ನಟಿ ರನ್ಯಾ ರಾವ್ ಸಂಬಂಧಿಸಿದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ದಿಢೀರ್ ಯೂ-ಟರ್ನ್ ತೆಗೆದುಕೊಂಡಿದೆ. ಮೊನ್ನೆ ರಾತ್ರಿ CID ತನಿಖೆಗೆ ವಹಿಸುವಂತೆ ಆದೇಶ ನೀಡಿದ್ದ ಸರ್ಕಾರ, ಕೇವಲ 24 ಗಂಟೆಗಳೊಳಗೆ ಅದೇ ಆದೇಶವನ್ನು ವಾಪಸ್ ಪಡೆದಿದೆ. ಈ ನಿರ್ಧಾರ ರಾಜಕೀಯ ವಲಯದಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
CID ತನಿಖೆ ಕೈಬಿಟ್ಟ ಸರ್ಕಾರ
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಹೆಸರು ಕೇಳಿಬಂದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ CID ತನಿಖೆಗೆ ವಹಿಸಲು ಆದೇಶಿಸಿತ್ತು. ಆದರೆ ನಿನ್ನೆ ರಾತ್ರಿಯೇ ಅದೇ ಆದೇಶವನ್ನು ಹಿಂಪಡೆದುಕೊಳ್ಳಲಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಯಾವ ಕಾರಣಕ್ಕೆ ಹಿಂಪಡೆಯಲಾಯಿತು?
ಪ್ರಕರಣಕ್ಕೆ ಸಂಬಂಧಿಸಿದಂತೆ CID ತನಿಖೆ ಮುಂದುವರಿಯುತ್ತಿದ್ದಂತೆ, ಅನೇಕ ರಾಜಕೀಯ ಮತ್ತು ಪ್ರಭಾವಿ ವ್ಯಕ್ತಿಗಳ ಹೆಸರುಗಳು ಹೊರಬರುತ್ತವೆ ಎಂಬ ಶಂಕೆ ಮೂಡಿತ್ತು. ಈ ಹಿನ್ನಲೆಯಲ್ಲಿ ಸರ್ಕಾರದ ಮೇಲೆ ಭಾರೀ ಒತ್ತಡ ಬರಬಹುದು ಎಂಬ ಊಹಾಪೋಹಗಳು ಹಬ್ಬಿವೆ.
ಕಾಣದ ಕೈಗಳ ಒತ್ತಡವೇ?
ನಟಿ ರನ್ಯಾ ಪ್ರಕರಣದಲ್ಲಿ ಕೆಲವು ಪ್ರಭಾವಿ ಕೈಗಳ ಪ್ರಭಾವ ಹಿನ್ನಲೆ ಇದೆಯೇ? ಸರ್ಕಾರದ ಈ ತೀರ್ಮಾನಕ್ಕೆ ರಾಜಕೀಯ ಒತ್ತಡ ಕಾರಣವೇ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ.
ಈ ಪ್ರಕರಣದ ಮುಂದಿನ ಬೆಳವಣಿಗೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.