ಭಾರತ ಕೊನೆಗೂ ಉಗ್ರರ ವಿರುದ್ಧದ ಸೇಡು ತೀರಿಸಿಕೊಂಡಿದ್ದು, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ತೀವ್ರವಾದ ವಾಯುದಾಳಿ ನಡೆಸಿದೆ. ಕೇವಲ 23 ನಿಮಿಷಗಳೊಳಗೆ ನಡೆದ ಈ ಸರ್ಜಿಕಲ್ ಸ್ಟ್ರೈಕ್‌ನಿಂದಾಗಿ ಸುಮಾರು 80 ರಿಂದ 90 ಉಗ್ರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂಬುದಾಗಿ ಮೂಲಗಳು ತಿಳಿಸುತ್ತಿವೆ.
ವಿಶೇಷವಾಗಿ, ಜೈಷ್-ಎ-ಮೊಹಮ್ಮದ್ ಸಂಘಟನೆಯ ಪ್ರಮುಖ ಶಿಬಿರಗಳಾಗಿರುವ ಬಹಾವಲ್ಪುರ್ ಮತ್ತು ಮುರಿದ್ರೆ ಪ್ರದೇಶಗಳಲ್ಲಿ ಈ ದಾಳಿ ನಡೆದಿದ್ದು, ಇವುಗಳಲ್ಲಿ ತಲಾ 25-30 ಉಗ್ರರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಈ ಶಿಬಿರಗಳು ಬಹುತೇಕ ಉಗ್ರ ಕಾರ್ಯಾಚರಣೆಯ ಕೇಂದ್ರಗಳಾಗಿ ಪರಿಣಮಿಸಿದ್ದವು.
ಭಾರತೀಯ ಸೇನೆಯು ಅತ್ಯಂತ ನಿಖರತೆ ಮತ್ತು ಶಕ್ತಿಯಿಂದ ಈ ದಾಳಿಯನ್ನು ನಡೆಸಿದ್ದು, ಉಗ್ರರ ಪ್ರಮುಖ ಅಡಗುತಾಣಗಳನ್ನು ಗುರಿಯಾಗಿಸಿದೆ. ಪಾಕಿಸ್ತಾನದ ಗಡಿ ಭಾಗ ಹಾಗೂ ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಭಾಗಗಳಲ್ಲಿ ನಡೆದ ಈ ದಾಳಿಯಿಂದ ಉಗ್ರ ಸಂಘಟನೆಗಳು ಭಾರೀ ಹಿನ್ನಡೆ ಅನುಭವಿಸಿವೆ.
ಭದ್ರತಾ ಸಂಸ್ಥೆಗಳ ಮೂಲಗಳ ಪ್ರಕಾರ, ಇನ್ನೂ ಕೆಲವು ಶಿಬಿರಗಳಲ್ಲಿ ಉಗ್ರರ ಸಾವಿನ ಪ್ರಮಾಣವನ್ನು ದೃಢಪಡಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಭಾರತೀಯ ಗುಪ್ತಚರ ಸಂಸ್ಥೆಗಳ ನಿಖರ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆಯಿದ್ದು, ಇದು ಭವಿಷ್ಯದಲ್ಲೂ ಇದೇ ರೀತಿಯ ದಾಳಿಗಳಿಗೆ ಮಾದರಿಯಾಗಬಹುದು.
ಇಂತಹ ದಾಳಿಯಿಂದ ಅಮಾಯಕರ ಜೀವ ಹಾಳುಮಾಡಿದ ಉಗ್ರರ ವಿರುದ್ಧ ಭಾರತೀಯ ಸೇನೆ ಸೇಡು ತೀರಿಸಿದ್ದು ಮಾತ್ರವಲ್ಲ, ಇದು ದೇಶದ ಭದ್ರತೆಗಾಗಿ ನಿರ್ದಿಷ್ಟ ಸಂದೇಶವನ್ನೂ ನೀಡಿದೆ.








