South East Central Railway Recruitment 2025 – ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ 1007 ಸ್ಥಾನಗಳ ಭರ್ಜರಿ ನೇಮಕಾತಿ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮುಖಾಂತರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ಉದ್ಯೋಗ ವಿವರಗಳು
ಇಲಾಖೆ ಹೆಸರು ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗ
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು 1007
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್
ಉದ್ಯೋಗ ಸ್ಥಳ – ಭಾರತಾದ್ಯಂತ
ವಿದ್ಯಾರ್ಹತೆ:
▪️ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ದ್ವಿತೀಯ ದರ್ಜೆಯಲ್ಲಿ 10 ನೇ ತರಗತಿ ಅಥವಾ ಸಮಾನ ಅರ್ಹತೆ ಹೊಂದಿರಬೇಕು.
▪️ ಜೊತೆಗೆ, ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (ಎನ್ ಸಿ ವಿ ಟಿ ) ಅಥವಾ ಸ್ಟೇಟ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (ಎಸ್ ಸಿ ವಿ ಟಿ) ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಟ್ರೇಡ್‌ನ ಐಟಿಐ ಪ್ರಮಾಣಪತ್ರ ಹೊಂದಿರಬೇಕು.
▪️ ಆನ್‌ಲೈನ್ ಅರ್ಜಿಯಲ್ಲಿ 10 ನೇ ತರಗತಿ ಮತ್ತು ಐಟಿಐ ಅಂಕಗಳನ್ನು ಸರಿಯಾಗಿ ನಮೂದಿಸಬೇಕು. ತಪ್ಪಾಗಿ ನಮೂದಿಸಿದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.
▪️ಹೆಚ್ಚಿನ ವಿದ್ಯಾರ್ಹತೆಗಳ ಮಾಹಿತಿಯನ್ನು ನಮೂದಿಸಬಾರದು.
ವಯೋಮಿತಿ
▪️ ಕನಿಷ್ಠ ವಯಸ್ಸು: 15 ವರ್ಷ
▪️ ಗರಿಷ್ಠ ವಯಸ್ಸು: 24 ವರ್ಷ
ವಯೋಮಿತಿಯಲ್ಲಿ ಸಡಿಲಿಕೆ:
▪️ ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ
▪️ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷಗಳ ಸಡಿಲಿಕೆ
▪️ ಮಾಜಿ ಸೈನಿಕರು/ಅಂಗವಿಕಲ ಅಭ್ಯರ್ಥಿಗಳಿಗೆ: 10 ವರ್ಷಗಳ ಸಡಿಲಿಕೆ
ವೇತನಶ್ರೇಣಿ
▪️ ಆಯ್ಕೆಯಾದ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಪ್ರತಿದಿನದ ತರಬೇತಿಯ ಅವಧಿಗೆ ರೂ. 7,700 ರಿಂದ 8,050ವರೆಗೆ ಸ್ಟೈಪೆಂಡ್ (Stipend) ನೀಡಲಾಗುತ್ತದೆ.
ಆಯ್ಕೆ ವಿಧಾನ
▪️ Merit List: ಅಭ್ಯರ್ಥಿಗಳ 10ನೇ ತರಗತಿ ಹಾಗೂ ITI ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.
▪️ ಮೆಡಿಕಲ್ ಪರೀಕ್ಷೆ: ಆಯ್ಕೆಯಾದ ಅಭ್ಯರ್ಥಿಗಳು ರೈಲ್ವೆ ಮಾನದಂಡಗಳಿಗೆ ಅನುಗುಣವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು.
ಪ್ರಮುಖ ದಿನಾಂಕಗಳು:
▪️ ಅಧಿಸೂಚನೆ ಬಿಡುಗಡೆಯ ದಿನಾಂಕ: 01 ಏಪ್ರಿಲ್ 2025
▪️ ಆನ್‌ಲೈನ್ ಅರ್ಜಿ ಪ್ರಾರಂಭದ ದಿನಾಂಕ: 05 ಏಪ್ರಿಲ್ 2025
▪️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04 ಮೇ 2025








