ಆಸ್ಟ್ರೇಲಿಯಾ ಸರಣಿ ವಿರಾಟ್ ಕೊಹ್ಲಿಗೆ ಅಗ್ನಿಪರೀಕ್ಷೆ – ಸೌರವ್ ಗಂಗೂಲಿ
ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಕ್ರಿಕೆಟ್ ಬದುಕಿನ ಮಹತ್ವದ ಸರಣಿಯಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಮುಂದಿನ ಡಿಸೆಂಬರ್ ನಂತರ ನಾನು ಬಿಸಿಸಿಐ ಅಧ್ಯಕ್ಷನಾಗಿ ಮುಂದುವರಿಯುತ್ತೇನೋ ಇಲ್ಲವೋ ಗೊತ್ತಿಲ್ಲ. ಆದ್ರೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಐತಿಹಾಸಿಕ ಸರಣಿಯಾಗಲಿದೆ. ಅಲ್ಲದೆ ಇದು ವಿರಾಟ್ ಕೊಹ್ಲಿಯ ಕ್ರಿಕೆಟ್ ಬದುಕನ್ನು ನಿರ್ಧರಿಸುವ ಸರಣಿಯಾಗಲಿದೆ ಎಂದು ಗಂಗೂಲಿ ತಿಳಿಸಿದ್ದಾರೆ.
ನಾನು ವಿರಾಟ್ ಕೊಹ್ಲಿ ಜೊತೆ ಸಂಪರ್ಕದಲ್ಲಿದ್ದೇನೆ. ಫಿಟ್ನೆಸ್ ಬಗ್ಗೆ ವಿರಾಟ್ ಕೊಹ್ಲಿ ಚರ್ಚಿಸಿದ್ದೇನೆ. ಕಳೆದ ಆರು ತಿಂಗಳುಗಳಿಂದ ಕ್ರಿಕೆಟ್ ಆಡಿಲ್ಲ. ಫಿಟ್ನೆಸ್ ಕಾಯ್ದುಕೊಳ್ಳಬೇಕು. ಅದೇ ರೀತಿ ವೇಗಿಗಳಾದ ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ಸೇರಿದಂತೆ ತಂಡದ ಅತ್ಯುತ್ತಮ ಬೌಲರ್ಗಳು ಸರಣಿಗೆ ಫಿಟ್ ಆಗಿದ್ದಾರೋ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಗಂಗೂಲಿ ವಿರಾಟ್ ಕೊಹ್ಲಿಗೆ ಸಲಹೆಯನ್ನು ನೀಡಿದ್ದಾರೆ.
ಕೊವೀಡ್-19 ಸೋಂಕಿನ ನಡುವೆಯೂ ಬಿಸಿಸಿಐ ಕಾರ್ಯನಿರ್ವಹಿಸುತ್ತಿದೆ. ಹಾಗೇ ತಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಗಂಗೂಲಿ ಮಾತನಾಡಿದ್ರು. ಕಳೆದ ನಾಲ್ಕು ತಿಂಗಳುಗಳಿಂದ ಮುಂಬೈ ಕಚೇರಿಗೆ ಹೋಗಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕವೇ ಕೆಲಸ ಮಾಡುತ್ತಿದ್ದೇವೆ. ಹಾಗಂತ ನಾನು ಬದಲಾಯಿಸಲು ಸಾಧ್ಯವಿಲ್ಲ. ನನ್ನ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದೇನೆ ಎಂದ ಗಂಗೂಲಿ ಅವರು, ಮುಂದಿನ ಡಿಸೆಂಬರ್ ನಂತರ ಬಿಸಿಸಿಐ ಅಧ್ಯಕ್ಷರ ಅವಧಿ ವಿಸ್ತರಣೆಗೊಳ್ಳುವುದರ ಬಗ್ಗೆ ಸ್ಪಷ್ಟವಾಗಿ ಏನನ್ನು ಹೇಳಲಿಲ್ಲ. ಮುಂದೆ ನೋಡೋಣ ಎಂದು ಹೇಳಿದ್ರು.
ಇನ್ನು ಮುಂದಿನ ಡಿಸೆಂಬರ್ ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತದೆ. ಪ್ರವಾಸದ ವೇಳೆ ಕ್ವಾರೈಂಟೆನ್ ನಿಯಮಗಳನ್ನು ಸ್ವಲ್ಪ ಮಟ್ಟಿಗೆ ಸಡಿಲ ಮಾಡಬೇಕಾಗುತ್ತದೆ. ಅದೇ ರೀತಿ ಅಸ್ಟ್ರೇಲಿಯಾ ಪ್ರವಾಸವನ್ನು ಟೀಮ್ ಇಂಡಿಯಾವನ್ನು ಕೈಗೊಳ್ಳುವುದು ಪಕ್ಕಾ ಎಂದು ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.
ಒಂದೇ ದಿನ 17 ವಿಕೆಟ್ ಪತನ!!
ಚೆನ್ನೈ: ಭಾರತ (Team India), ಬಾಂಗ್ಲಾದೇಶದ (Bangladesh) ಮಧ್ಯೆ ಮೊದಲ ಟೆಸ್ಟ್ ನ (Test Cricket) ಎರಡನೇ ದಿನ ಬರೋಬ್ಬರಿ 17 ವಿಕೆಟ್ ಪತನವಾಗಿವೆ. ಈ ವಿಕೆಟ್...