ಹೈದರಾಬಾದ್ : ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರ ತಾಜಾ ಸಿನಿಮಾ ರಾಧೆ ಶ್ಯಾಮ್ ಫಸ್ಟ್ ಲುಕ್ ಗೆ ಬೊಂಬಾಟ್ ರೆಸ್ಪಾನ್ಸ್ ಸಿಗುತ್ತಿದೆ. ಶುಕ್ರವಾರ ಬಿಡುಗಡೆಯಾದ ಫಸ್ಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುನ್ನುಗ್ಗುತ್ತಿದೆ. ಟ್ವಿಟ್ಟರ್ ನಲ್ಲಿ ನಿನ್ನೆ ಟಾಪ್ ಟ್ರೆಂಡಿಂಗ್ ನಲ್ಲಿ ಸ್ಥಾನಪಡೆದದ್ದು ಅಲ್ಲದೇ ಸಿಂಗಲ್ ಹ್ಯಾಷ್ ಟ್ಯಾಗ್ ನಲ್ಲಿ 3.8 ಮಿಲಿಯನ್ ಗೂ ಹೆಚ್ಚು ರಿಟ್ವೀಟ್ ಗಳನ್ನು ಗಳಿಸಿ ರಿಕಾರ್ಡ್ ಸೃಷ್ಠಿಸಿದೆ.
ಇನ್ನು ಬಾಹುಬಲಿ ದಿ ಬಿಗಿನಿಂಗ್ ಸಿನಿಮಾ ಬಿಡುಗಡೆಯಾಗಿ ಶುಕ್ರವಾರಕ್ಕೆ 5 ವರ್ಷ ಪೂರೈಸಿದ ಹಿನ್ನೆಲೆ ಪ್ರಭಾಸ್ ಹೆಸರಿನ ವಿವಿಧ ಹ್ಯಾಷ್ ಟ್ಯಾಗ್ ಗಳು ನಿನ್ನೆ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದವು. ರಿಟ್ವೀಟ್, ಕಮೆಂಟ್ಸ್, ಫೋಟೋಸ್, ವಿಡಿಯೋಗಳೊಂದಿಗೆ ಸೋಶಿಯಲ್ ಮಿಡಿಯಾದಲ್ಲಿ ಪ್ರಭಾಸ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ರಾಧೆಶ್ಯಾಮ್ ಸಿನಿಮಾವನ್ನು ಜಿಲ್ ಫೇಮ್ ರಾಧಾಕೃಷ್ಣ ಕುಮರ್ ಅವರು ತೆರೆಗೆ ತರುತ್ತಿದ್ದಾರೆ. ಗೋಪಿಕೃಷ್ಣಾ ಮೂವಿಸ್, ಯುವಿ ಕ್ರಿಯೆಷನ್ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ. ತೆಲುಗು, ಮಲಯಾಳಂ, ಹಿಂದಿ, ತಮಿಳ ಭಾಷಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.








