ಕೋಲಾರ: ಬಂಗಾರಪೇಟೆ ತಹಶೀಲ್ದಾರ್ ಕೊಲೆ ಹಿಂದೆ ಕೆಲ ಗುಂಡಾ ವ್ಯಕ್ತಿಗಳು ಪ್ರಚೋದನೆ ಶಂಕೆ ಇದೆ ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ತಾಲೂಕು ದಂಡಾಧಿಕಾರಿ ಚಂದ್ರಮೌಳೇಶ್ವರ ಅವರನ್ನು ಕೊಲೆ ಆಗ್ತಾರೆ ಅಂದ್ರೆ ಇನ್ನೆಷ್ಟು ಭದ್ರತೆ ಇರಬೇಕು ?
ಕೇವಲ ಪೊಲೀಸ್ ಹಂತದ ತನಿಖೆ ನಡೆಸಬಾರದು. ಈ ಕೇಸ್‍ನ್ನು ಸಿಬಿಐಗೆ ಕೊಟ್ಟು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಕೊಲೆ ಮಾಡಿರುವ ವ್ಯಕ್ತಿ ವೆಂಕಟಾಚಲ ತಹಶೀಲ್ದಾರ್ ಸ್ಥಳಕ್ಕೆ ಬರಲೇಬೇಕು ಎಂದು ಹಠ ಹಿಡಿದು ಕರೆಸಿಕೊಂಡಿದ್ದ.
ಕೊಲೆ ಹಿಂದೆ ದೊಡ್ಡ ಮಾಫಿಯಾದ ಕೈವಾಡವಿದೆ ಎಂದು ಶಾಸಕ ನಾರಾಯಣಸ್ವಾಮಿ ಶಂಕೆ ವ್ಯಕ್ತಪಡಿಸಿದ್ದಾರೆ.
ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಕೊಲೆ ಖಂಡಿಸಿ ಇಂದು ಬಂಗಾರಪೇಟೆ ತಾಲೂಕಿನಾದ್ಯಂತ ಸ್ವಯಂ ಘೋಷಿತ ಬಂದ್‍ಗೆ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದವು.
ಜುಲೈ 9ರ ಸಂಜೆ ಬಂಗಾರಪೇಟೆ ತಾಲೂಕಿನ ದೊಡ್ಡಕಳವಂಚಿ ಗ್ರಾಮದಲ್ಲಿ ನಡೆದ್ದಿದ್ದ ಜಮೀನಿನ ಸರ್ವೆ ನಡೆಯುತ್ತಿದ್ದಾಗ ನಿವೃತ್ತ ಶಿಕ್ಷಕ ವೆಂಕಟಾಚಲ ಚಾಕುವಿನಿಂದ ಇರಿದು ತಹಶೀಲ್ದಾರ್ ಚಂದ್ರಮೌಳೇಶ್ವರ ಕೊಲೆ ಮಾಡಿದ್ದ.
ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ
ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ಮಾತ್ರ...








