ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ನಡಿ ನಡೆಸಿದ ಭಯೋತ್ಪಾದಕರ ಶಿಬಿರಗಳ ಮೇಲೆ ವೈಮಾನಿಕ ದಾಳಿಯಿಂದ ಪಾಕ್ ಆಕ್ರಮಿತ ಕಾಶ್ಮೀರ (PoK)ನಲ್ಲಿ ಭಾರಿ ಹಾನಿ ಸಂಭವಿಸಿತ್ತು. ಈ ದಾಳಿಯಲ್ಲಿ ಹಲವು ಉಗ್ರರ ಶಿಬಿರಗಳು ನಾಶವಾಗಿದ್ದು, ಉಗ್ರ ಸಂಘಟನೆಗಳಿಗೆ ತೊಂದರೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಸರ್ಕಾರ ಇದೀಗ PoK ಪ್ರದೇಶದ ಹಾನಿಗೀಡಾದ ಪ್ರದೇಶಗಳಿಗೆ ಹಾಗೂ ಗಾಯಾಳು ಉಗ್ರರ ಕುಟುಂಬಗಳಿಗೆ ಹಣ ಬಿಡುಗಡೆ ಮಾಡಿದೆ.
ಪಾಕ್ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ
ಪಾಕಿಸ್ತಾನ ಸರ್ಕಾರ PoK ಪ್ರದೇಶದ ಪುನರ್ವಸತಿಗೆ ಹಾಗೂ ದಾಳಿಯಲ್ಲಿ ಮೃತಪಟ್ಟ ಉಗ್ರರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಮೂಲಗಳ ಪ್ರಕಾರ, ಈ ಪ್ಯಾಕೇಜ್ ಅಡಿ ಮೃತ ಉಗ್ರರ ಕುಟುಂಬಗಳಿಗೆ ನಗದು ಪರಿಹಾರ, ಮನೆ ಮರುನಿರ್ಮಾಣಕ್ಕೆ ಹಣ ಹಾಗೂ ವೈದ್ಯಕೀಯ ನೆರವು ನೀಡಲಾಗುತ್ತಿದೆ.
ಉಗ್ರರ ಕುಟುಂಬಗಳಿಗೆ ಸಹಾನುಭೂತಿಯ ನಾಟಕ
ಭಾರತೀಯ ಸೇನೆಯ ದಾಳಿಯಿಂದ ಭಾರೀ ಹಾನಿಗೆ ಒಳಗಾದ ನಂತರ, ಪಾಕಿಸ್ತಾನ PoKನಲ್ಲಿ ಭಾರತೀಯ ಸೇನೆಯ ವಿರುದ್ಧ ಸಾರ್ವಜನಿಕ ಆಕ್ರೋಶ ಹುಟ್ಟುಹಾಕಲು ಉಗ್ರರ ಕುಟುಂಬಗಳಿಗೆ ‘ಮಾನವೀಯ ನೆರವು’ ಎಂಬ ಹೆಸರಿನಲ್ಲಿ ಹಣ ನೀಡುತ್ತಿದೆ. ಈ ಮೂಲಕ ಉಗ್ರರ ಚಟುವಟಿಕೆಗಳಿಗೆ ಪಾಕಿಸ್ತಾನ ಸರ್ಕಾರವೇ ಬೆಂಬಲ ನೀಡುತ್ತಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಭಾರತೀಯ ಸೇನೆಯ ಕಠಿಣ ಸಂದೇಶ
ಈ ನಡುವೆ ಭಾರತೀಯ ಸೇನೆಯ ಮೂಲಗಳು ಈ ಪ್ಯಾಕೇಜ್ ಕುರಿತು ಪ್ರತಿಕ್ರಿಯೆ ನೀಡಿದ್ದು, ಭಯೋತ್ಪಾದನೆಗೆ ಆಶ್ರಯ ನೀಡುವ ಪಾಕ್ಗೆ ಇದು ಇನ್ನಷ್ಟು ದುಃಖದ ದಿನಗಳ ಆರಂಭ. ಯಾವುದೇ ರೀತಿಯ ಬೆಂಬಲದಿಂದ ಉಗ್ರರನ್ನು ರಕ್ಷಿಸಲು ಸಾಧ್ಯವಿಲ್ಲ. ಭಾರತೀಯ ಸೇನೆ ಸದಾ ತಯಾರಾಗಿದೆ, ಎಂದು ಸ್ಪಷ್ಟಪಡಿಸಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ತೀವ್ರ ಟೀಕೆ
PoKಗೆ ಈ ರೀತಿಯ ಹಣ ಬಿಡುಗಡೆ, ಉಗ್ರರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ತೀವ್ರ ಟೀಕೆಗೆ ಒಳಪಡಿಸಿದೆ. ಭಯೋತ್ಪಾದನೆ ವಿರೋಧಿ ನೀತಿ ಕೈಗೆತ್ತಿಕೊಳ್ಳಬೇಕಾದ ಸರ್ಕಾರ, ಇಂತಹ ಕ್ರಮದಿಂದ ಉಗ್ರತೆಗೆ ಬೆಂಬಲ ನೀಡುತ್ತಿರುವುದಾಗಿ ಹೇಳಲಾಗುತ್ತಿದೆ.








