರಿಸಲು ನಿರಾಕರಿಸಿದಾಗ, ಸಿಟ್ಟುಗೊಂಡ ರಾಜ ಆ ಜಂಗಮನನ್ನು ನಿಂದಿಸಿದನಂತೆ. ಜಂಗಮ ಪ್ರತಿಯಾಗಿ ಶಾಪವಿತ್ತು ಕುಲನಾಶದ ಸುಳಿವು ನೀಡಿದ್ದನಂತೆ. ಆ ಪ್ರಾಯಶ್ಚಿತವಾಗಿ ರಾಜ ದೇವಾಲಯ ಕಟ್ಟಿಸಿದನಂತೆ. ಇಂಥ ವಿಭಿನ್ನ ಕತೆಗಳನ್ನು ರಾಜಾಸೂಯೆಯಿಂದ ಹೆಣೆಯುವವರಿದ್ದರೂ ನಿಖರ ದಾಖಲೆಯಿಲ್ಲ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ನಿರ್ಮಾಣ ಕಾಲ : ಶ್ರೀ ಓಂಕಾರೇಶ್ವರ ದೇವಾಲಯವನ್ನು 2ನೇ ಲಿಂಗರಾಜನು 1.6.1817ರಲ್ಲಿ ನಿರ್ಮಿಸಲು ಆರಂಭಿಸಿದ್ದಾಗಿ ತಿಳಿದು ಬರುತ್ತದೆ. ಹೀಗೆ ಈಶ್ವರನಾಮ ಸಂವತ್ಸರದಲ್ಲಿ ಪ್ರಾರಂಭಿಸಿದ ದೇವಾಲಯವನ್ನು ಚೈತ್ರಶುದ್ಧ ದ್ವಾದಶಿಯ ಭಾನುವಾರದಂದು ಎರಡು ವರ್ಷ ಒಂಭತ್ತು ತಿಂಗಳು ಹಾಗೂ ಇಪ್ಪತ್ತೈದು ದಿನಗಳಲ್ಲಿ ಕೆಲಸ ಪೂರೈಸಿದ್ದಾಗಿ ತಿಳಿದು ಬರುತ್ತದೆ. ವಿನೂತನ ಶೈಲಿಯ ಕಾಮಗಾರಿಯ ಕೆಲಸ ಪೂರ್ಣಗೊಳಿಸಿ, ದಿನಾಂಕ 26.3.1820ರ ವಿಕ್ರಮ ಸಂವತ್ಸರದಲ್ಲಿ ಪ್ರತಿಷ್ಠಾಪಿಸಿದ್ದಾಗಿದೆ.
ಓಂಕಾರೇಶ್ವರ ದೇವಾಲಯದ ಸಮಯ:
ಈ ದೇವಾಲಯವು ತಿಂಗಳ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ. ಓಂಕಾರೇಶ್ವರ ದೇವಾಲಯದ ಸಮಯ ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 12 ರವರೆಗೆ. ಮತ್ತೆ ಸಂಜೆ 5 ಗಂಟೆಗೆ ತೆರೆದು ರಾತ್ರಿ 8 ಗಂಟೆಗೆ ಮುಚ್ಚುತ್ತದೆ. ದೇವಾಲಯಕ್ಕೆ ಭೇಟಿ ನೀಡಲು ಯಾವುದೇ ಪ್ರವೇಶ ಶುಲ್ಕವಿಲ್ಲ. ವರ್ಷದ ಯಾವುದೇ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡಬಹುದು.
ಓಂಕಾರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ಸುಮಾರು 1 ಗಂಟೆ ತೆಗೆದುಕೊಳ್ಳುತ್ತದೆ.
ಓಂಕಾರೇಶ್ವರ ದೇವಸ್ಥಾನದ ಪೂಜಾ ವೇಳಾಪಟ್ಟಿಗಳು ಈ ಕೆಳಗಿನಂತಿವೆ. ಭಕ್ತರು ಮತ್ತು ಪ್ರಯಾಣಿಕರು ತಮ್ಮ ಭೇಟಿಯನ್ನು ಅದಕ್ಕೆ ಅನುಗುಣವಾಗಿ ಯೋಜಿಸಬಹುದು.
ಅಭಿಷೇಕ – ಬೆಳಿಗ್ಗೆ 6:30 ರಿಂದ 6:45 ರವರೆಗೆ
ಗಂಗಾ ಪೂಜೆ – ಬೆಳಿಗ್ಗೆ 7:00 ಗಂಟೆಗೆ
ಮಹಾಪೂಜೆ – ಮಧ್ಯಾಹ್ನ 12:00 ಗಂಟೆಗೆ
ಮಹಾ ಪೂಜೆ – ರಾತ್ರಿ 8:00 ಗಂಟೆಗೆ
ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ ನಡೆಯುತ್ತದೆ. ಕೋಟೆ ಗಣಪತಿ ದೇವಸ್ಥಾನದಲ್ಲಿ ಪ್ರತಿ ತಿಂಗಳ ಮೊದಲ ಮಂಗಳವಾರ ಗಣಹೋಮವನ್ನು ಸಹ ನಡೆಸಲಾಗುತ್ತದೆ.
ಓಂಕಾರೇಶ್ವರ ದೇವಸ್ಥಾನವನ್ನು ತಲುಪುವುದು ಹೇಗೆ..?
ಮಡಿಕೇರಿ ಪಟ್ಟಣದಲ್ಲಿರುವ ಓಂಕಾರೇಶ್ವರ ದೇವಸ್ಥಾನವನ್ನು ಯಾವುದೇ ತೊಂದರೆಯಿಲ್ಲದೆ ತಲುಪಬಹುದು. ಮಡಿಕೇರಿ ಪಟ್ಟಣವು ಕರ್ನಾಟಕದ ಉಳಿದ ಭಾಗಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಮಡಿಕೇರಿಗೆ ಬಂದ ನಂತರ, ಪ್ರವಾಸಿಗರು ದೇವಸ್ಥಾನವನ್ನು ತಲುಪಲು ಆಟೋ-ರಿಕ್ಷಾ ಅಥವಾ ಟ್ಯಾಕ್ಸಿಗಳಂತಹ ಸ್ಥಳೀಯ ಸಾರಿಗೆಯನ್ನು ಬಾಡಿಗೆಗೆ ಪಡೆಯಬಹುದು.