ಅವರದ್ದು ಶಾಸಕರ ಮಾತುಗಳಲ್ಲ, ಅಶ್ಲೀಲ ಅಣಕಗಳ ಮೇಳ. ರವಿಕುಮಾರ್ ನಾಡಿನ ಪ್ರತಿನಿಧಿಯಾಗಿರೋದು ನಾಚಿಕೆಯ ವಿಷಯ. ಅವರು ಸದನದಲ್ಲಿರಬೇಕಾದವರಲ್ಲ.. ನೇರವಾಗಿ ‘ನಿಮ್ಮಾನ್ಸ್’ (ಮಾನಸಿಕ ಆರೈಕೆ ಕೇಂದ್ರ) ಗೆ ಹೋಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾತಿನ ಚಾಟಿ ಬೀಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, N.ರವಿಕುಮಾರ್ ಮೂಲತಃ ಬಿಜೆಪಿಯವರು ಅಲ್ಲ. ಅವರು RSS ಶಾಖೆಯಿಂದ ಬಂದವರು. ತಮ್ಮ ಬಾಯಿ ಚಪಲಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.. ಎಂದು ಟೀಕಿಸಿದರು.
ಈ ಹಿಂದೆ ಕಲಬುರ್ಗಿ ಜಿಲ್ಲಾಧಿಕಾರಿಗಳ ವಿರುದ್ಧವೂ ರವಿಕುಮಾರ್ ಅಶ್ಲೀಲ ಶಬ್ದಗಳನ್ನು ಬಳಸಿದ್ದು, ಆಡಳಿತ ವ್ಯವಸ್ಥೆ ಹಾಗೂ ಸಾರ್ವಜನಿಕ ಸೇವೆಗಳ ಮೇಲೆಯೂ ಗಂಭೀರ ಪ್ರಶ್ನೆ ಮೂಡಿಸಿದೆ.
ಅವರು ಅಶ್ಲೀಲವಾಗಿ ಮಾತನಾಡಿದ್ದಕ್ಕೆ ವಿಡಿಯೋ ಸಾಕ್ಷಿಯಿದೆ. ಈಗ ರವಿಕುಮಾರ್ ನೇಣು ಹಾಕಿಕೊಳ್ಳಲಿ ಎಂದು ಖರ್ಗೆ ಕಿಡಿಕಾರಿದ್ರು.








