ADVERTISEMENT
Wednesday, November 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು, ಅಲಂಕಾರ, ದಕ್ಷಿಣ ಕನ್ನಡ ಇತಿಹಾಸ ಮತ್ತು ಮಹಿಮೆ

Sri Durgaparameshwari Temple Sri Kshetra Sharavoor, Decoration, South Kannada History and Glory

Shwetha by Shwetha
April 11, 2025
in ಮಾರ್ಜಲ ಮಂಥನ, Marjala Manthana, Newsbeat
{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"401636471009211","type":"ugc"}]}}

{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"401636471009211","type":"ugc"}]}}

Share on FacebookShare on TwitterShare on WhatsappShare on Telegram

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಆಲಂಕಾರು ಗ್ರಾಮ ಕೇಂದ್ರದ ದಕ್ಷಿಣಕ್ಕಿರುವ ಶರವೂರು ಶ್ರೀ ದುರ್ಗಾ ಪರಮೇಶ್ವರೀ ದೇವಾಲಯ, ಬಲ್ಯ, ಹಳೆನೇರೆಂಕಿ, ಆಲಂಕಾರು, ಪೆರಾಬೆ, ಕುಂತೂರು ಗ್ರಾಮಗಳನ್ನೊಳಗೊಂಡ ಈ ಸೀಮೆಯ ದೇವಾಲಯ, ಕುಮಾರಧಾರಾ ನದಿ ತಟದಿಂದ ಎರಡು ಕಿಲೋ ಮೀಟರುಗಳಷ್ಟು ಅಂತರದಲ್ಲಿದೆ , ಸುತ್ತಲೂ ವನಗಳಿಂದ ಆವೃತವಾದ ಈ ದೇವಾಲಯದಲ್ಲಿ ಭಕ್ತರ ಅಭೀಷ್ಟವನ್ನು ಈಡೇರಿಸುವ ನೆಲೆ ನಿಂತಿರುವವಳು ಶ್ರೀ ಶೂಲಿನೀ ದೇವಿ. ಸದಾ ನೀರಿನ ಬುಗ್ಗೆ ಇರುವ ಪ್ರದೇಶವಾಗಿರುವುದರಿಂದ ಈ ಸ್ಥಳಕ್ಕೆ ಸರಃಪುರ – ಸರೋವರ- ಶರವೂರು ಎಂಬ ಹೆಸರು ಬಂದಿರುವುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ವಿರಳ ಹಾಗೂ ವಿಶಿಷ್ಟವಾದ ದ್ವಿಬಾಹುಯುಕ್ತ ‘ಶೂಲಿನಿ’, ಪ್ರಧಾನ ಆಯುಧವಾಗಿ ಬಲಗೈಯಲ್ಲಿ ಶೂಲವನ್ನೂ, ಎಡಗೈಯಲ್ಲಿ ಪದ್ಮವನ್ನು, ಸಣ್ಣ ಶಿರೋಭೂಷಣವನ್ನೂ ಧರಿಸಿದ್ದು, ಶಿಲ್ಪಕಲೆಯ ದೃಷ್ಟಿಯಿಂದಲೂ ಜೀವಂತಿಕೆಯಿಂದ ಕೊಡಿದ್ದು, ಕ್ಷಣ ಕ್ಷಣಕ್ಕೂ ಭ್ರಮೆ ಹುಟ್ಟಿಸುವ ಮುಖಚರ್ಯೆ ಇಲ್ಲಿನ ಶಿಲಾ ಮೂರ್ತಿಯ ವೈಶಿಷ್ಟ್ಯ. ಪುರಾಣ ದೇವತಾಖ್ಯಾನದ ಮೇಲೆ ವಿಶ್ಲೇಷಿಸಿದ್ದರೆ ಈ ಮೂರ್ತಿ ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ‘ಕೌಮಾರಿ’ಯ ಅಧಿಕಾಂಶವನ್ನು ವ್ಯಕ್ತಪಡಿಸುವ ಶೂಲಿನಿ ಎನ್ನಬೇಕಾಗುತ್ತದೆ. ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣೀ, ಚಾಮುಂಡೀ ಇವರೇ ಸಪ್ತ ಮಾತೃಕೆಯರು. ‘ಮುಖ ಹೃದಯಕ್ಕೆ ಹಿಡಿದ ಕನ್ನಡಿ’ ಎನ್ನುವ ಮಾತಿನಂತೆ ಈ ಸಪ್ತ ಮಾತೃಕೆಯರು ತಮ್ಮ ಸ್ವಭಾವವನ್ನು ಬಾಹ್ಯವಾಗಿ ವ್ಯಕ್ತಪಡಿಸುವುದು ಸಹಜ, ಕೌಮಾರಿಯ ಮೂಲ ಸ್ವಭಾವ ಭ್ರಮೆ, ಕಣ್ಣ್ಕಟ್ಟು ಮಾಯೆ, ಸ್ವಪ್ನ ಸೃಷ್ಟಿಯಾಗಿದೆ. ಇಲ್ಲಿನ ಮೂರ್ತಿಯು ಈ ಮಾತಿಗೆ ಹೊರತಾಗಿಲ್ಲ. ಲಕ್ಷ್ಮೀ ಸಾನಿಧ್ಯವಿರುವ ಮೂರ್ತಿಗಳು ಕೂಡ ಪ್ರಸನ್ನವದನಾರವಿಂದದಿಂದ ಕೂಡಿರುತ್ತವೆನ್ನುವುದು ಪುರಾಣ ದೇವತಾಖ್ಯಾನ ಹಾಗೂ ಜ್ಞಾನವೃದ್ದರಿಂದ ತಿಳಿದು ಬರುವ ಮಾತು, ಆದರೆ ಭ್ರಮೆ ಹುಟ್ಟಿಸುವುದು ಕ್ರಿಯೆ ಆಕೆಗೆ ಸಹಜವಲ್ಲ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

Related posts

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

November 25, 2026
ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ಮಹಿಳೆಯರಿಗೆ ತಲಾ ₹20,000 ನೀಡಲು ಬಿಜೆಪಿ ಯೋಜನೆ?

ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ಮಹಿಳೆಯರಿಗೆ ತಲಾ ₹20,000 ನೀಡಲು ಬಿಜೆಪಿ ಯೋಜನೆ?

November 25, 2026

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಕ್ರಿ.ಶ. 12ನೇ ಶತಮಾನ-ಶರವೂರು ದೇವಾಲಯದ ಕೌಮಾರಿ ಸ್ವರೂಪಿ ಶೂಲಿನಿಯ ಪ್ರತಿಷ್ಠೆಯಾಗಿದೆ ಎನ್ನಬಹುದು. ಈ ಮಾತನ್ನು ಸಮರ್ಥಿಸಲು ಸಿಗುವ ಕೆಲವೊಂದು ನಿದರ್ಶನಗಳೂ ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ. ಸುಳ್ಯ ತಾಲೂಕು ಬೆಳ್ಳಾರೆ ಸಮೀಪವಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ಸದರಿ ತಾಲ್ಲೂಕು ಎಡಮಂಗಲ ಸಮೀಪವಿರುವ ಕೇರ್ಪಟ ಶ್ರೀ ವನದುರ್ಗಾದೇವಿ ಹಾಗೂ ಶರವೂರು ಶೂಲಿನಿ ದೇವಿ ಅಕ್ಕ-ತಂಗಿಯರೆಂಬ ಪ್ರತೀತಿ ಭಾವುಕ ವ್ಯಕ್ತಿಗಳಿಂದ ತಿಳಿದು ಬರುವ ವಿಚಾರ.

ಶರವೂರು ಮತ್ತು ಕೇರ್ಪಟದ ಮೂಲ ಬಿಂಬದ ಕಲಾಪೂರ್ಣ ಶಿಲ್ಪಶೈಲಿ ಜೀವಂತಿಕೆಯಿಂದಿದ್ದು ಹೊಯ್ಸಳ ಶೈಲಿಗೆ ಸರಿ ಹೊಂದುವುದಾಗಿದೆ. ಶಿಲೆಯ ಪ್ರಾಚೀನತೆಯ ದೃಷ್ಟಿಯಿಂದಲೂ ಈ ಶೂಲಿನಿಯ ಮೂರ್ತಿಗೆ ಸುಮಾರು 800 ವರ್ಷಗಳ ಹಿನ್ನೆಲೆಯನ್ನು ಹೇಳಬಹುದಾಗಿದೆ. ಶರವೂರು ದೇವಾಲಯದ ಜಾತ್ರೆಯ ಸಂದರ್ಭದಲ್ಲಿ ನಡೆಯುವ ‘ದರ್ಶನ ಬಲಿ’ ಯಂದು ರಾತ್ರಿ ಉತ್ಸವ ದೇವರು ಸವಾರಿ ಮಂಟಪದಲ್ಲಿ ಆಸೀನರಾದ ನಂತರ ಈರ್ವರು ಬಂಟರು ದೇವರ ಅಪ್ಪಣೆ ಪಡೆದು, ದೇವಾಲಯದ ಮೂಡುಬದಿಯಲ್ಲಿರುವ ‘ಬಮಟರ ಕಾಳಗದ ಕಟ್ಟೆ’ಗೆ ಕತ್ತಿ, ಗುರಾಣಿ ಸಮೇತರಾಗಿ ಹೋಗಿ ‘ನಾಳೆ ನಾವು ಯುದ್ದಕ್ಕೆ ಬರುತ್ತೇವೆ ‘ ಎಂದು ಪೂರ್ವ ಸೂಚನೆಗೆ ತಕ್ಕಂತೆ ‘ರಣವೀಳ್ಯ ‘ ಕೊಟ್ಟು ಬರುವ ವಾಡಿಕೆ ಇದೆ. ಮರುದಿವಸ¸ ರಥೋತ್ಸವವಾದ ನಂತರ ಹಿಂದಿನ ದಿವಸದ ಮಾತಿನಂತೆ ಯುದ್ದದ ಕಟ್ಟಳೆ ಮುಗಿಸಿ, ವಿಜಯದ ಸಂಕೇತವಾಗಿ ವಸಂತ ಕಟ್ಟೆಯಲ್ಲಿ ಶ್ರೀ ದೇವಿಗೆ ಪೂಜೆ ನಡೆಯುತ್ತದೆ. ಮರುದಿವಸ ಅವಭೃತ ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ದೈವದ ಪೂಜಾರಿಗಳಿಬ್ಬರು ಹಿಂದಿನ ದಿವಸ ಆಗಿದ್ದ ಯುದ್ದದ ಭೂಮಿಗೆ ಹೋಗಿ ಎರಡೂ ಪಕ್ಷದವರನ್ನು ರಾಜಿ ಮಾಡಿಸಿದ ನಂತರವಷ್ಟೇ ದೇವರು ಮುಂದುವರಿಯುವ ಸಂದರ್ಭವೊಂದು ಇಂದಿಗೂ ನಡೆಯುತ್ತಿದೆ. ಶ್ರೀ ಜಲ ದುರ್ಗಾ ದೇವಿ ಹಾಗೂ ಶರವೂರು ಶೂಲಿನೀ ದೇವಿಯರ ಜಾತ್ರೆಯು ಮೀನ ಸಂಕ್ರಮಣದಂದು ಆರಂಭವಾಗಿ, ಅವಭೃತ ಸಂದರ್ಭದ ಸ್ನಾನ ಕುಮಾರಧಾರ ನದಿಯ ‘ ಶಾಂತಿಮುಗೇರು ‘ ಎಂಬಲ್ಲಿ ಏಕ ಕಾಲದಲ್ಲಿ ನಡೆಯುತ್ತಿತ್ತೆಂದು ಅನುಭವಿಗಳ ಮಾತಾಗಿದೆ . ಮೇಲಿನ ವಿಚಾರಗಳನ್ನು ಗಮನಿಸಿದಾಗ, ಶರವೂರು ಹಾಗೂ ಪೆರುವಾಜೆ ದೇವಾಲಯಗಳಿಗೆ ಅರಸು ಮನೆತನಗಳ ಹಿನ್ನೆಲೆ , ಪರಸ್ಪರ ಸಂಪರ್ಕ ಕಂಡು ಬರುತ್ತದೆ . ಮೂರ್ತಿ ಶಿಲ್ಪದ ಶೈಲಿ, ದೇವಾಲಯವನ್ನು ನಿರ್ಮಿಸಿದ ಶೈಲಿ ಹಾಗೂ ಇಂದಿನ ಇಲ್ಲಿನ ಆಡಳಿತ ಪದ್ದತಿ ಈ ಮೂರೂ ವಿಚಾರಗಳು ಶರವೂರು ದೇವಾಲಯದ ಇತಿಹಾಸವನ್ನು ಹೊಯ್ಸಳರ ಕಾಲಕ್ಕೆ ಸೇರಿದ್ದಾಗಿರುತ್ತದೆ.

ಕಲ್ಕುಡ, ಶಿರಾಡಿ, ರುದ್ರ, ಚಾಮುಂಡಿ ಹುಲಿ ಭೂತ, ಇಷ್ಟ ದೈವಾಧಿಗಳನ್ನು ತನ್ನ ಬಂಟರನ್ನಾಗಿಸಿಕೊಂಡಿರುವ ಶೂಲಿನಿಯ ದೇವಾಲಯದ ನೈಋತ್ಯ ಭಾಗ-ಪೌಳಿಯ ಒಳಭಾಗದಲ್ಲಿ ‘ಗಣಪತಿ’ ಯ ಸಣ್ಣ ಗುಡಿಯಿದೆ. ಬಳಪದ ಕಲ್ಲಿನಿಂದ ನಿರ್ಮಿತವಾಗಿರುವ ಈ ಮೂರ್ತಿ ಕುಳಿತ ಭಂಗಿಯಲ್ಲಿದೆ. ಸಣ್ಣ ಶಿರೋಭೂಷಣ, ನಾಲ್ಕು ಕೈಗಳು, ಲಂಬ ಯಜ್ಙೋಪವೀತವಿರುವ ಈ ವಿಗ್ರಹದ ಸೊಂಡಿಲು ಎಡಗೈ ಮೇಲಿದೆ. ಸಕಲಾ ಅಭೀಷ್ಠ ಫಲಪ್ರದಾಯಕನಾದ ಈ ಮಹಾಗಣಪತಿಯ ಮೂರ್ತಿ ಬಹಳಷ್ಟು ಜೀರ್ಣೋದ್ದಾರ ಸ್ಥಿತಿಯಲ್ಲಿತ್ತು, ಪ್ರಕೃತ ಕಪ್ಪು ಶಿಲೆಯಿಂದ ನೂತನ ವಿಗ್ರಹ ಸ್ಥಾಪನೆಗೊಂಡಿದೆ. ದೇವಾಲಯದ ಹೊರ ಅಂಗಳದ ನೈಋತ್ಯ ಭಾಗದಲ್ಲಿ ಸ್ಥಳಾಧಿ ದೇವತೆಯಾದ ಗಂಗಾ ಮಾತೆಯ ಗುಡಿಯಿದೆ. ಆರಾಧ್ಯ ದೇವತೆ ಶೂಲಿನಿಯಾದರೂ ಸ್ಥಳ ದೇವತೆ ಗಂಗಾ ಮಾತೆಯೇ ಆಗಿರುವುದು ಇಲ್ಲಿನ ವಿಶೇಷತೆಯಾಗಿದೆ. ಆರಾಧ್ಯ ದೇವತೆಗೆ ನಡೆಯುವ ಸೇವೆಯು ವಿಶೇಷವಾಗಿ ಕಾರ್ತಿಕ ಪೂಜೆಯ – ಶೇಕಡಾ ಐವತು ಪಾಲು ಗಂಗಾ ಮಾತೆಗೂ ಸಲ್ಲಬೇಕೆನ್ನುವುದು ಮೇಲಿನ ಮಾತಿಗೆ ಹೆಚ್ಚು ಪುಷ್ಟಿಯನ್ನು ನೀಡುತ್ತದೆ. ಸದಾ ಜಲಾವೃತವಾಗಿರುವ ಪ್ರದೇಶವಾದ ಕಾರಣ, ಜಲಾಧಿ ದೇವತೆಯಾದ ಗಂಗಾಮಾತೆಯನ್ನು ಆರಾಧಿಸಿ, ಆಕೆಯ ಅಪ್ಪಣೆಯನ್ನು ಪಡೆದ ನಂತರವಷ್ಟೇ ಶೂಲಿನಿಯ ಪ್ರತಿಷ್ಠೆಯಾಗಿದೆ ಎನ್ನುವುದಕ್ಕೆ ಕುರುಹಾಗಿ ಈ ಗಂಗಾ ಮಾತೆಯ ವಿಗ್ರಹದ ಆರಾಧನೆ ಇಲ್ಲಿ ನಡೆಯುತ್ತಿದೆ ಎನ್ನುವ ಮಾತು ಔಚಿತ್ಯವನ್ನು ಮೀರಲಾರದು.

ಪ್ರಧಾನ ದೇವಾಲಯದ ಮುಂಭಾಗದಲ್ಲಿ, ಪಶ್ಚಿಮಾಭಿಮುಖವಾಗಿ ನಿಂತಿರುವ ಭದ್ರಕಾಳಿಯ ಗುಡಿಯಿದೆ, ಖಡ್ಗ, ಕಪಾಲ, ಡಮರು, ತ್ರಿಶೂಲಧಾರಿಯಾದ ಈಕೆ ಸಜ್ಜನರಿಗೆ ಭದ್ರೆಯಾಗಿಯೂ, ದುರ್ಜನರಿಗೆ ಕಾಳಿಯಾಗಿಯೂ ಈಪ್ಸಿತ ಫಲಪ್ರದಾಯಿನಿಯಾಗಿದ್ದಾಳೆ. ಸುಮಾರು 250 ವರ್ಷಗಳ ಐತಿಹ್ಯ/ಇತಿಹಾಸವನ್ನು ಹೊಂದಿರುವ ಈ ಗುಡಿಯ ವಿಗ್ರಹ ಆರಂಭದಲ್ಲಿ ಮರದ ವಿಗ್ರಹವೇ ಆಗಿತ್ತು. ಸರ್ಕಾರ ಮತ್ತು ಊರಿನ ಭಕ್ತಾದಿಗಳ ಸಹಾಯದಿಂದ 1980-81 ರಲ್ಲಿ ನೂತನವಾಗಿ ಜೀರ್ಣೋದ್ದಾರಗೊಂಡು, ಜೀರ್ಣಬಿಂಬವನ್ನು ವಿಸರ್ಜನೆ ಮಾಡಿ, ಕಾರ್ಕಳದ ಶ್ರೀ ಶ್ಯಾಮರಾಯ ಆಚಾರ್ಯರಿಂದ ಶಿಲೆಯಿಂದ ಕೆತ್ತಲಟ್ಟ ಮೂರ್ತಿಯನ್ನು ಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ, ಶ್ರೀ ಪೇಜಾವರ ವಿಶ್ವೇಶ ತೀರ್ಥ ಶ್ರೀ ಪಾದರ ಸಮಕ್ಷಮದಲ್ಲಿ ರೌದ್ರ ನಾಮ ಸಂವತ್ಸರದ ಮಕರ ಮಾಸ ದಿನ 7 ಸಲುವ ದಿನಾಂಕ 20-1-1981 ನೇ ಮಂಗಳವಾರ ಪ್ರತಿಷ್ಠಾಪಿಸಲಾಯಿತು. ತಸ್ಕರ ದೋಷ ಪರಿಹಾರಾರ್ಥವಾಗಿ ನಿರ್ಮಿತವಾಗಿರುವ ಈ ಗುಡಿಯಲ್ಲಿ ನಿತ್ಯಪೂಜೆ ನಡೆಯುತ್ತಿದ್ದು, ನವರಾತ್ರಿ ಸಮಯದ ಶುಕ್ರವಾರ ಹಾಗೂ ವಾರ್ಷಿಕ ಜಾತ್ರೆಯ ಸಂದರ್ಭದ ಕೊನೆಯ ದಿವಸ ವಿಶೇಷ ಪೂಜೆ ನಡೆಯುತ್ತದೆ.

ಸ್ಥಳ ಐತಿಹ್ಯ/ಇತಿಹಾಸವನ್ನು ಸಿದ್ಧಪಡಿಸುವಲ್ಲಿ ಪೌರಾಣಿಕ ಹಿನ್ನೆಲೆಗಳೂ ಕೂಡ ಸಂಶೋಧಕನಿಗೆ ಸಾಮಾಗ್ರಿಯನ್ನು ಒದಗಿಸಬಲ್ಲವು. ಈ ದೃಷ್ಟಿಯಿಂದ “ಹನಿಗೂಡಿ ಹಳ್ಳ” ಎನ್ನುವ ಮಾತಿನಂತೆ, ಈ ದೇವಾಲಯಕ್ಕೆ ಸಂಬಂಧಿಸಿದ ಪೌರಾಣಿಕ ಹಿನ್ನೆಲೆಯ ಎಳೆಯೊಂದನ್ನು ವೃದ್ಧ ಶ್ರುತ ಮತ್ತು ಈರಕೀ ಮಠ ಶ್ರೀ ಕೇಶವ ಉಪಾಧ್ಯಾಯರಿಂದ ಸಂಗ್ರಹಿಸಲ್ಪಟ್ಟಿರುವ “ ಶ್ರೀ ಸರಿದಂತರ ಕ್ಷೇತ್ರ ಮಹಾತ್ಯೆಮ್ಮ “ಈ ಕಿರು ಹೊತ್ತಗೆಯ ಆಧಾರದಿಂದ ಸಿಗುತ್ತದೆ. ದ್ವಾಪರ ಯುಗಾಂತ್ಯದಲ್ಲಿ, ಪಾಂಡವರ ಪುರೋಹಿತರಾದ ಧೌಮ್ಯ ಋಷಿಗಳು ದ್ವೆತ್ಯವನದಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ ಈ ಸ್ಥಳಕ್ಕೆ ಬಂದರು. ಆ ಕಾಲದಲ್ಲಿ ಈ ಸ್ಥಳದಲ್ಲಿದ್ದ ಸರೋವರವೊಂದರಲ್ಲಿ ಸ್ನಾನ ಮಾಡುತ್ತಾ “ಆಪಾಂ ಸ್ವರೂಪ ಸ್ಥಿತಯೇತಿ” ಎಂಬ ಪೌರಾಣಿಕ ಮಂತ್ರವನ್ನು ಉಚ್ಚರಿಸುವಾಗ ನೀರಿನೊಳಗೆ ದುರ್ಗಾಮೂರ್ತಿಯನ್ನು ನೋಡಿದರು. ಮಂತ್ರಜ್ಞರಾದ ಧೌಮ್ಯರು ಭೀಮಸೇನ, ಅರುಣಿ, ಎಂಬ ಶಿಷ್ಯರೊಂದಿಗೆ ಭಕ್ತಿವಶ್ಯಳಾದ ಆ ದುರ್ಗಾಮೂರ್ತಿಯನ್ನು ಸರೋವರದ ಮಧ್ಯದಲ್ಲಿಯೇ ಪ್ರತಿಷ್ಠೆ ಮಾಡಿದರು. ಇದರಿಂದಾಗಿ ದೇವಿಗೆ ಸರಪುರೇಶ್ವವರಿ ಎಂದು, ಊರಿಗೆ ಸರಃಪುರವೆಂದು ಹೆಸರಾಯಿತು. ಆರೆ ಗ್ರಾಮ್ಯ ಜನರಿಂದ ‘ಸರವೂರು’ ಎಂದೂ, ಕ್ರಮೇಣ ಶರವೂರು ಎಂದೂ ಕರೆಯಲ್ಪಟ್ಟಿತು. ದೌಮ್ಯ ಋಷಿಗಳು ಕೆಲವು ಕಾಲ ಇಲ್ಲಿ ತಪಸ್ಸು ಮಾಡಿ, ತಮ್ಮ ತಪಃಶಕ್ತಿಯನ್ನು ಈ ಕ್ಷೇತ್ರದಲ್ಲಿ ಧಾರೆ ಎರೆದುದರಿಂದ ಈ ಕ್ಷೇತ್ರವು ಶಕ್ತಿ ಪೀಠವೆಂದೇ ಪ್ರಸಿದ್ದವಾಯಿತು. ಯಾರು ಈ ಕ್ಷೇತ್ರದಲ್ಲಿ ಬಂದು ಈ ಶಕ್ತಿಯನ್ನು ಭಕ್ತಿಯಿಂದ ಶಕ್ತ್ಯಾನುಸಾರ ಪೂಜಿಸುತ್ತಾರೋ ಆವರು ಆಯುರಾರೋಗ್ಯ ಐಶ್ವರ್ಯಾದಿಗಳನ್ನು ಮುಕ್ತಿಯನ್ನು/ಮೋಕ್ಷವನ್ನು ಹೊಂದುತ್ತಾರೆಂಬುದು ಇಲ್ಲಿನ ಸ್ಥಳ ಮಹಿಮೆ ಸಾಕ್ಷಿ ನುಡಿಯುತ್ತದೆ.

ಕಾಲದ ಗತಿಗೆ ಸಿಲುಕಿ, ಗತ ವೈಭವವೆಲ್ಲವೂ ಭೂತಕಾಲದ ಗರ್ಭದೊಳಗೆ ಅಡಗಿ ಹೋಗಿದ್ಧರೂ, ಊರ ಹಾಗೂ ಪರವೂರ ಆಸ್ತಿಕ ಬಂಧುಗಳ ಸಹಾಯ ಹಸ್ತ ಮತ್ತು ಶ್ರದ್ಧಾ ಪೂರ್ಣ ಭಕ್ತಿಯಿಂದ ಯುಗಾದಿ, ದೀಪಾವಳಿ, ದಸರಾ, ವಾರ್ಷಿಕ ಜಾತ್ರೆ, ಹತ್ತನಾವಧಿ ಪಂಚಪರ್ವಗಳು ಅತ್ಯಂತ ವಿಜೃಂಭಣೆಯಿಂದಲೇ ನಡೆಯುತ್ತಿದೆ. ಜಾತ್ರೆಯ ಸಮಯದಲ್ಲಿ 10 ದಿವಸಗಳ ಪೈಕಿ ಮೊದಲ ಐದು ದಿನಗಳಲ್ಲಿ ವಿಶೇಷತೆಗಳೇನೂ ಇರುವುದಿಲ್ಲ. ಆದರೆ ಹಿಂದಿನ ಕಾಲದಲ್ಲಿ ಈ ದೇವಾಲಯದ ಎದುರುಗಡೆಯಿರುವ ‘ಮಾರ್ಥಾರಿ ಬೆಟ್ಟ’ದಲ್ಲಿ ಧ್ವಜಾರೋಹಣದ ಅನಂತರದ 5 ದಿನಗಳಲ್ಲಿ ದೈವಗಳ ನೇಮವು ನಡೆಯುತ್ತಿತ್ತೆಂದು ಪ್ರತೀತಿಯಿದೆ. ಈಗ ಅಂತಹ ನೇಮವು ನಡೆಯುತ್ತಿಲ್ಲವಾದರೂ ಬೆಟ್ಟದ ಮೇಲೆ ದೈವಸ್ಥಾನಗಳಿದ್ದುವು ಅನ್ನುವುದಕ್ಕೆ ಅವಶೇಷಗಳೇ ಸಾಕ್ಷಿಯಾಗಿದೆ. ಮೀನ ಸಂಕ್ರಮಣ ಮೊದಲ್ಗೊಂಡು 8ನೇ ದಿವಸ ದರ್ಶನ ಬಲಿ ಉತ್ಸವವೂ, 9ನೇ ದಿವಸ ರಥೋತ್ಸವವೂ, 10ನೇ ದಿನ ಕುಮಾರಾಧಾರಾ ನದಿಯಲ್ಲಿ ಅವಭೃತವೂ, 11ನೇ ದಿವಸ ಸಂಪ್ರೋಕ್ಷಣೆ ಹಾಗೂ ಭದ್ರಕಾಳಿ ಪೂಜೆ ನಡೆಯುತ್ತದೆ.

ಬಾಗಿಲು ತೆರೆಯುವ ಸಮಯ
07:00 AM IST – 01:00 PM IST
05:00 PM IST – 07:30 PM IST

ಬಾಗಿಲು ಮುಚ್ಚುವ ಸಮಯ
08:00 PM IST – 06:30 AM IST

ShareTweetSendShare
Join us on:

Related Posts

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

by Shwetha
November 25, 2026
0

ಮಂಗಳೂರು: ಗೌರವಧನ ಹೆಚ್ಚಳಕ್ಕಾಗಿ ಪಟ್ಟು ಹಿಡಿದು ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟದ ವಿರುದ್ಧ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಯು.ಟಿ. ಖಾದರ್...

ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ಮಹಿಳೆಯರಿಗೆ ತಲಾ ₹20,000 ನೀಡಲು ಬಿಜೆಪಿ ಯೋಜನೆ?

ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ಮಹಿಳೆಯರಿಗೆ ತಲಾ ₹20,000 ನೀಡಲು ಬಿಜೆಪಿ ಯೋಜನೆ?

by Shwetha
November 25, 2026
0

ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ, ಮಹಿಳಾ ಮತದಾರರನ್ನು ಸೆಳೆಯಲು ಹೊಸ ಆರ್ಥಿಕ ನೆರವು ಯೋಜನೆ ರೂಪಿಸುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ. ರಾಜ್ಯದ...

ದಾಳಿಗಳು ಕೇವಲ ಪ್ರಚಾರಕ್ಕಷ್ಟೇ,ಲೋಕಾಯುಕ್ತ ಸಂಸ್ಥೆಯನ್ನೇ ಅನುಪಯುಕ್ತ ಎಂದು ಟೀಕಿಸಿದ ಪ್ರಕರಣ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ನೋಟಿಸ್ ಜಾರಿ!

ದಾಳಿಗಳು ಕೇವಲ ಪ್ರಚಾರಕ್ಕಷ್ಟೇ,ಲೋಕಾಯುಕ್ತ ಸಂಸ್ಥೆಯನ್ನೇ ಅನುಪಯುಕ್ತ ಎಂದು ಟೀಕಿಸಿದ ಪ್ರಕರಣ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ನೋಟಿಸ್ ಜಾರಿ!

by Shwetha
November 25, 2026
0

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಕರ್ನಾಟಕ ಲೋಕಾಯುಕ್ತವು ಅನುಪಯುಕ್ತವಾಗಿದ್ದು, ಭ್ರಷ್ಟರ ಮೇಲಿನ ದಾಳಿಗಳ ಮೂಲಕ ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲಾಗುತ್ತಿದೆ ಎಂಬರ್ಥದ ಹೇಳಿಕೆಗಳನ್ನು ಪ್ರಸಾರ ಮಾಡಿದ ಆರೋಪದ...

ಬೆಂಗಳೂರಿನಲ್ಲೂ ‘ಸ್ಮೋಕಿಂಗ್ ಫ್ರೀ ಝೋನ್’ ಜಾರಿಗೆ ಚಿಂತನೆ; ಹೋಟೆಲ್, ಪಬ್, ಬಾರ್‌ಗಳಲ್ಲಿ ಧೂಮಪಾನ ನಿಷೇಧ ಪ್ರಸ್ತಾವನೆ

ಬೆಂಗಳೂರಿನಲ್ಲೂ ‘ಸ್ಮೋಕಿಂಗ್ ಫ್ರೀ ಝೋನ್’ ಜಾರಿಗೆ ಚಿಂತನೆ; ಹೋಟೆಲ್, ಪಬ್, ಬಾರ್‌ಗಳಲ್ಲಿ ಧೂಮಪಾನ ನಿಷೇಧ ಪ್ರಸ್ತಾವನೆ

by Shwetha
November 25, 2026
0

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಕಡಿವಾಣ ಹಾಕಿ, ಧೂಮಪಾನ ಮಾಡದವರನ್ನು ಪರೋಕ್ಷ ಧೂಮಪಾನದ ಅಪಾಯದಿಂದ ರಕ್ಷಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ 'ಸ್ಮೋಕಿಂಗ್ ಫ್ರೀ ಝೋನ್' (Smoking-Free Zone) ಜಾರಿಗೆ ತರಲು...

ಅವನ ಇಲಾಖೆಯಲ್ಲಿ ಏನು ಸಾಧನೆ ಮಾಡಿದ್ದಾನೆ ಹೇಳಲಿ- ನಾನು ಬಾಯಿ ಬಿಟ್ಟರೆ ಬಹಳಷ್ಟು ವಿಚಾರಗಳು ಆಚೆ ಬರುತ್ತವೆ ಹುಷಾರ್: ಸಚಿವ ಎಚ್.ಸಿ. ಬಾಲಕೃಷ್ಣಗೆ ಕೆ.ಎನ್. ರಾಜಣ್ಣ ಖಡಕ್ ತಿರುಗೇಟು!

ಅವನ ಇಲಾಖೆಯಲ್ಲಿ ಏನು ಸಾಧನೆ ಮಾಡಿದ್ದಾನೆ ಹೇಳಲಿ- ನಾನು ಬಾಯಿ ಬಿಟ್ಟರೆ ಬಹಳಷ್ಟು ವಿಚಾರಗಳು ಆಚೆ ಬರುತ್ತವೆ ಹುಷಾರ್: ಸಚಿವ ಎಚ್.ಸಿ. ಬಾಲಕೃಷ್ಣಗೆ ಕೆ.ಎನ್. ರಾಜಣ್ಣ ಖಡಕ್ ತಿರುಗೇಟು!

by Shwetha
November 25, 2026
0

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಸಚಿವ ಎಚ್.ಸಿ. ಬಾಲಕೃಷ್ಣ ಅವರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರಿದೆ. ಮನೆದೇವರ ಮುಂದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram