ADVERTISEMENT
Sunday, August 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ಅನ್‌ಸೋಲ್ಡ್‌ ಟು ಅನ್‌ಸಂಗ್‌ ಹೀರೋ..!

Unsold to Unsung Hero..!

Shwetha by Shwetha
June 5, 2025
in ಕ್ರಿಕೆಟ್, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಅದೃಷ್ಟ ಕೆಲವೊಂದು ಬಾರಿ ಬೆನ್ನ ಹಿಂದಿದ್ರೂ ಗೊತ್ತಾಗಲ್ಲ… ಹಾಗೇ ರಜತ್ ಪಟೀದಾರ್ ಕೂಡ ಕನಸಿನಲ್ಲೂ ಆರ್‌ಸಿಬಿಯ ನಾಯಕನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಅಷ್ಟೇ ಯಾಕೆ, ಕ್ಯಾಪ್ಟನ್ ಆಗಿ ಐಪಿಎಲ್ ಟ್ರೋಪಿ ಎತ್ತಿ ಹಿಡಿಯುತ್ತೇನೆ ಎಂಬ ಭ್ರಮೆಯಲ್ಲೂ ಇರಲಿಲ್ಲ. ಯಾಕಂದ್ರೆ ಕಳೆದ ನಾಲ್ಕು ವರ್ಷಗಳಲ್ಲಿ ರಜತ್‍ಗೆ ಆಗಿದ್ದು ಎಲ್ಲವೂ ಅನಿರೀಕ್ಷಿತ.. ಆಕಸ್ಮಿಕ.. ಆಶ್ಚರ್ಯ..ಅನುಭೂತಿ..!

ಹಾಗೇ ನೋಡಿದ್ರೆ ರಜತ್ ಪಟೀದಾರ್ ಆರ್‌ಸಿಬಿಗೆ ಎಂಟ್ರಿಯಾಗಿದ್ದೇ ಅನಿರೀಕ್ಷಿತ. 2021ರಲ್ಲಿ 20 ಲಕ್ಷ ಮೂಲ ಬೆಲೆಗೆ ಆರ್‌ಸಿಬಿಯ ಡಗೌಟ್ ಸೇರಿಕೊಂಡಿದ್ರು ರಜತ್‌. ಮೊದಲ ಸೀಸನ್‍ನಲ್ಲಿ 4 ಪಂದ್ಯಗಳಲ್ಲಿ 71 ರನ್ ಪೇರಿಸಿದ್ದಷ್ಟೇ. ಆದ್ರೆ ಆರ್‌ಸಿಬಿ ಮುಂದಿನ ಸೀಸನ್‍ಗೆ ಪಟೀದಾರ್‌ನ ರಿಟೇನ್ ಮಾಡಲು ಮನಸ್ಸು ಮಾಡಲಿಲ್ಲ. ಆದ್ರೂ ಹರಾಜಿನಲ್ಲಿ ಖರೀದಿ ಮಾಡುವ ಭರವಸೆ ನೀಡಿತ್ತು. ಆದ್ರೆ ಹರಾಜಿನಲ್ಲಿ ರಜತ್‌ನ ಖರೀದಿ ಮಾಡದೇ ಮಾತಿಗೆ ತಪ್ಪಿತ್ತು. ಈ ಬಿಡ್ಡಿಂಗ್‌ನಲ್ಲಿ ರಜತ್ ಪಟೀದಾರ್ ಹೆಸರಿನ ಮೇಲೆ ಅನ್‍ಸೋಲ್ಡ್ ಸೀಲ್ ಕೂಡ ಬಿತ್ತು.

Related posts

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

August 30, 2026
‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಾಲ್ಮೀಕಿ ನಿಗಮ ಹಗರಣ: ‘ಬಿ. ನಾಗೇಂದ್ರರನ್ನು ಬಿಜೆಪಿ ಷಡ್ಯಂತ್ರದಿಂದ ಗುರಿಯಾಗಿಸಿದೆ’ ಎಂದ BK ಹರಿಪ್ರಸಾದ್

August 30, 2026

ಇದು ರಜತ್ ಪಟೀದಾರ್‌ ಮನಸ್ಸನ್ನು ಘಾಸಿಗೊಳಿಸಿತ್ತು. ಇನ್ಯಾವತ್ತೂ ಆರ್‌ಸಿಬಿ ಪರ ಆಡಬಾರದು ಎಂಬ ಕಠಿಣ ನಿಲುವನ್ನು ಮನಸ್ಸಿನಲ್ಲೇ ತೆಗೆದುಕೊಂಡಿದ್ದ ಪಟೀದಾರ್‌. ಐಪಿಎಲ್ ಟೂರ್ನಿಯಲ್ಲಿ ಆಡುವ ಅವಕಾಶ ಕೈ ತಪ್ಪಿರುವ ನಿರಾಸೆಯ ನಡುವೆಯೇ ಮದುವೆಯಾಗಲು ರೆಡಿಯಾಗಿದ್ದ. ಅಷ್ಟರಲ್ಲೇ ಆಕಸ್ಮಿಕವಾಗಿ ಆರ್‌ಸಿಬಿ ಮ್ಯಾನೇಜ್‍ಮೆಂಟ್‍ನಿಂದ ಕರೆ ಬಂತು. ಲುನ್ವಿತ್ ಸಿಸೋಡಿಯಾ ಗಾಯಗೊಂಡಿದ್ದಾನೆ, ಆತನ ಸ್ಥಾನಕ್ಕೆ ನಿನ್ನನ್ನು ಆಯ್ಕೆ ಮಾಡಿದ್ದೇವೆ ಎಂದು ಆರ್‌ಸಿಬಿ ಮ್ಯಾನೇಜ್‍ಮೆಂಟ್ ಹೇಳಿದಾಗ ರಜತ್ ಹಿಂದೆ ಮುಂದೆ ನೋಡದೇ ಸರಿ ಅಂದುಬಿಟ್ಟ. ಅಷ್ಟೇ ಅಲ್ಲ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿದ್ದ.

ಯಾಕಂದ್ರೆ ಐಪಿಎಲ್‍ನಲ್ಲಿ ಆರ್‌ಸಿಬಿ ತಂಡದಲ್ಲಿರುವುದೇ ದೊಡ್ಡ ವಿಷಯ. ಪ್ರತಿಯೊಬ್ಬ ಯುವ ಕ್ರಿಕೆಟಿಗನಿಗೆ ಆರ್‌ಸಿಬಿ ಪರ ಆಡಬೇಕು ಎಂಬ ತುಡಿತವಿರುತ್ತದೆ. ಹೀಗಾಗಿಯೇ ಈ ಅವಕಾಶವನ್ನು ರಜತ್ ಸರಿಯಾಗಿಯೇ ಬಳಸಿಕೊಂಡ. ಲಕ್ನೋ ವಿರುದ್ಧ ಸ್ಫೋಟಕ ಶತಕ ಸಿಡಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡ. ಆಡಿರುವ 8 ಪಂದ್ಯಗಳಲ್ಲಿ 333 ರನ್ ದಾಖಲಿಸಿದ್ದ. ಆದ್ರೆ ದುರಾದೃಷ್ಟವೆಂದ್ರೆ 2023ರ ಐಪಿಎಲ್‍ನಲ್ಲಿ ಗಾಯದ ಕಾರಣ ಟೂರ್ನಿಯಿಂದಲೇ ದೂರ ಉಳಿದುಕೊಳ್ಳಬೇಕಾಯ್ತು.

ಬಳಿಕ 2024ರ ಸೀಸನ್‌ಗೆ ಎಂಟ್ರಿ ಕೊಟ್ಟ ಪಟೀದಾರ್‌ 15 ಪಂದ್ಯಗಳಲ್ಲಿ ಐದು ಅರ್ಧಶತಕಗಳ ಸಹಾಯದಿಂದ 395 ರನ್ ಗಳಿಸಿ ಆರ್‌ಸಿಬಿ ತಂಡದಲ್ಲಿ ಸ್ಥಾನವನ್ನು ಗಟ್ಟಿ ಮಾಡಿಕೊಂಡ. ವಿಶೇಷ ಅಂದ್ರೆ 2021 ರಿಂದ 2024 ರವರಗೆ ಪ್ರತಿ ಸೀಸನ್‍ನಲ್ಲಿ ಪಟೀದಾರ್ ಪಡೆದುಕೊಂಡ ಸಂಭಾವನೆ ಕೇವಲ 20 ಲಕ್ಷ ರೂಪಾಯಿ ಅಷ್ಟೇ..!
ಆದ್ರೆ 2025ರಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಪಟೀದಾರ್‌ಗೆ 11 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಮುಂದೆ ಆರ್‌ಸಿಬಿ ನಾಯಕನನ್ನಾಗಿ ಘೋಷಣೆ ಮಾಡಿದಾಗ ಆಶ್ಚರ್ಯಚಕಿತರಾಗಿದ್ದರು. ಆದ್ರೆ ಆರ್‌ಸಿಬಿ ಮ್ಯಾನೇಜ್‍ಮೆಂಟ್‍ಗೆ ಈ ಹುಡುಗನ ಸಾಮರ್ಥ್ಯದ ಬಗ್ಗೆ ಭರವಸೆಯನ್ನಿಟ್ಟುಕೊಂಡಿತ್ತು. ಕೋಚ್‌ ಆಂಡಿ ಫ್ಲವರ್ ಮತ್ತು ಮೆಂಟರ್‌ ದಿನೇಶ್ ಕಾರ್ತಿಕ್, ರಜತ್‍ಗೆ ಮಾರ್ಗದರ್ಶನ ನೀಡಿದ್ರು. ಇದರ ಪರಿಣಾಮ ರಜತ್‌ ಕೂಲ್ ಆಗಿಯೇ ತಂಡವನ್ನು ಮುನ್ನಡೆಸಿಕೊಂಡು ಹೋದ. ಸೋಲು, ಗೆಲುವಿನ ಮೆಟ್ಟಿಲು ಹತ್ತಿಕೊಂಡು ಹೋಗುವಾಗ ನಾನಾ ಟೀಕೆಗಳು ಎದುರಾಗಿದ್ದವು. ಯಾಕಂದ್ರೆ ರಜತ್ ಪಟೀದಾರ್ ಮುನ್ನಡೆಸುತ್ತಿರುವುದು ವಿಶ್ವ ಕ್ರಿಕೆಟ್‍ನ ಕೋಟ್ಯಂತರ ಅಭಿಮಾನಿಗಳ ಉಸಿರಾಗಿರುವ ತಂಡವನ್ನು. ಹೀಗಾಗಿ ರಜತ್‍ನ ಪ್ರತಿ ಹೆಜ್ಜೆಯನ್ನಿಡುವಾಗಲೂ ಎಚ್ಚರಿಕೆಯಿಂದಿರಬೇಕಿತ್ತು.

ಅದರಲ್ಲೂ 18 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಬೇಕಾಗಿತ್ತು. ಜೊತೆಗೆ ವಿರಾಟ್‍ಗೋಸ್ಕರ ಈ ಬಾರಿ ಕಪ್ ಗೆಲ್ಲಲೇಬೇಕು ಎಂಬ ಹಠ ಇಡೀ ಆರ್‌ಸಿಬಿ ತಂಡದಲ್ಲಿತ್ತು. ಕಳೆದ 17 ವರ್ಷಗಳಿಂದ ಗೆಲುವಿನ ಗೋಪುರಕ್ಕೆ ಐಪಿಎಲ್ ಟ್ರೋಫಿಯ ಮುಕುಟವನ್ನಿಡಲು ಹೆಣಗಾಡುತ್ತಿತ್ತು. ಸುಮಾರು 14 ವರ್ಷ ಫೌಂಡೇಶನ್‌, ಗೋಡೆ ಕಟ್ಟುವ ಹಂತದಲ್ಲಿ ಕುಸಿದು ಬೀಳುತ್ತಿತ್ತು. ಇನ್ನು ಮೂರು ಬಾರಿ ಗೋಪುರಕ್ಕೆ ಮುಕುಟವನ್ನಿಡಲು ಹೋದಾಗ ಜಾರಿಬೀಳಬೇಕಾಯ್ತು.

ಆದ್ರೆ ಈ ಬಾರಿ ಹಾಗಾಗಲಿಲ್ಲ. ಗೋಡೆ ಕಟ್ಟುವ ಹಂತದಲ್ಲಿ ಜಾರಿಬಿದ್ರೂ ಅದನ್ನು ಸರಿಪಡಿಸಿಕೊಂಡ ಆರ್‌ಸಿಬಿಯ ಮೇಸ್ತ್ರಿ ರಜತ್ ಪಟೀದಾರ್, ಆರ್‌ಸಿಬಿಯ ಗೆಲುವಿನ ಗೋಪುರದಲ್ಲಿ ಐಪಿಎಲ್ ಟ್ರೋಫಿಯ ಮುಕುಟ ಇದ್ದೇ ಇರುತ್ತೆ ಎಂಬ ವಿಶ್ವಾಸದಲ್ಲಿದ್ದರು. ಗೋಪುರ ಕಟ್ಟುವ ವೇಳೆ ಅಂದ್ರೆ ಕ್ವಾಲಿಫೈಯರ್ ಮತ್ತು ಫೈನಲ್‍ನಲ್ಲಿ ಲಯಬದ್ಧವಾಗಿ ಆಡಿ ಕೊನೆಗೂ ಆರ್‌ಸಿಬಿಯ ಗೆಲುವಿನ ಗೋಪುರದಲ್ಲಿ ಐಪಿಎಲ್ ಟ್ರೋಫಿ ಹೊಳೆಯುವಂತೆ ಮಾಡಿದ್ದು ರಜತ್ ಪಟೀದಾರ್. ಅಂದು ಅನ್‌ಸೋಲ್ಡ್ ಪ್ಲೇಯರ್.. ಇಂದು ಅನ್‍ಸಂಗ್ ಹೀರೋ..! ಇದು ದಿವ್ಯಾನುಭೂತಿ ಅಲ್ಲದೆ ಮತ್ತೇನು..?

ಸನತ್‌ ರೈ

ShareTweetSendShare
Join us on:

Related Posts

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

by Shwetha
August 30, 2026
0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕಿಚ್ಚು ರಾಜ್ಯ ರಾಜಕಾರಣದಲ್ಲಿ ಇನ್ನೂ ಆರಿಲ್ಲ. ಇದರ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ಎರಡನೇ...

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಾಲ್ಮೀಕಿ ನಿಗಮ ಹಗರಣ: ‘ಬಿ. ನಾಗೇಂದ್ರರನ್ನು ಬಿಜೆಪಿ ಷಡ್ಯಂತ್ರದಿಂದ ಗುರಿಯಾಗಿಸಿದೆ’ ಎಂದ BK ಹರಿಪ್ರಸಾದ್

by Shwetha
August 30, 2026
0

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರ ಇದೀಗ ರಾಜ್ಯ...

ಟಾಟಾ ಸನ್ಸ್–SP ಗ್ರೂಪ್ ಉದ್ವಿಗ್ನತೆ ಅಂತಿಮ ಹಂತಕ್ಕೆ?; 18.4% ಪಾಲು ಮಾರಾಟಕ್ಕೆ ಮಾತುಕತೆ

ಟಾಟಾ ಸನ್ಸ್–SP ಗ್ರೂಪ್ ಉದ್ವಿಗ್ನತೆ ಅಂತಿಮ ಹಂತಕ್ಕೆ?; 18.4% ಪಾಲು ಮಾರಾಟಕ್ಕೆ ಮಾತುಕತೆ

by Shwetha
August 30, 2026
0

ಭಾರತೀಯ ಕಾರ್ಪೊರೇಟ್ ವಲಯದಲ್ಲಿ ದಶಕಗಳಿಂದ ಕುತೂಹಲ ಮೂಡಿಸಿರುವ ಟಾಟಾ ಸನ್ಸ್ ಮತ್ತು ಶಾಪೂರ್ಜಿ ಪಲ್ಲೊಂಜಿ (SP) ಗ್ರೂಪ್ ನಡುವಿನ ಸಂಬಂಧದ ಬಿಕ್ಕಟ್ಟು ಇದೀಗ ಮತ್ತೊಂದು ಪ್ರಮುಖ ಹಂತ...

ಮೋದಿ ಸರ್ಕಾರದ ಒತ್ತಡದಿಂದ ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಪ್ರಕಟಣೆಗೆ ತಡೆ? ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದ ಕಾಂಗ್ರೆಸ್

ಮೋದಿ ಸರ್ಕಾರದ ಒತ್ತಡದಿಂದ ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಪ್ರಕಟಣೆಗೆ ತಡೆ? ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದ ಕಾಂಗ್ರೆಸ್

by Shwetha
August 30, 2026
0

ಯುಪಿಎ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಜೀವನ ಪಯಣವನ್ನು ಅನಾವರಣಗೊಳಿಸುವ Belonging: A Journey of Love ಎಂಬ ಆತ್ಮಚರಿತ್ರೆ ಈಗ...

ಬ್ರಿಟಿಷರಿಗೇ ಹೆದರದ ನಮಗೆ ಈ ಬಿಜೆಪಿಗರು ಯಾವ ಪುಟ್ಗೋಸಿ? ಬಿಜೆಪಿ ಒಂದು ನಾಟಕ ಕಂಪನಿ, ಇವರ ಪಾದಯಾತ್ರೆ ಗಣಿ ಲೂಟಿಕೋರರ ಪಶ್ಚಾತ್ತಾಪ ಯಾತ್ರೆ: ಶಿವರಾಜ್ ತಂಗಡಗಿ ವ್ಯಂಗ್ಯ

ಬ್ರಿಟಿಷರಿಗೇ ಹೆದರದ ನಮಗೆ ಈ ಬಿಜೆಪಿಗರು ಯಾವ ಪುಟ್ಗೋಸಿ? ಬಿಜೆಪಿ ಒಂದು ನಾಟಕ ಕಂಪನಿ, ಇವರ ಪಾದಯಾತ್ರೆ ಗಣಿ ಲೂಟಿಕೋರರ ಪಶ್ಚಾತ್ತಾಪ ಯಾತ್ರೆ: ಶಿವರಾಜ್ ತಂಗಡಗಿ ವ್ಯಂಗ್ಯ

by Shwetha
August 30, 2026
0

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಬೆನ್ನಿಗೆ ನಿಂತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಬಿಜೆಪಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram